ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
 

ಕಾರ್ಯಕ್ರಮಗಳು

Beary Sahitya Academy
 • ವಿಷಯ : “ದ್ವೈವಾರ್ಷಿಕ ಕಾರ್ಯಕ್ರಮಗಳ ಅವಲೋಕನ”ದ ವರದಿ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2016 ಆಗಸ್ಟ್ 13ರ ಶನಿವಾರದಂದು ಅಪರಾಹ್ನ 3:00 ಗಂಟೆಗೆ ಮಂಗಳೂರಿನ ಅತ್ತಾವರದಲ್ಲಿರುವ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಛೇರಿಯಲ್ಲಿ ಹಮ್ಮಿಕೊಂಡ “ದ್ವೈವಾರ್ಷಿಕ ಕಾರ್ಯಕ್ರಮಗಳ ಅವಲೋಕನ” ಸಮಾರಂಭವು ಯಶಸ್ವಿಯಾಗಿ ನಡೆಯಿತು.

  ಮಾಜಿ ಉನ್ನತ ಶಿಕ್ಷಣ ಸಚಿವರಾದ ಬಿ.ಎ. ಮೊಹಿದಿನ್‍ರವರು ಸೌಹಾರ್ದ ವಾತಾವರಣವಿಲ್ಲದ ಪ್ರಸಕ್ತ ಪರಿಸ್ಥಿತಿಯಲ್ಲಿ ಅಕಾಡೆಮಿಗಳು ಸಮಾಜದಲ್ಲಿ ಸೌಹಾರ್ದ ವಾತಾವರಣವನ್ನು ಮೂಡಿಸುವ ಕಾರ್ಯ ಮಾಡಬೇಕಿದೆ. ಬ್ಯಾರಿ ಅಕಾಡೆಮಿಯು ಬೇರೆ ಬೇರೆ ಸಮುದಾಯಗಳನ್ನು ಒಟ್ಟುಗೂಡಿಸಿ ಸೌಹಾರ್ದವನ್ನು ಕಾಪಾಡುವಂತಹ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಚಿಂತಿಸಬೇಕಾಗಿದೆ ಎಂದು ಬ್ಯಾರಿ ಅಕಾಡೆಮಿಯ ದ್ವೈವಾರ್ಷಿಕ ಕಾರ್ಯಕ್ರಮಗಳ ಡಿವಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

  ಈ ಸಂದರ್ಭ ಬೆಲ್ಕಿರಿ ವಿಶೇಷಾಂಕವನ್ನು ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಸ್ಥಾಪಕಾಧ್ಯಕ್ಷ ಅಬ್ದುಲ್ ರಹೀಂ ಟೀಕೇ ಬಿಡುಗಡೆಗೊಳಿಸಿ ಮಾತನಾಡಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಬ್ಯಾರಿ ಸಾಹಿತ್ಯ ಅಕಾಡೆಮಿಯು 30 ಸಾವಿರ ಪದಗಳುಳ್ಳ ಬ್ಯಾರಿ, ಕನ್ನಡ, ಇಂಗ್ಲಿಷ್ ನಿಘಂಟನ್ನು ತಯಾರಿಸುತ್ತಿದ್ದು, ಡಿಸೆಂಬರ್‍ನಲ್ಲಿ ಮುದ್ರಣಕ್ಕೆ ಕಳುಹಿಸಲಾಗುವುದು. ಬ್ಯಾರಿ ವ್ಯಾಕರಣವನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದರು.

  ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಸಂಪಾದಕರಾದ ಬಿ.ಎಂ. ಇಚ್ಲಂಗೋಡುರವರು ‘ಅಕಾಡೆಮಿಯ ಕಾರ್ಯಕ್ರಮಗಳ’ ಬಗ್ಗೆ ಅನಿಸಿಕೆ ಮಾತನಡಿದರು. ಓಒPಖಿ ಇದರ ನಿವೃತ್ತ ಉಪನಿರ್ದೇಶಕರಾದ ಖಾಲಿದ್ ತಣ್ಣೀರುಬಾವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ಸದಸ್ಯರಾದ ಎಮ್.ಇ. ಮೊಹಮ್ಮದ್ ಫಿರ್ದೌಸ್, ಅಬ್ದುಲ್ ಲತೀಫ್ ನೇರಳಕಟ್ಟೆ, ಮಹಮ್ಮದ್ ಶರೀಫ್ ನಿರ್ಮುಂಜೆ, ಮುಹಮ್ಮದ್ ಝಕರಿಯ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿ, ಅಕಾಡೆಮಿಯ ಸದಸ್ಯ ಟಿ.ಎ. ಆಲಿಯಬ್ಬ ವಂದಿಸಿದರು. ಹಾಗೂ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಬಿಡುಗಡೆಗೊಂಡ ಬೆಲ್ಕಿರಿ ವಿಶೇಷಾಂಕವನ್ನು ಗಣ್ಯರಿಗೆ ಹಾಗೂ ಸದಸ್ಯರಿಗೆ ಉಚಿತವಾಗಿ ನೀಡಲಾಯಿತು.

 • “ಬ್ಯಾರಿ ಫೆಲೋಶಿಪ್” ಹಾಗೂ “ಬ್ಯಾರಿ ಪುರಸ್ಕಾರ” ಸಮಾರಂಭದ ವರದಿ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 15-05- 2016ರಂದು ಮೂಡಬಿದಿರೆಯ ಸಮಾಜ ಮಂದಿರ ಸಭಾಭವನದಲ್ಲಿ ನಡೆಸಿದ “ಬ್ಯಾರಿ ಫೆಲೋಶಿಪ್” ಹಾಗೂ “ಬ್ಯಾರಿ ಪುರಸ್ಕಾರ” ಸಮಾರಂಭವು ಬಹಳ ಯಶಸ್ವಿಯಾಗಿ ನಡೆಯಿತು.

  ಸನ್ಮಾನ್ಯ ಯುವಜನಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಶ್ರೀ ಅಭಯಚಂದ್ರ ಜೈನ್ ರವರು ಸಮಾರಂಭವನ್ನು ಉದ್ಘಾಟಿಸಿ ಕಷ್ಟದ ಬದುಕಿನ ಜತೆಗೆ ಸಮಾಜದಲ್ಲಿ ಉತ್ತಮ ಭಾಂಧವ್ಯದಿಂದ ಜೀವನ ನಡೆಸುತ್ತಿರುವ ಬ್ಯಾರಿ ಸಮುದಾಯದವರು ಅಭಿನಂದನಾರ್ಹರು. ಬ್ಯಾರಿ ಮುಸ್ಲಿಮ್ ಸಮಾಜದ ವಿದ್ಯಾರ್ಥಿನಿಯರು ಇಂದು ಉನ್ನತ ಶಿಕ್ಷಣವನ್ನು ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  ಬ್ಯಾರಿ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪ್ರದಾನ ಮಾಡಿ ಮಾತನಾಡಿದ ಮಾಜಿ ಸಚಿವ ಬಿ.ಎ. ಮೊಯ್ದಿನ್ ತಮ್ಮ ಭಾಷೆಯ ಮೇಲೆ ಅಭಿಮಾನ ಮಾತ್ರವಲ್ಲ, ಅದರ ಬಳಕೆಯೂ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಅಕಾಡೆಮಿಗಳಿಂದ ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದರು.

  ಅಕಾಡೆಮಿಯ ಅಧ್ಯಕ್ಷರಾದ ಬಿ,ಎ.ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಬ್ಯಾರಿ ಭಾಷೆಯು ಪಠ್ಯಕ್ರಮವಾಗಲು ಶಬ್ದಕೋಶ ಹಾಗೂ ವ್ಯಾಕರಣ ಗ್ರಂಥಗಳ ಅಗತ್ಯವಿದೆ. ಬ್ಯಾರಿ-ಕನ್ನಡ- ಇಂಗ್ಲಿಷ್ 40 ಸಾವಿರ ಶಬ್ಧಗಳನ್ನು ಒಳಗೊಂಡಿರುವ ಶಬ್ಧಕೋಶ ರಚನೆಯ ಕಾರ್ಯ ಈಗಾಗಲೇ ಶೇ.60ರಷ್ಟು ಮುಗಿದಿದೆ ಎಂದರು.

  ಅಕಾಡೆಮಿಯ ಅಧ್ಯಕ್ಷರಾದ ಬಿ,ಎ.ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಬ್ಯಾರಿ ಭಾಷೆಯು ಪಠ್ಯಕ್ರಮವಾಗಲು ಶಬ್ದಕೋಶ ಹಾಗೂ ವ್ಯಾಕರಣ ಗ್ರಂಥಗಳ ಅಗತ್ಯವಿದೆ. ಬ್ಯಾರಿ-ಕನ್ನಡ- ಇಂಗ್ಲಿಷ್ 40 ಸಾವಿರ ಶಬ್ಧಗಳನ್ನು ಒಳಗೊಂಡಿರುವ ಶಬ್ಧಕೋಶ ರಚನೆಯ ಕಾರ್ಯ ಈಗಾಗಲೇ ಶೇ.60ರಷ್ಟು ಮುಗಿದಿದೆ ಎಂದರು.

  ಬ್ಯಾರಿ ಪುರಸ್ಕಾರ :- ಎಮ್.ಹುಸೈನ್ ಅಹ್ಮದ್ ಚಿಕ್ಕಮಗಳೂರು (ಸಮಾಜ ಸೇವೆ), ಮಳ್ಳಡ ಡೇಝಿ ಸೋಮಯ್ಯ ಪಾರಾಣೆ(ಭಾಷೆ), ಅಶ್ರಫ್ ಅಪೋಲೊ ಕಲ್ಲಡ್ಕ (ಸಾಹಿತ್ಯ), ಮೊಹಮ್ಮದ್ ಸದಕತ್ ಮೂಡಬಿದಿರೆ (ಶಿಕ್ಷಣ), ಡಾ| ಪ್ರಶಾಂತ್ ಕುಮಾರ್ ಕಲ್ಲಡ್ಕ(ಭಾಷೆ), ಹಾಗೂ ಫಕ್ರುದ್ದೀನ್ ಇರುವೈಲ್ (ಸಾಹಿತ್ಯ) ಇವರಿಗೆ ಈ ಸಂದರ್ಭದಲ್ಲಿ ಬ್ಯಾರಿ ಪುರಸ್ಕಾರ ನೀಡಿ ಗೌರವಿಸಲಾಯಿತು.

  ಬ್ಯಾರಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಇತ್ತೀಚೆಗೆ ನಿಧನ ಹೊಂದಿದ ಕೆ.ಇ. ಮೊಹಮ್ಮದ್ ಕುಂದಾಪುರ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.

  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುರುಪುರ ಗೋಳಿದಡಿಗುತ್ತು ಗಡಿಕಾರರಾದ ಶ್ರೀ ವರ್ಧಮಾನ ದುರ್ಗ ಪ್ರಸಾದ್ ಶೆಟ್ಟಿ ಆಪತ್ಕಾಲದಲ್ಲಿ ಸಹಾಯ ಮಾಡುವವರನ್ನುಮುಂದಿನ ದಿನಗಳಲ್ಲಿ ಅಕಾಡೆಮಿಯು ಗುರುತಿಸಿ ಗೌರವಿಸಬೇಕಾಗಿದೆಎಂದು ಸಲಹೆ ನೀಡಿದರು.

  ಬ್ಯಾರಿ ಫೆಲೋಶಿಪ್ :- ನಾಝಿಯ (ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಉಡುಪಿ), ಫಾತಿಮ ರಿಝ್ವಾನ (ಗೋವಿಂದದಾಸ ಕಾಲೇಜು ಸುರತ್ಕಲ್), ಫಾಹಿಮ (ಫೀಲ್ಡ್ ಮಾರ್ಶಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ), ಫಾತಿಮ ರುಫೀದ (ಸ್ಕೂಲ್ ಆಫ್ ಸೋಶಿಯಲ್ ವರ್ಕ್, ಮಂಗಳೂರು), ಅಯಿಶಾ (ಏಮ್ಸ್ ಪ್ರಥಮ ದರ್ಜೆ ಕಾಲೇಜು, ಕಡಬ), ಬದ್ರುದ್ದೀನ್ (ಎಸ್.ಡಿ.ಎಂ. ಲಾ ಕಾಲೇಜು, ಮಂಗಳೂರು), ಸಲೀನ ಬಾನು (ಆಳ್ವಾಸ್ ಕಾಲೇಜು, ಮೂಡಬಿದಿರೆ) ಹಾಗೂ ರೈಹಾನ (ಗೋವಿಂದದಾಸ ಕಾಲೇಜು, ಸುರತ್ಕಲ್) ಇವರಿಗೆ ಅಧ್ಯಯನಕ್ಕಾಗಿ ಬ್ಯಾರಿ ಫೆಲೋಶಿಪ್ ನೀಡುವ ಆದೇಶ ಹಸ್ತಾಂತರಿಸಲಾಯಿತು.

  ಇಸ್ಮಾಯಿಲ್ ಪೆರಿಂಜೆ, ಜೆ ಮುಹಮ್ಮದ್ ಹಾಜಿ ಜೋಕಟ್ಟೆ, ಬಿ.ಎ. ಅಬೂಬಕ್ಕರ್ ಕಲ್ಲಾಡಿ, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದಫ್ ಪ್ರದರ್ಶನ ಮತ್ತು ಬ್ಯಾರಿ ಜನಪದ ಹಾಡು ಕಾರ್ಯಕ್ರಮ ನಡೆದವು.

  ಅಕಾಡೆಮಿಯ ಸದಸ್ಯ ಅಬ್ದುಲ್ ಲತೀಫ್ ನೇರಳಕಟ್ಟೆ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಅಕಾಡೆಮಿಯ ಸದಸ್ಯರಾದ ಮುಹಮ್ಮದ್ ಝಕಾರಿಯ ಕಲ್ಲಡ್ಕ, ಹಮೀದ್ ಪಡುಬಿದ್ರಿ, ಕೆ. ಇದಿನಬ್ಬ ಬ್ಯಾರಿ, ಎಮ್. ಇ. ಮುಹಮ್ಮದ್ ಫಿರ್ದೌಸ್, ಯೂಸುಫ್ ವಕ್ತಾರ್, ಮುಹಮ್ಮದ್ ಶರೀಫ್ ನಿರ್ಮುಂಜೆ, ಟಿ.ಎ. ಆಲಿಯಬ್ಬ ಜೋಕಟ್ಟೆ ಉಪಸ್ಥಿತರಿದ್ದರು. ಬ್ಯಾರಿ ಪುರಸ್ಕೃತರಿಗೆ ಸನ್ಮಾನ ಪತ್ರ, ಸ್ಮರಣಿಗೆ, ಗೌರವ ಸಂಭಾವನೆ/ಪ್ರಯಾಣ ಭತ್ಯೆ, ಉಪಚಾರ, ಫೆಲೋಶಿಪ್ ವಿದ್ಯಾರ್ಥಿಗಳಿಗೆ ಸಂಭಾವನೆ, ಸ್ಮರಣಿಕೆಯನ್ನು ಗೌರವಯುತವಾಗಿ ನೀಡಲಾಯಿತು.

 • ಎಸ್.ಸಿ, ಎಸ್.ಟಿ ಸಾಧಕರ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮದ ವರದಿ
  ಕಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 19-03-2016ರಂದು ಮಂಗಳೂರಿನ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ನಡೆಸಿದ “ಎಸ್.ಸಿ, ಎಸ್.ಟಿ. ಸಾಧಕರ ಸಾಕ್ಷ್ಯಚಿತ್ರ ಬಿಡುಗಡೆ” ಸಮಾರಂಭವು ಯಶಸ್ವಿಯಾಗಿ ನಡೆಯಿತು.

  ಸನ್ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರಾದ ಯು.ಟಿ. ಖಾದರ್ ರವರು ಹಿರಿಯರ ತ್ಯಾಗದ ಜೀವನ, ಸಾಮಾಜಿಕ ಸಾಮರಸ್ಯದ ಬದುಕು ದ.ಕ.ಜಿಲ್ಲೆಗೆ ದೊಡ್ಡ ಆಸ್ತಿ. ಅವರ ಮಾದರಿ ವ್ಯಕ್ತಿತ್ವವನ್ನು ಇಂದಿನ ಸಮುದಾಯ ಅರಿತು ಪರಸ್ಪರ ಸಹಬಾಳ್ವೆಯಿಂದ ಬದುಕಬೇಕು ಎಂದು ಕರ್ನಾಟಕ ಸರಕಾರದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಎಸ್.ಸಿ, ಎಸ್.ಟಿ. ಸಾಧಕರ ಸಾಕ್ಷ್ಯಚಿತ್ರಗಳ ಆಯ್ದಭಾಗಗಳ ಪ್ರದರ್ಶನಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಭಾರತ ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿರುವ ದೇಶ. ವೈವಿಧ್ಯ ಸಂಸ್ಕೃತಿ, ಆಚರಣೆಗಳು ಇಲ್ಲಿವೆ. ಆಚಾರ-ವಿಚಾರಗಳಿಗೆ ಹೆಸರಾದ ದೇಶ ಇದಾಗಿದೆ. ಇಂತಹ ದೇಶದಲ್ಲಿ ಎಲ್ಲ ಜಾತಿ-ಧರ್ಮದವರು ಒಗ್ಗಟ್ಟಾಗಿ ಬದುಕು ಸಾಗಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

  ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್. ಲೋಬೋರವರು ಮೂರು ಮಂದಿ ಎಸ್.ಸಿ.ಎಸ್.ಟಿ ಸಾಧಕರಾದ ಡೀಕಯ್ಯ ಪದ್ಮುಂಜ, ಪದ್ಮನಾಭ ನರಿಂಗಾನ, ರಮೇಶ ಎದುರುಪದವು ಇವರ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿ ಆನಂತರ ಅವರನ್ನು ಅಭಿನಂದಿಸಿ ಬಳಿಕ ಬ್ಯಾರಿ ಸಾಹಿತ್ಯ ಅಕಾಡೆಮಿ ಈ ಕಾರ್ಯಕ್ರಮದಿಂದ ಇತರ ಭಾಷೆ, ಜನಾಂಗಗಳಲ್ಲಿರುವ ಸಾಹಿತ್ಯ ಮಿಲನವಾಗಲು ಸಾಧ್ಯವಾಗಿದೆ. ಸಾಮರಸ್ಯದ ಸಂದೇಶ ನೀಡಲು ಇಂತಹ ಕಾರ್ಯಕ್ರಮಗಳು ಪೂರಕ ಎಂದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಬಿ,ಎ.ಮುಹಮ್ಮದ್ ಹನೀಫ್ ವಹಿಸಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಾಜಿ ಇಬ್ರಾಹಿಮ್ ಕೋಡಿಜಾಲ್, ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ, ಕಾವೂರು ಬಂಟರ ಸಂಘದ ಅಧ್ಯಕ್ಷರಾದ ಎಮ್.ಎಸ್. ಶೆಟ್ಟಿ ಸರಪಾಡಿ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಮತಾ ಗಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಶ್ರಫ್ ಅಪೊಲೊ ತಂಡದಿಂದ ಬ್ಯಾರಿ ಜನಪದ ಹಾಡುಗಳು ನಡೆಯಿತು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಅಬ್ದುಲ್ ಲತೀಫ್ ನೇರಳಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿಯ ಸದಸ್ಯೆ ಝೊಹರಾ ಆಬ್ಬಾಸ್ ವಂದಿಸಿದರು. ಗೌರವಿಸಿದ ಕಲಾವಿದರಿಗೆ ಸಂಭಾವನೆ, ಸ್ಮರಣಿಕೆ, ಉಪಚಾರ, ಪ್ರಯಾಣವೆಚ್ಚವನ್ನು ಗೌರವಯುತವಾಗಿ ನೀಡಲಾಯಿತು.

 • ಬ್ಯಾರಿ ಕಾಲೆಂಡರ್ ಮತ್ತು ಬೆಲ್ಕಿರಿ ವಿಶೇಷಾಂಕ ಬಿಡುಗಡೆ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹೊರತಂದ ಪ್ರಥಮ 'ಬ್ಯಾರಿ ಕ್ಯಾಲೆಂಡರ್' ಶನಿವಾರ ಅತ್ತಾವರದಲ್ಲಿರುವ ಅಕಾಡೆಮಿ ಕಚೇರಿಯಲ್ಲಿ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ್ ರೈ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಅವರು ಎಲ್ಲ ಧರ್ಮದ ಹಬ್ಬಗಳು ಮತ್ತು ಸಂಸ್ಕøತಿಯ ಮಹಿತಿಗಳ ಕುರಿತು ಒಂದೇ ಕಡೆ ಸಿಗುವ ಕ್ಯಾಲೆಂಡರ್‍ಗಳು ಒಂದರ್ಥದಲ್ಲಿ ಸರ್ವಧರ್ಮಗಳ ಪ್ರತೀಕವಾಗಿದೆ ಎಂದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅವರು ಬ್ಯಾರಿ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮೂಡಾದಿಂದ ಕುಲಶೇಖರದಲ್ಲಿ 25 ಸೆಂಟ್ಸ್ ಜಾಗವನ್ನು ಖರೀದಿಸಿದ್ದು ಮುಂದಿನ ಬಜೆಟ್‍ನಲ್ಲಿ ಕಾಮಗಾರಿಗೆ ಹಣ ಮೀಸಲಿಟ್ಟು, ಬ್ಯಾರಿ ಭವನ ನಿರ್ಮಿಸಲಾಗುವುದು ಎಂದು ತಿಳಿಸಿದರು.

  'ಬೆಲ್ಕಿರಿ' ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತಾಡಿದ ಪತ್ರಕರ್ತ ಬಿ.ಎಂ. ಹನೀಫ್ ಅವರು ಕ್ಯಾಲೆಂಡರ್ ಆ ಪ್ರದೇಶದ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತದೆ. ಬ್ಯಾರಿ ಅಕಾಡೆಮಿ ಕ್ಯಾಲೆಂಡರ್ ತಯಾರಿಸಿ ಬಿಡುಗಡೆ ಮಾಡುವ ಮೂಲಕ ಹೊಸ ಶಕೆ ಆರಂಭಿಸಿದೆ. ಬೆಲ್ಕಿರಿ ವಿಶೇಷಾಂಕ ಚೆನ್ನಾಗಿ ಮೂಡಿ ಬಂದಿದೆ. ಹೊಸ ಲೇಖಕರಿಗೆ ಅವಕಾಶಗಳನ್ನು ಕಲ್ಪಿಸುವುದು ಒಳ್ಳೆಯ ಬೆಳವಣಿಗೆ ಎಂದರು.

  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಸಾಹಿತಿ ಪ್ರೊ ಎ.ವಿ.ನಾವಡ ಮಾತನಾಡಿ, 1854 ರಲ್ಲಿ ಬಾಷೆಲ್ ಮಿಷನ್‍ನಿಂದ 30 ವರ್ಷಗಳ ಕಾಲ ಪ್ರಕಟವಾದ ಸೋಲ್ಜ್ ಎಂಬ ಕ್ಯಾಲೆಂಡರ್ ಮಾದರಿ ಕ್ಯಾಲೆಂಡರ್ ಆಗಿದೆ. ಅದು ಕ್ರೈಸ್ತ ಕ್ಯಾಲೆಂಡರ್ ಆಗದೆ ಸರ್ವಧರ್ಮೀಯರ ಹಬ್ಬಗಳನ್ನು, ಕೃಷಿಕರು ಬಿತ್ತನೆ ಮಾಡಬೇಕಾದ ದಿನಗಳನ್ನು ಪ್ರಕಟಿಸಿತ್ತು, ಬ್ಯಾರಿ ಕ್ಯಾಲೆಂಡರ್ ಕೂಡ ಎಲ್ಲ ಸಮುದಾಯಗಳ ಮುಖವಾಣಿಯಾಗಿ ಪ್ರಕಟಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  ಹಿರಿಯ ಸಾಹಿತಿ ಯು.ಪಿ.ಉಪಾಧ್ಯಾಯ, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ವುಡ್‍ವರ್ತ್ ಕನ್‍ಸ್ಟ್ರಕ್ಷನ್ ಮಾಲಕ ಎಂ.ಶರೀಫ್, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, 'ಬ್ಯಾರಿ-ಕನ್ನಡ-ಇಂಗ್ಲಿಷ್' ನಿಘಂಟು ಸಂಪಾದಕ ಮಂಡಳಿಯ ಪ್ರೊ.ಬಿ.ಎಂ ಇಚ್ಲಂಗೋಡು, ಬಿ.ಎ.ಶಂಸುದ್ದೀನ್ ಮಡಿಕೇರಿ, ಅಬ್ದುರ್ರಹ್ಮಾನ್ ಕುತ್ತೆತ್ತೂರು ಉಪಸ್ಥಿತರಿದ್ದರು.

  ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಯೂಸುಫ್ ವಕ್ತಾರ್ ವಂದಿಸಿದರು. ಮುಹಮ್ಮದ್ ಫಿರ್‍ದೌಸ್ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿಯ ಸದಸ್ಯರಾದ ಕೆ.ಇದ್ದಿನಬ್ಬ ಬ್ಯಾರಿ, ಅಬ್ಬಾಸ್ ಕಿರುಗುಂದ, ಶ್ರೀಮತಿ ಝೊಹರಾ ಅಬ್ಬಾಸ್, ಅಬ್ದುಲ್ ಹಮೀದ್ ಗೋಳ್ತಮಜಲು, ಟಿ.ಎ. ಆಲಿಯಬ್ಬ ಜೋಕಟ್ಟೆ ಅಬ್ದುಲ್ ಲತೀಫ್ ನೇರಳಕಟ್ಟೆ, ಮಹಮ್ಮದ್ ಝಕರಿಯಾ ಕಲ್ಲಡ್ಕ, ಮುಹಮ್ಮದ್ ಶರೀಫ್ ನಿರ್ಮುಂಜೆ ಹಾಜರಿದ್ದರು.

 • “ಬ್ಯಾರಿ ಸಾಕ್ಷ್ಯಚಿತ್ರ” “ಕವನ ಸಂಕಲನ” ಬಿಡುಗಡೆ ಹಾಗೂ ರಾಜ್ಯದ 40 ತಂಡಗಳಿಗೆ ದಫ್ ಪರಿಕರ ಮತ್ತು ಸಮವಸ್ತ್ರ ವಿತರಣೆ-ಪ್ರದರ್ಶನಾ ಸಮಾರೋಪ ಸಮಾರಂಭ” ಕಾರ್ಯಕ್ರಮದ ವರದಿ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 13-12-2015 ರಂದು ಮಂಗಳೂರಿನ ಪುರಭವನದಲ್ಲಿ ನಡೆದ “ಬ್ಯಾರಿ ಸಾಕ್ಷಚಿತ್ರ” “ಕವನ ಸಂಕಲನ” ಬಿಡುಗಡೆ ಹಾಗೂ ರಾಜ್ಯದ 40 ತಂಡಗಳಿಗೆ ದಫ್ ಪರಿಕರ-ಸಮವಸ್ತ್ರ ವಿತರಣೆ” ಕಾರ್ಯಕ್ರಮದ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನಡೆಯಿತು.

  ಚಲನಚಿತ್ರ ನಿರ್ದೇಶಕರಾದ ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಭಾಷೆಯಿಂದ ಸಾಮಾಜಿಕ ಸಾಮರಸ್ಯ ಸಾಧ್ಯ. ಭಾಷೆಯನ್ನು ಅರಿತುಕೊಳ್ಳುತ್ತಾ ಹೋದಂತೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಮೂಲ ಸತ್ಯ ಕಾಣಸಿಗುತ್ತದೆ ಎಂದರು.

  ಭಾಷೆ ಎಂಬುದು ಆತ್ಮದ ಅಭಿ ವ್ಯಕ್ಟಿಯಾಗಿದ್ದು,ಪ್ರಾದೇಶಿಕ ಭಾಷೆಗಳು ಉಳಿದಾಗ ಮಾತ್ರವೇ ಸಮುದಾಯದ ಸಂಸ್ಕೃತಿ,ಆಚಾರ ವಿಚಾರಗಳಲ್ಲಿನ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು. ಬ್ಯಾರಿ ಭಾಷೆ ಸಾಕ್ಷ್ಯಚಿತ್ರದ ಡಿವಿಡಿಯನ್ನು ಬಿಡುಗಡೆಗೊಳಿಸಿ, ಬ್ಯಾರಿ ಸಾಕ್ಷ್ಯಚಿತ್ರಗಳ ನಿರ್ದೇಶಕರಾದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ರವರನ್ನು ಸನ್ಮಾನಿಸಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಬಿ,ಎ.ಮುಹಮ್ಮದ್ ಹನೀಫ್ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಬಳಿಕ ರಾಜ್ಯದ 40 ತಂಡಗಳ 400 ಮಕ್ಕಳಿಗೆ ದಫ್ ಪರಿಕರ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.

  ಸಾಹಿತಿ ಪ್ರೊ.ಎ.ವಿ.ನಾವಡ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಎಸ್.ಎಮ್.ರಶೀದ್ ಹಾಜಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಸೆಂಟ್ರಲ್ ಮುಸ್ಲಿಂ ಕಮಿಟಿ ಅಧ್ಯಕ್ಷರಾದ ಮುಹಮ್ಮದ್ ಮಸೂದ್,ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಕೆ.ಮುಹಮ್ಮದ್,ಮಂಗಳೂರು ಅಖಿಲ ಭಾರತ ಬ್ಯಾರಿ ಪರಿಷತ್ನ ಗೌರಾವಾಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ,ಜೆ.ಆರ್ ಲೋಬೋ ಮುಂತಾದವರು ಉಪಸ್ಥಿತರಿದ್ದರು.

  ಇದೇ ಸಂದರ್ಭದಲ್ಲಿ ಬಿ.ಎಂ.ಹನೀಫ್ ಅವರು ಮಾತನಾಡಿ,ಅಕಾಡೆಮಿಯ ವತಿಯಿಂದ ಪ್ರಸ್ತುತ ಬ್ಯಾರಿ ಭಾಷೆ ಹಾಗೂ ಸಂಸ್ಕೃತಿಯ ಕುರಿತಂತೆ ರಾಜ್ಯದ ಜನರಿಗೆಲ್ಲರಿಗೂ ತಿಳಿಯುವ ನಿಟ್ಟಿನಲ್ಲಿ ಕನ್ನಡದಲ್ಲಿ ಸಾಕ್ಷ್ಯಚಿತ್ರ ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬ್ಯಾರಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲೂ ತಯಾರಿಸಲಾಗುವುದು ಎಂದರು. ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬ್ಯಾರಿ ಕನ್ನಡ ಇಂಗ್ಲೀಷ್ ನಿಘಂಟು ರಚಿಸಲಾಗಿದ್ದು,30,000 ಶಬ್ದಗಳು ದೊರಕಿದೆ. ಜಾಗತಿಕವಾಗಿ ಬಳಸುವ ಇಂಗ್ಲೀಷ್ ನಲ್ಲೂ ಸ್ವತಂತ್ರ ಪದಗಳು ಶೇ.18ರಷ್ಟು ಮಾತ್ರವೇ ಇದ್ದು, ಬ್ಯಾರಿ ಭಾಷೆಯಲ್ಲಿ ಶೇ.30 ರಷ್ಟು ಸ್ವತಂತ್ರ ಪದಗಳಿವೆ ಎಂದರು.

  ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಚಿನ್ನಪ್ಪ ಗೌಡರವರು ಬಶೀರ್ ಅಹ್ಮದ್ ಕಿನ್ಯ ಬರೆದು ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಬ್ಯಾರಿ ಕವನ ಸಂಕಲನ “ನಲ್ಮಾಲೆ” ಯನ್ನು ಬಿಡುಗಡೆಗೊಳಿಸಿ, ನಾಡಿನ ಬಹುದೊಡ್ಡ ಶಕ್ತಿ ಬಹುತ್ವ. ಪರಸ್ಪರರ ಸಂಸ್ಕೃತಿ, ಭಾಷೆಗಳನ್ನು ಗೌರವಿಸುವ, ಬಹುತ್ವವನ್ನು ಒಪ್ಪಿಕೊಂಡಾಗ ಮಾತ್ರ ಭಾಷೆ ಉಳಿದು ಬೆಳೆಯಲು ಸಾಧ್ಯ ಎಂದು ಹೇಳಿದರು.

  ಒಂದು ಭಾಷೆ ಇನ್ನೊಂದು ಭಾಷೆಯ ಬೆಳವಣಿಗೆಗೆ ಪೂರಕವಾಗಿರುತ್ತದೆ.ಹಾಗಾಗಿ ಬ್ಯಾರಿ ಭಾಷೆಯನ್ನು ತುಳು ನಮಗೆ ಅಗತ್ಯವಿಲ್ಲ,ತುಳುವರು ಬ್ಯಾರಿ ನಮಗೆ ಸರಿಹೋಗುವುದಿಲ್ಲ ಎಂಬ ಪ್ರತ್ಯೇಕತಾ ಮನೋಭಾವನೆ ಬೆಳೆಸಿಕೊಳ್ಳದೆ ಬಹುತ್ವವನ್ನು ತಮ್ಮದಾಗಿಸಿಕೊಳ್ಳಬೇಕು. ಭಾಷೆಯನ್ನು ಮಾತನಾಡುವ, ಸಾಹಿತ್ಯವನ್ನು ಓದುವ ಹಾಗೂ ಸಂಸ್ಕೃತಿಯಲ್ಲಿ ಬದುಕುವ ವಾತಾವರಣ ಸೃಷ್ಟಿಯಾದಾಗ ಭಾಷೆ-ಸಾಹಿತ್ಯ ಹಾಗೂ ಸಂಸ್ಕೃತಿಯ ರಕ್ಷಣೆಯಾಗುತ್ತದೆ ಎಂದು ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

  ಇದೇ ಸಂದರ್ಭದಲ್ಲಿ “ಬ್ಯಾರಿ ಸಂಸ್ಕೃತಿ” ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಸಂಸ್ಕೃತಿ ಚಿಂತಕ ಡಾ! ಬಿ.ಎ.ವಿವೇಕ ರೈ ಚಾಲನೆ ನೀಡಿದರು. ಬ್ಯಾರಿ ಕವನ ಸಂಕಲನ “ನಲ್ಮಾಲೆ ಯ ಕೃತಿಗಾರ ಹಾಗೂ ಬಹುಭಾಷಾ ಕವಿ ಬಶೀರ್ ಅಹ್ಮದ್ ಕಿನ್ಯಾರವರನ್ನು ಅಭಿನಂದಿಸಲಾಯಿತು. ನಲ್ಮಾಲೆ ಕೃತಿಯ ಬಗ್ಗೆ ಬಿ.ಎ.ಮುಹಮ್ಮದ್ ಅಲಿ ಪರಿಚಯ ನೀಡಿದರು.

  ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಇಸ್ಲಾಮಿಕ ಕಲ್ಚರಲ್ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಬಿ.ಎಮ್.ಮುಮ್ತಾಝ್ ಅಲಿ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಎಂ.ಅಸ್ಲಂ ಹಾಗೂ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಅಕಾಡೆಮಿಯ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮವನ್ನು ನಿರೂಪಿಸಿದರು. ಝೊಹರಾ ಆಬ್ಬಾಸ್ ವಂದಿಸಿದರು. ವೇದಿಕೆಯಲ್ಲಿ ಅಕಾಡೆಮಿ ಸದಸ್ಯರಾದ ಬದ್ರುದ್ದೀನ್ ಕೆ.ಮಾಣಿ, ಹಮೀದ್ ಪಡುಬಿದ್ರಿ, ಆಯಿಶಾ ಪೆರ್ಲ, ಯೂಸುಫ್ ವಕ್ತಾರ್, ಅಬ್ಬಾಸ್ ಕಿರುಗುಂದ, ಮುಹಮ್ಮದ್ ಝಕಾರಿಯಾ, ಅಬ್ದುಲ್ ಲತೀಫ್ ನೇರಳಕಟ್ಟೆ, ಟಿ.ಎ.ಆಲಿಯಬ್ಬ ಜೋಕಟ್ಟೆ, ಮುಹಮ್ಮದ್ ಶರೀಫ್ ನಿರ್ಮುಂಜೆ ಹಾಗೂ ಅಕಾಡೆಮಿ ಸದಸ್ಯ ಖಾಲಿದ್ ಉಜಿರೆ ಮುಂತಾದವರು ಉಪಸ್ಥಿತರಿದ್ದರು. ಗೌರವಿಸಿದ ಕಲಾವಿದರಿಗೆ ಉಪಚಾರ, ವಾಸ್ತವ್ಯ, ಸಂಭಾವನೆ ಪ್ರಯಾಣವೆಚ್ಚವನ್ನು ಗೌರವಯುತವಾಗಿ ನೀಡಲಾಯಿತು.

 • “ಪಿರ್ಸಪ್ಪಾಡ್” ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮ- ಕಾರ್ಯಕ್ರಮದ ವರದಿ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 28-11-2015 ರಂದು ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಮ್ ನಲ್ಲಿ ನಡೆದ “ಪಿರ್ಸಪ್ಪಾಡ್” ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

  ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖಾ ಸಚಿವರಾದ ಶ್ರೀ ಬಿ.ರಮಾನಾಥ ರೈ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾತಿ-ಧರ್ಮಗಳ ಗೋಡೆಯನ್ನು ಮುರಿದು ಪ್ರೀತಿ-ಸ್ನೇಹವನ್ನು ಬೆಳೆಸಿಕೊಂಡಾಗ ಸಮಾಜದಲ್ಲಿ ಸೌಹಾರ್ದ ನೆಲೆಸಲು ಸಾಧ್ಯ ಎಂದರು.

  ಅದೇ ಸಂದರ್ಭದಲ್ಲಿ ಸಚಿವರು ಬ್ಯಾರಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಅನ್ಸಾರ್ ಇನೋಳಿಯವರ “ಬ್ಯಾರಿ ಕೌಮು” ಪುಸ್ತಕವನ್ನು ಬಿಡುಗಡೆ ಮಾಡಿದರು.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು.

  ನೆಟ್ಲಮುಡ್ನೂರು ಗ್ರಾಮ ಪಂಚಾಯತ್ನ ಅಧ್ಯಕ್ಷೆ ಶ್ರೀಮತಿ ವಿಜಯಾ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಸದಸ್ಯರಾದ ಶ್ರೀ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸದಸ್ಯರಾದ ಶ್ರೀ ಎಂ.ಎಸ್.ಮುಹಮ್ಮದ್, ಸೂರಿಕುಮೇರು ಸಂತ ಜೋಸೆಫ್ ಚರ್ಚ್ನ ಧರ್ಮಗುರುಗಳಾದ ರೆಫಾ ಮೆಲ್ವಿನ್ ನೊರೊನಾ, ಜಿಲ್ಲಾ ವಕ್ಫ್ ಬೋರ್ಡ್ನ ಮಾಜಿ ಉಪಾಧ್ಯಾಕ್ಷರಾದ ಹಾಜಿ ಬಿ.ಎಚ್.ಖಾದರ್ ಬಂಟ್ವಾಳ, ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಜನಾಬ್ ಬಿ.ಎಂ.ಅಬ್ಬಾಸ್ ಅಲಿ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಶ್ರೀ ಹೇಮನಾಥ ಶೆಟ್ಟಿ ಕಾವು ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಬ್ಯಾರಿ ಕವಿಗೋಷ್ಠಿ ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗಳಾದ ಜನಾಬ್ ಹಂಝ ಮಲಾರ್, ಜನಾಬ್ ಶಂಶೀರ್ ಬುಡೋಳಿ, ಜನಾಬ್ ಸಲೀಮ್ ಬೋಳಂಗಡಿ, ಜನಾಬ್ ಸಲೀಮ್ ಮಾಣಿ, ಜನಾಬ್ ಜಿ.ಎಂ.ಮುಸ್ತಫಾ ಗೂಡಿನ ಬಳಿ, ಡಾ,ಪ್ರಶಾಂತ್ ಕುಮಾರ್ ಕಲ್ಲಡ್ಕ, ಶ್ರೀ.ಸಿ,ಶೇ.ಕಜೆಮಾರು, ಜನಾಬ್ ಅಬೂಬಕ್ಕರ್ ಅನಿಲಕಟ್ಟೆ, ಜನಾಬ್ ಅಬ್ದುಲ್ ಅಝೀಝ್ ಹಕ್ ಮುಂತಾದವರು ಭಾಗವಹಿಸಿದ್ದರು.

  ಪತ್ರಕರ್ತರಾದ ಹಂಝ ಮಲಾರ್ ಕೃತಿ ಪರಿಚಯಿಸಿದರು, ಬಳಿಕ ಇಬ್ರಾಹಿಂ, ಪಾಝಿಲ್ ಪರ್ತಿಪ್ಪಾಡಿ ಮತ್ತು ತಂಡದವರಿಂದ ಬ್ಯಾರಿ ಹಾಡು, ದಫ್ ಪ್ರದರ್ಶನ,ಕೋಲ್ಕಲಿ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

  ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಕೆ.ಮಾಣಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ನ ಸದಸ್ಯರಾದ ಶ್ರೀ.ಕೆ.ಶ್ರೀಧರ್ ರೈ, ಕೆದಿಲ ಗ್ರಾಮ ಪಂಚಾಯತ್ನ ಸದಸ್ಯರಾದ ಹಾಜಿ ಆದಂ ಕುಂಞಿ ಪಾಟ್ರಕೋಡಿ, ಕೆದಿಲ ಗ್ರಾಮ ಪಂಚಾಯತ್ನ ಸದಸ್ಯರಾದ ಜನಾಬ್ ಉಮರಬ್ಬ ಗಡಿಯಾರ, ಗೋಳ್ತಮಜಲು ಗ್ರಾಮ ಪಂಚಾಯತ್ ನ ಸದಸ್ಯರಾದ ಜನಾಬ್ ಯೂಸುಫ್ ಹೈದರ್, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ನ ಸದಸ್ಯರಾದ ಜನಾಬ್ ಸಿದ್ದೀಕ್ ಸರವು, ವೀರಕಂಭ ಗ್ರಾಮ ಪಂಚಾಯತ್ನ ಸದಸ್ಯರಾದ ಜನಾಬ್ ಅಬ್ಬಾಸ್ ಕೆಲಿಂಗ,ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ನ ಸದಸ್ಯರಾದ ಜನಾಬ್ ಅಬ್ದುಲ್ ರೆಹಮಾನ್, ಝೋನ್ 5 ರ ಝೋನಲ್ ಲೆಫ್ಟಿನೆಂಟ್ ಕೆ.ಮುಹಮ್ಮದ್ ರಫೀಕ್, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾದ ಜನಾಬ್ ಅಬ್ದುಲ್ ಸತ್ತಾರ್ ಆರಂಗಳ,ಬಂಟ್ವಾಳ ಆರಾಧನಾ ಸಮಿತಿಯ ಸದಸ್ಯರಾದ ಜನಾಬ್ ಯೂಸುಫ್ ಕರಂದಾಡಿ, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ನ ಸಂಘಟನಾ ಕಾರ್ಯದರ್ಶಿಯಾದ ಜನಾಬ್ ಹನೀಫ್ ಬಗ್ಗುಮೂಲೆ, ನೇರಳಕಟ್ಟೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ರೋಹಿತಾಶ್ವ,ಮಿತ್ತೂರು ಸಿರಾಜುಲ್ ಹುದಾ ಮಿತ್ತೂರಿನ ಕಾರ್ಯದರ್ಶಿಯಾದ ಜನಾಬ್ ಪಿ.ಕೆ.ಉಮ್ಮರ್ ಕುಂಞಿ, ನೇರಳಕಟ್ಟೆ ಮಿಲಾದ್ ಕಮಿಟಿಯ ಅಧ್ಯಕ್ಷರಾದ ಜನಾಬ್ ಶಾಹುಲ್ ಹಮೀದ್, ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದರಸ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜನಾಬ್ ಅಬ್ದುಲ್ ರೆಹಮಾನ್, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಮೈಸೂರು ಜಿಲ್ಲಾಧ್ಯಕ್ಷ ಮಹಮ್ಮದ್, ಶಿಕ್ಷಕರಾದ ರಾಮಚಂದ್ರ ಮಾಸ್ಟರ್, ದಕ್ಷಿಣ ಕನ್ನಡ ಜಿಲ್ಲಾ ದಫ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ.ಅಶ್ರಫ್ ಪಾಣೆಮಂಗಳೂರು,ಮುಂತಾದವರು ಉಪಸ್ಥಿತರಿದ್ದರು.

  ಅಕಾಡೆಮಿಯ ರಿಜಿಸ್ಟ್ರಾರ್ ಜನಾಬ್ ಉಮರಬ್ಬ ರವರು ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ಝಕಾರಿಯಾ ಕಲ್ಲಡ್ಕ ವಂದಿಸಿದರು. ಅಕಾಡೆಮಿಯ ಸದಸ್ಯರಾದ ಅಬ್ದುಲ್ ಲತೀಫ್ ನೇರಳಕಟ್ಟೆ ಹಾಗೂ ಬ್ಯಾರಿ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷ ಅಬ್ದುಲ್ ರಝಾಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಗೌರವಿಸಿದ ಕಲಾವಿದರಿಗೆ ಉಪಚಾರ, ವಾಸ್ತವ್ಯ, ಸಂಭಾವನೆ ಪ್ರಯಾಣವೆಚ್ಚವನ್ನು ಗೌರವಯುತವಾಗಿ ನೀಡಲಾಯಿತು.

 • “ಬ್ಯಾರಿ ಭಾಷಾ ಮಾಸಾಚರಣೆಯ ಸಮಾರೋಪ ಸಮಾರಂಭ” ಕಾರ್ಯಕ್ರಮದ ವರದಿ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 31-10-2015 ರಂದು ಉಳ್ಳಾಲದ ಮದನಿ ಪದವಿ ಪೂರ್ವ ಕಾಲೇಜು ಅಳೇಕಲದಲ್ಲಿ ನಡೆದ ಬ್ಯಾರಿ ಭಾಷಾ ಮಾಸಾಚರಣೆಯ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನಡೆಯಿತು.

  ಸನ್ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರಾದ ಜನಾಬ್ ಯು.ಟಿ.ಖಾದರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾತೃ ಭಾಷೆಯ ಮೇಲೆ ವಿದ್ಯಾರ್ಥಿ ಜೀವನದಲ್ಲೇ ಪ್ರೀತಿ ಹುಟ್ಟಿಸುವ ಸಲುವಾಗಿ ಶಾಲಾ ಕಾಲೇಜುಗಳಲ್ಲಿ ಅಕಾಡೆಮಿ ಕಾರ್ಯಕ್ರಮಗಳನ್ನು ಯೋಜಿಸಿರುವುದು ಶ್ಲಾಘನೀಯ. ಅಕಾಡೆಮಿ ತಿಂಗಳಿಡೀ ನಡೆಸಿದ ಕಾರ್ಯಕ್ರಮಗಳಿಂದ ಬ್ಯಾರಿ ಭಾಷಾ ಜಾಗೃತಿ ವೃದ್ದಿಯಾಯಿತು ಎಂದರು.

  ಅಶ್ರಫ್ ಅಪೋಲೊ ಸಾಹಿತ್ಯದ ’ಸುರ್ಮ’ ಸಿ.ಡಿ. ಹಾಗೂ ಬ್ಯಾರಿ ಭಾಷಾ ಆಂದೋಲದನದ ಡಿವಿಡಿಯನ್ನು ಬಿಡುಗಡೆಗೊಳಿಸಲಾಯಿತು. ಅದೇ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಬಿ.ಎ.ಮುಹಮ್ಮದ್ ಹನೀಫ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

  ವಿವಿಧ ಕ್ಷೇತ್ರದ ಬ್ಯಾರಿ ಸಾಧಕರಾದ ಜನಾಬ್ ಸಾದುಕುಂಞಿ ಮಾಸ್ಟರ್, ಜನಾಬ್ ಖಾಲಿದ್ ತಣ್ಣೀರುಬಾವಿ, ಜನಾಬ್ ಝುಲ್ಫಿಕರ್ ಕಾಸಿಮ್,ಜನಾಬ್ ಡಿ.ಎ. ಅಬೂಬಕ್ಕರ್ ಕೈರಂಗಳ, ಜನಾಬ್ ರಾಝಿಕ್ ಉಳ್ಳಾಲ, ಹಝ್ರತ್ ತೊಕ್ಕೊಟ್ಟು, ಜನಾಬ್ ಶಿಹಾಬ್ ಉಳ್ಳಾಲರನ್ನು ಅಭಿನಂದಿಸಲಾಯಿತು.

  ಸನ್ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರಾದ ಜನಾಬ್ ಯು.ಟಿ. ಖಾದರ್. ಮದನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಎಚ್.ಹಮೀದ್, ಶೇಖ್ ಅಬ್ದುಲ್ ಮಾಲಿಕ್, ಅಶ್ರಫ್ ಅಪೊಲೊರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

  ಚೀರುಂಬ ಭಗವತಿ ಮಹಿಳಾ ವೇದಿಕೆ ಹಾಗೂ ಕೌನ್ಸಿಲ್ ಉಳ್ಳಾಲ ನಗರಸಭೆಯ ಅಧ್ಯಕ್ಷೆ ಶ್ರೀಮತಿ ಮಹಾಲಕ್ಷ್ಮಿ, ಉಳ್ಳಾಲ ನಗರಸಭೆಯ ಕೌನ್ಸಿಲ್ ರಾದ ಜನಾಬ್ ಅಬ್ದುಲ್ ಫತ್ತಾಕ್, ಉಮಾ ಮಹೇಶ್ವರಿ ದೇವಸ್ಥಾನ ಉಮಾಪುರಿ ಉಳ್ಳಾಲ ಮುಕ್ತೇಸರರಾದ ಶ್ರೀ ಈಶ್ವರ್ ಉಳ್ಳಾಲ್, ಅಬ್ಬಕ್ಕ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ದಿನಕರ ಉಳ್ಳಾಲ, ಉಳ್ಳಾಲ ನಗರಸಭೆಯ ಅಧ್ಯಕ್ಷೆ ಗಿರಿಜಾ ಭಾಯಿ, ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜನಾಬ್ ಮೊಹಮ್ಮದ್ ಮುಕ್ಕಚ್ಚೇರಿ, ಮದನಿ ಪ್ರೌಢಶಾಲೆ-ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ಜನಾಬ್ ಯು.ಕೆ.ಇಬ್ರಾಹಿಮ್, ಮೇಲ್ತೆನೆ ಬ್ಯಾರಿ ಎಲ್ತ್ಕಾರ್ ಕಲಾವಿದಮಾರೊ ಕೂಟದ ಅಧ್ಯಕ್ಷರಾದ ಜನಾಬ್ ಆಲಿಕುಂಞಿ ಪಾರೆ, ಉಳ್ಳಾಲ ನಗರಸಭೆಯ ಕೌನ್ಸಿಲ್ ರಾದ ಜನಾಬ್ ಫಾರೂಕ್ ಉಳ್ಳಾಲ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಅದೇ ಸಂದರ್ಭದಲ್ಲಿ ಶಾಲಾ ಕಾಲೇಜುಗಳಲ್ಲಿ ಬ್ಯಾರಿ ಭಾಷೆ ಎಂಬ ವಿಷಯದಲ್ಲಿ ಇಸ್ಮತ್ ಫಜೀರ್ ಮಂಡಿಸಿದ ಪ್ರಂಬಧದ ಮೇಲೆ ನಡೆದ ಚರ್ಚಾಗೋಷ್ಠಿಯಲ್ಲಿ ಮದನಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಜನಾಬ್ ಟಿ.ಇಸ್ಮಾಈಲ್. ಹಳೆಕೋಟೆ ಸಯ್ಯದ್ ಮದನಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಜನಾಬ್ ಕೆ.ಎಂ.ಕೆ.ಮಂಜನಾಡಿ, ಮಲಾರ್ ಸೆಂಟ್ರಲ್ ಮುಸ್ಲಿಮ್ ಸ್ಕೂಲ್ ನ ಮುಖ್ಯ ಶಿಕ್ಷಕರಾದ ಜನಾಬ್ ಎಚ್.ಎಂ.ಮುಹಮ್ಮದ್, ಕೋಟೆಪುರ ಟೀಪ್ಪುಸುಲ್ತಾನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಜನಾಬ್ ಎಮ್.ಎಚ್.ಮಲಾರ್ ಮುಂತಾದವರು ಪಾಲ್ಗೊಂಡರು.

  ಮದನಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕನ್ನಡದಿಂದ ಬ್ಯಾರಿ ಭಾಷೆಗೆ ಅನುವಾದ ಮತ್ತು ಎದ್ ರ್ ಮಸಲೆ(ಒಗಟು) ಸ್ಪರ್ಧೆ ನಡೆಯಿತು.ತಲ್ಹತ್ ಉಳ್ಳಾಲ ಮತ್ತು ತಂಡದಿಂದ ದಫ್ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

  ಅಕಾಡೆಮಿಯ ರಿಜಿಸ್ಟ್ರಾರ್ ರಾದ ಜನಾಬ್ ಉಮರಬ್ಬ ರವರು ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ಶೆರೀಫ್ ನಿರ್ಮುಂಜೆ ಧ್ಯೇಯಗೀತೆಯನ್ನು ಹಾಡಿದರು. ಅಕಾಡೆಮಿಯ ಸದಸ್ಯರಾದ ಯೂಸುಫ್ ವಕ್ತಾರ್ ವಂದಿಸಿದರು. ಅಕಾಡೆಮಿಯ ಸದಸ್ಯರಾದ ಲತೀಫ್ ನೇರಳಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.

 • ಬ್ಯಾರಿ ಸಾಂಸ್ಕೃತಿಕ ವೈಭವ” ಕಾರ್ಯಕ್ರಮದ ವರದಿ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷಾ ಮಾಸಾಚರಣೆಯ ಅಂಗವಾಗಿ ಪುತ್ತೂರು ತಾಲೂಕು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಇದರ ಸಹಕಾರದೊಂದಿಗೆ ದಿನಾಂಕ 27-10-2015 ರಂದು ಪುತ್ತೂರಿನ ಕೋ-ಓಪರೇಟಿವ್ ಟೌನ್ ಬ್ಯಾಂಕ್ ಹಾಲ್ ನಲ್ಲಿ ನಡೆಸಿದ “ಬ್ಯಾರಿ ಸಾಂಸ್ಕೃತಿಕ ವೈಭವ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

  ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಬ್ಯಾರಿ ಭಾಷೆಯು ದಕ್ಷಿಣ ಕನ್ನಡ ಜಿಲ್ಲೆಯ ಅವಿಭಾಜ್ಯ ಅಂಗವಾಗಿದೆ. ಹಿಂದೆಲ್ಲಾ ಬ್ಯಾರಿ, ತುಳು ಮತ್ತು ಕೊಂಕಣಿ ಭಾಷೆ ಮಾತನಾಡುವವರು ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದು, ಇತ್ತೀಚೆಗೆ ಈ ಅನ್ಯೋನ್ಯತೆ ಕಡಿಮೆಯಾಗುತ್ತಿದೆ. ಹಿಂದಿನಂತೆ ಭಾಷಾ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಶಾಸಕಿ ಮಾಡಿದರು. ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಬಿ.ಎ. ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಸ್ಮತ್ ಫಜೀರ್ ಬರೆದು ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ “ಎಲ್ತ್ ರೊ ಖಾದಿಮು ಹರೇಕಳ ಹಾಜಬ್ಬಾಕ” ಕೃತಿಯನ್ನು ಬಿಡುಗಡೆ ಮಾಡಿದರು. ಪುತ್ತೂರು ತಾಲೂಕು ಜಂ-ಇಯ್ಯತುಲ್ ಫಲಾಹ್ ನ ಅಧ್ಯಕ್ಷರಾದ ಜನಾಬ್ ಬಿ.ಎ. ಶುಕೂರ್ ಹಾಜಿ ಕೃತಿ ಸ್ವೀಕಾರ ಮಾಡಿದರು. ಸುಧಾ ವಾರಪತ್ರಿಕೆಯ ಸಹ ಸಂಪಾದಕ ಜನಾಬ್ ಬಿ.ಎಂ. ಹನೀಫ್ ಕೃತಿ ಪರಿಚಯವನ್ನು ಮಾಡಿದರು.

  ನೋಟರಿ ಮತ್ತು ವಕೀಲರಾದ ಜನಾಬ್ ಹಾಜಿ ಫಝಲ್ ರಹೀಮ್ ಕೃತಿಕಾರರಿಗೆ ಅಭಿನಂದನೆಯನ್ನು ಮಾಡಿದರು. ಪುತ್ತೂರು ನಗರಸಭೆಯ ಸದಸ್ಯರಾದ ಜನಾಬ್ ಮಹಮದ್ ಅಲಿ, ಜನಾಬ್ ಅನ್ವರ್ ಖಾಸಿಮ್, ಪುತ್ತೂರು ತಾಲೂಕು ಪಂಚಾಯತ್ ಸದಸ್ಯರಾದ ಹಾಜಿ ಮಹಮದ್ ಬಡಗನ್ನೂರು, ಪುತ್ತೂರು ತಾಲೂಕು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಸಮದ್ ಬಾವ, ಕೆ.ಐ.ಸಿ, ಕುಂಬ್ರ ಪುತ್ತೂರು ಅಧ್ಯಕ್ಷರಾದ ಜನಾಬ್ ಕೆ.ಪಿ.ಅಹ್ಮದ್ ಹಾಜಿ, ಸಿನಾನ್ ಟ್ರಾನ್ಸ್ ಪೋರ್ಟ್ ಮಾಲಕರಾದ ಜನಾಬ್ ಕೆ.ಬಿ. ಖಾಸಿಮ್ ಹಾಜಿ ಮಿತ್ತೂರು, ಬುಶ್ರಾ ಎಜುಕೇಶನಲ್ ಟ್ರಸ್ಟ್ ಸಂಚಾಲಕರಾದ ಜನಾಬ್ ಅಬ್ದುಲ್ ಅಝೀಝ್, ಜನಾಬ್ ಉಸ್ಮಾನ್ ಹಾಜಿ ಸಂಪ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಇದೇ ಸಂದರ್ಭದಲ್ಲಿ ಜನಾಬ್ ಹರೇಕಳ ಹಾಜಬ್ಬ, ಜನಾಬ್ ಇಸ್ಮತ್ ಫಜೀರ್, ಜನಾಬ್ ಹನೀಫ್ ಪುತ್ತೂರು, ಜನಾಬ್ ಹಮೀದ್ ಕಂದಕ್ ಮಿತ್ತೂರು, ಜನಾಬ್ ಇಬ್ರಾಹಿಮ್ ಬಾತಿಷ, ಜನಾಬ್ ಶಂಶೀರ್ ಎಸ್.ಇ, ಜನಾಬ್ ಅನ್ಸಾರ್ ಬೆಳ್ಳಾರೆ, ಜನಾಬ್ ಸಮೋ, ಜನಾಬ್ ಮೊಹಮ್ಮದ್ ರಫೀಕ್ ಒಕ್ಕೆತ್ತೂತು, ಜನಾಬ್ ರಶೀದ್ ವಿಟ್ಲ ಇವರನ್ನು ಅಕಾಡೆಮಿಯ ಪರವಾಗಿ ಸನ್ಮಾನಿಸಲಾಯಿತು.

  ಬಹುಭಾಷಾ ಹಿರಿಯ ಸಾಹಿತಿ ಜನಾಬ್ ಮುಹಮ್ಮದ್ ಬಡ್ಡೂರು ಇವರ ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಿತು.ಅನಂತರ ಸಹಾಯ ಟಿ.ವಿಯ ವಿ.ಜೆ,ಅಖಿಲ್ ಫಾರೂಕ್ ರವರಿಂದ ವಿಶೇಷ ಆಕರ್ಷಕ ಗೇಮ್ಸ್ ಮತ್ತು ಮನರಂಜನ ಕಾರ್ಯಕ್ರಮ ನಡೆಯಿತು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬರವರು ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ಮುಹಮ್ಮದ್ ಝಕಾರಿಯ ಕಲ್ಲಡ್ಕ ವಂದಿಸಿದರು. ಅಕಾಡೆಮಿಯ ಸದಸ್ಯರಾದ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮವನ್ನು ನಿರೂಪಿಸಿದರು.

 • “ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ” ಕಾರ್ಯಕ್ರಮ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 13-10-2015 ರಂದು ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ನಡೆಸಿದ “ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

  ದ.ಕ.ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖಾ ಸಚಿವರಾದ ಶ್ರೀ ಬಿ. ರಮಾನಾಥ ರೈ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷೆಯೊಂದರ ಕಡಿಮೆ ಬಳಕೆ ಆ ಭಾಷೆಯ ನಾಶಕ್ಕೆ ಕಾರಣವಾಗುತ್ತದೆ. ಭಾಷೆಗಳ ಉಳಿವು ಹಾಗೂ ಅದರ ಹಿಂದಿನ ಸಂಸ್ಕೃತಿಯ ಉಳಿವಿಗಾಗಿ ಸರಕಾರ ಅಕಾಡೆಮಿಗಳನ್ನು ಸ್ಥಾಪಿಸಿದೆ. ದ.ಕ.ಜಿಲ್ಲೆ ವಿವಿಧ ಧರ್ಮ-ಭಾಷಿಗರ ಜಿಲ್ಲೆಯಾಗಿದ್ದು, ಇಡೀ ರಾಜ್ಯಕ್ಕೆ ಸೌಹಾರ್ದತೆಯ ಸಂಕೇತವಾಗಿತ್ತು. ಆದರೆ ಧರ್ಮ-ಧರ್ಮಗಳ ನಡುವೆ ವಿಷ ಬೀಜಗಳನ್ನುಭಿತ್ತಿ, ನೀರು ಕದಡಿ ಮೀನು ಹಿಡಿಯುವ ಮತೀಯವಾದಿಗಳಿಂದಾಗಿ ಜಿಲ್ಲೆಯ ಹೆಸರು ಕೆಡುತ್ತಿದೆ ಎಂದರು.

  ಪ್ರೊ| ಬಿ.ಎಂ. ಇಚ್ಲಂಗೋಡುರವರ ‘ನಾನುಂ-ನೀನುಂ-ದುನಿಯಾವುಂ’ ಎಂಬ ಕೃತಿಯನ್ನು ಬಿಡುಗಡೆ ಮಾಡಿದ ಶ್ರೀ ಬಿ. ರಮಾನಾಥ ರೈಯವರು ಅದೇ ಸಂದರ್ಭದಲ್ಲಿ ಬಂಟ್ವಾಳ ನಿವೃತ್ತ ಶಿಕ್ಷಕ ಜನಾಬ್ ಅಬ್ದುಲ್ ಸಲಾಂ ಮಾಸ್ಟರ್, ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರಾದ ಜನಾಬ್ ಅಬ್ದುಲ್ ಖಾದರ್ ಕುಕ್ಕಿಲ, ಹಿರಿಯ ಕವಿ ಜನಾಬ್ ರಹೀಮ್ ಬಿ.ಸಿ. ರೋಡ್, ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಜನಾಬ್ ಬಿ. ಅಬೂಬಕ್ಕರ್ ಮುಂತಾದ ಸಾಧಕರನ್ನು ಸಚಿವರು ಸನ್ಮಾನಿಸಿದರು. ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಫೌಝಿಯ, ನೌಶೀದ, ಮಿನಾಝ ಫರ್ವೀನ್, ರಂಝೀನ, ಆಯಿಶ ಸಮ್ರೀನ, ಕಂಶೀರ, ಆಯಿಷತುಲ್ ಆಶಿಕ, ಉಮ್ಮು ಸಲ್ಮಾ ಇವರಿಗೆ ಪುರಸ್ಕಾರ ಮಾಡಲಾಯಿತು.

  ಈ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಬಿ.ಎ. ಮುಹಮ್ಮದ್ ಹನೀಫ್ ವಹಿಸಿದ್ದರು.ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಕೃತಿಕಾರರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಉಪಸಂಪಾದಕ ಜನಾಬ್ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಕೃತಿ ಪರಿಚಯಿಸಿದರು.

  ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಎಸ್.ಭಟ್, ದ.ಕ.ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಚಂದ್ರ ಪ್ರಕಾಶ್ ಶೆಟ್ಟಿ, ಜನಾಬ್ ಎಮ್.ಎಸ್. ಮೊಹಮ್ಮದ್, ಶ್ರೀಮತಿ ಮಮತಾ ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಐಡಾ ಸುರೇಶ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಾಕ್ಷರಾದ ಜನಾಬ್ ಅಬೂಬಕ್ಕರ್ ಸಜಿಪ, ಕುಪ್ಪೆಪದವು ಗ್ರಾಮ ಪಂಚಾಯತ್ ಸದಸ್ಯ ಜನಾಬ್ ಬಿ.ಎ. ಅಬೂಬಕ್ಕರ್, ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಟ್ರಸ್ಟಿ ಮುಹಮ್ಮದ್ ಹನೀಫ್ ಹಾಜಿ, ಕಲ್ಲಡ್ಕ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಸದಸ್ಯ ಜನಾಬ್ ಬಿ.ಕೆ. ಇದಿನಬ್ಬ ಅನುಗ್ರಹ ಮಹಿಳಾ ಕಾಲೇಜಿನ ಸಂಚಾಲಕರಾದ ಜನಾಬ್ ಇಬ್ರಾಹಿಮ್ ಚೆಂಡಾಡಿ, ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡದ ಉಪನ್ಯಾಸಕರಾದ ಜನಾಬ್ ಅಬ್ದುಲ್ ರಝಾಕ್, ಅನುಗ್ರಹ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಚಿತ್ರ, ಅನುಗ್ರಹ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ರತ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಬಳಿಕ ಬ್ಯಾರಿ ಕವಿಗೋಷ್ಠಿ ಹಾಗೂ ಅಶ್ರಫ್ ಅಪೊಲೊ ಮತ್ತು ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರಿಗೆ ಬ್ಯಾರಿ ಕ್ವಿಝ್ ಹಾಗೂ ಬ್ಯಾರಿ ಭಾಷೆಯಲ್ಲಿ ಓದುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಕಾಡೆಮಿಯ ಅಧ್ಯಕ್ಷ ಜನಾಬ್ ಬಿ.ಎ. ಮುಹಮ್ಮದ್ ಹನೀಫ್ ಪ್ರಸ್ತಾವನೆಗೈದರು. ಅಕಾಡೆಮಿಯ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿಯ ಸದಸ್ಯ ಅಬ್ದುಲ್ ಲತೀಫ್ ನೇರಳಕಟ್ಟೆ ವಂದಿಸಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ನಗದು ಬಹುಮಾನ, ಸ್ಮರಣಿಕೆ, ಸನ್ಮಾನಿತರಿಗೆ ಮತ್ತು ಪುರಸ್ಕೃತರಿಗೆ ನಗದು, ಸ್ಮರಣಿಕೆಯನ್ನು ನೀಡಲಾಯಿತು.

 • “ಬ್ಯಾರಿ ಭಾಷಾ ದಿನಾಚರಣೆ”
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 03-10-2015 ರಂದು ಮಂಗಳೂರಿನ ಟಿ.ವಿ.ರಮಣ್ ಪೈ ಕನ್ ವೆನ್ಷನ್ ಸೆಂಟರ್ ನಲ್ಲಿ ನಡೆಸಿದ “ಬ್ಯಾರಿ ಭಾಷಾ ದಿನಾಚರಣೆ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

  ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್.ಲೋಬೋ ರವರು ಫೋಟೋ ಜರ್ನಲಿಸ್ಟ್ ಅಹ್ಮದ್ ಅನ್ವರ್ ರವರ ಆಕರ್ಷಕ ಛಾಯಾಚಿತ್ರ ಮತ್ತು ಪುಸ್ತಕ ಪ್ರದರ್ಶನ ಹಾಗೂ ಅಕಾಡೆಮಿಯ ಪುಸ್ತಕ ಸ್ಟಾಲ್ಅನ್ನು ಉದ್ಘಾಟಿಸಿ ಶ್ರಿ ಜೆ.ಆರ್.ಲೋಬೋ ರವರು ಬ್ಯಾರಿ ಭಾಷೆ ತನ್ನದೇ ಆದ ಸಂಸ್ಕೃತಿ ಹಾಗೂ ಪರಂಪರೆ ಹೊಂದಿದೆ. ವಿವಿಧ ಚಿಂತನೆಗಳನ್ನು ಭಾಷೆಯ ಮಾಧ್ಯಮದ ಮೂಲಕ ಬೆಳೆಸಬೇಕು. ಯಾವುದೇ ಭಾಷೆಯನ್ನು ಮೇಲು ಕೀಳೆಂದು ಭಾವಿಸದೆ ಎಲ್ಲವನ್ನು ಪ್ರೀತಿಸಬೇಕು ಎಂದರು.

  ಮಾಜಿ ಉನ್ನತ ಶಿಕ್ಷಣ ಸಚಿವರಾದ ಜನಾಬ್.ಬಿ.ಎ.ಮೊಹಿದಿನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಬ್ಯಾರಿ ಭಾಷಾ ದಿನಾಚರಣೆ ಹಾಗೂ ಮಾಸಾಚರಣೆಯ ಕಾರ್ಯಕ್ರಮಕ್ಕೆ ಲಾಂಛನವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಅಕಾಡೆಮಿಯ ಭಾಷಾ ಬೆಳವಣಿಗೆಗೆ ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಶುಭ ಹಾರೈಸಿದರು.

  ದ.ಕ.ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ ರಮಾನಾಥ ರೈ ರವರು ಸಾಹಿತ್ಯಕ್ಕೂ ಪ್ರೊತ್ಸಾಹ ಅಗತ್ಯ ಸಾಕಷ್ಟು ಭಾಷೆಗಳು ಈಗಾಗಲೆ ನಶಿಸಿ ಹೋಗುವ ಹಂತದಲ್ಲಿವೆ.ಹಿಂದೆ ಮರಾಠಿ ನಾಯ್ಕ್ ಸಮುದಾಯ ಮರಾಠಿ ಭಾಷೆ ಮಾತನಾಡುತ್ತಿತ್ತು. ಆದರೆ, ಇತ್ತೀಚೆಗೆ ಈ ಭಾಷೆ ಶೇ.70 ರಿಂದ 80ರಷ್ಟು ನಶಿಸಿಹೋಗಿವೆ. ಆದ್ದರಿಂದ ಭಾಷೆಗಳು ಬೆಳೆಸುವುದರೊಂದಿಗೆ ಆಯಾಯ ಭಾಷಾಅಕಾಡೆಮಿಗಳು ಸಾಹಿತ್ಯಕ್ಕೂ ಪ್ರೋತ್ಸಾಹ ನೀಡಬೇಕು ಎಂದರು. ಅದೇ ಸಂದರ್ಭದಲ್ಲಿ ಫಕ್ರುದ್ದೀನ್ ಇರುವೈಲ್ ರಚಿತ ’ಕಿರ್ಫ’ ಕಥಾಸಂಕಲನವನ್ನು ಶ್ರೀ ರಮಾನಾಥ ರೈರವರು ಬಿಡುಗಡೆಗೊಳಿಸಿದರು.

  ಬ್ಯಾರಿ ಭಾಷೆ ಮಾತನಾಡಬಲ್ಲ ಬ್ಯಾರಿಯೇತರಿಗೆ ಪ್ರಾತಿನಿಧಿಕವಾಗಿ ಸನ್ಮಾನ ಕಾರ್ಯಕ್ರಮದಲ್ಲಿ ಬಜ್ಪೆ ರಘುನಾಥ ಶೆಣ್ಯೆಯವರನ್ನು ಗೌರವಿಸಲಾಯಿತು. ಭಾಷಾ ಅಭಿವೃದ್ದಿಗೆ ಶ್ರಮಿಸಿದ ಸಾಹಿತಿಗಳಾದ ಮುಹಮ್ಮದ್ ಬಡ್ಡೂರು, ಅಬ್ದುಲ್ ಖಾದರ್ ಕುತ್ತೆತ್ತೂರು, ಬಶೀರ್ ಅಹ್ಮದ್ ಕಿನ್ಯಾ, ಅಬ್ದುಲ್ ಅಝೀಝ್ ಹಕ್,ಅಶ್ರಫ್ ಅಪೊಲೊ,ರಶೀದ್ ನಂದಾವರ, ಮರ್ಯಮ್ ಇಸ್ಮಾಈಲ್. ಆಯಿಶಾ ಯು.ಕೆ. ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಮೊಹಮ್ಮದ್, ಬ್ಯಾರಿ ಚಲಚಿತ್ರ ನಿರ್ಮಿಸಿದ ಅಲ್ತಾಫ್ ಹುಸೈನ್ ಕೃಷ್ಣಾಪುರ, ಬ್ಯಾರಿ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮದ ಬೆಳವಣಿಗೆಗೆ ಶ್ರಮಿಸಿದ ಎಂ.ಜಿ.ರಹೀಂ ಅವರನ್ನೂ ಸನ್ಮಾನಿಸಲಾಯಿತು.

  ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶೀ ಸತ್ಯನಾರಾಯಣ ಮಲ್ಲಿಪಟ್ನ ರವರು ಭಾಷಾ ವೈವಿಧ್ಯತೆ ಬಗ್ಗೆ ಮಂಡಿಸಿ,ಯಾವುದೇ ಭಾಷೆಯನ್ನು ಮಾತನಾಡುವವರು ಇರುವವರೆಗೆ ಆ ಭಾಷೆ ನಾಶವಾಗಲು ಸಾಧ್ಯವಿಲ್ಲ. ಲಿಪಿ ಇರುವ ಭಾಷೆಗಳೇ ಶ್ರೇಷ್ಟ ಎನ್ನುವ ಕಲ್ಪನೆ ಸರಿಯಲ್ಲ ಎಂದವರು ನಿದರ್ಶನಗಳನ್ನು ನೀಡಿ ವಿವರಿಸಿದರು. ವಿವಿಧ ಸ್ಪರ್ಧೆ ವಿಜೇತರಿಗೆ ಶಾಸಕರಾದ ಬಿ.ಎ.ಮೊಹಿದಿನ್ ಬಾವ ರವರು ಬಹುಮಾನ ವಿತರಿಸಿದರು.

  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಜಾನಕಿ ಎಮ್.ಬ್ರಹ್ಮಾವರ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರಾಯ್ ಕ್ಯಾಸ್ತಲಿನೊ ರವರು ಶುಭಾಸಂಶನೆಗೈದು, ಬಳಿಕ ಮಾತನಾಡಿದ ಶ್ರೀ ರಾಯ್ ಕ್ಯಾಸ್ತಲಿನೊ ಅವರು, ಎಲ್ಲ ಭಾಷೆಗಳನ್ನು ಕಲಿತಂತೆ ಸಂಸ್ಕೃತಿಯೊಂದಿಗೆ ಸೌಹಾರ್ದತೆಯೂ ಬೆಳೆಯುತ್ತದೆ. ಭಾಷೆಗಳನ್ನು ಬಳಸಿದಂತೆ, ಅವುಗಳನ್ನು ಉಳಿಸಲು ಸಾಧ್ಯ ಎಂದರು.

  ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಾಜಿ ಇಬ್ರಾಹಿಮ್ ಕೋಡಿಜಾಲ್, ಮಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶ್ರೀ ರಾಜೇಂದ್ರಕುಮಾರ್, ಮಂಗಳೂರು ವಕೀಲ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಪಿ.ಚೆಂಗಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾಬ್ ನಾಸಿರ್ ಸಜಿಪ, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಬೆಂಗಳೂರು ಇದರ ಪ್ರತಿನಿಧಿ ಮಮ್ತಾಝ್ ಅಲಿ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

  ಪತ್ರಕರ್ತ ಹಂಝಮಲಾರ್ ರವರು ಕೃತಿ ಪರಿಚಯವನ್ನು ಮಾಡಿದರು. ಅಶ್ರಫ್ ಅಪೊಲೊ ಮತ್ತು ಬಶೀರ್ ಕಿನ್ಯ ರವರು ದೇಶ ಭಕ್ತಿ ಗೀತೆಯನ್ನು ಹಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಮುಹಮ್ಮದ್ ಶರೀಫ್ ನಿರ್ಮುಂಜೆ ರವರು ಬ್ಯಾರಿ ಭಾಷಾಭಿಮಾನ ಗೀತೆಯನ್ನು ಹಾಡಿದರು.

  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿ.ಎ.ಮುಹಮ್ಮದ್ ಹನೀಫ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

  ಶೌಕತ್ ಪಡುಬಿದ್ರಿ, ಶಮೀರ್ ಮುಲ್ಕಿ, ಅಶ್ರಫ್ ಅಪೊಲೊ ಹಾಗೂ ಬಶೀರ್ ಕಿನ್ಯರವರ ತಂಡದಿಂದ ಬ್ಯಾರಿ ಹಾಡುಗಳು, ಎಂ.ಜಿ.ರಹೀಂ ರವರ ತಂಡದಿಂದ ದಫ್, ಕೋಲ್ಕಲಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಜನಾಬ್ ಉಮರಬ್ಬ ರವರು ಸ್ವಾಗತವನ್ನು ಮಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜನಾಬ್ ಬಿ.ಎ. ಮುಹಮ್ಮದ್ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ಶ್ರೀಮತಿ ಝೊಹರಾ ಅಬ್ಬಾಸ್ ರವರು ಧನ್ಯವಾದವನ್ನು ಮಾಡಿದರು. ಸಾಹಿತಿ ಜನಾಬ್ ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮವನ್ನು ನಿರೂಪಿಸಿದರು.

 • “ಬ್ಯಾರಿ ಭಾಷಾ ದಿನಾಚರಣೆ”ಯ ಪ್ರಯುಕ್ತ “ಬ್ಯಾರಿ ಭಾಷೆ ಓದುವ ಸ್ಪರ್ಧೆ”
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು “ಬ್ಯಾರಿ ಭಾಷಾ ದಿನಾಚರಣೆ”ಯ ಪ್ರಯುಕ್ತ ದಿನಾಂಕ 02-10-2015 ರಂದು ಮುಸ್ಲಿಂ ಇನ್ಸ್ ಟಿಟ್ಯೂಟ್ ಎಜ್ಯುಕೇಶನ್ ಫೆಡರೇಶನ್ ಕಚೇರಿಯಲ್ಲಿ ನಡೆಸಿದ “ಬ್ಯಾರಿ ಭಾಷೆ ಓದುವ ಸ್ಪರ್ಧೆ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

  ಬ್ಯಾರಿ ಭಾಷೆ ಓದುವ ಸ್ಪರ್ಧೆಯನ್ನು ಉದ್ಘಾಟಿಸಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ರಾದ ಉಮರಬ್ಬ ರವರು ಅಭಿಮತ ನೀಡಿ, ಬಳಿಕ ಮಾತನಾಡಿದ ಅವರು ಓರ್ವ ಮನುಷ್ಯ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ, ಅರ್ಥಪೂರ್ಣ ನೆಲೆಯಲ್ಲಿ ಜೀವನ ಸಾಗಿಸಬೇಕಾದರೆ ಆತನಲ್ಲಿ ಅಕ್ಷರ ಜ್ಞಾನ ಇರುವುದು ಅಗತ್ಯ ಎಂದರು.

  ಬ್ಯಾರಿ ಭಾಷಾ ಮಾಸಾಚರಣೆ ಪ್ರಯುಕ್ತ ಶುಕ್ರವಾರ ಮಂಗಳೂರಿನ ಮುಸ್ಲಿಂ ಇನ್ಸ್ ಟಿಟ್ಯೂಟ್ ಎಜ್ಯುಕೇಶನ್ ಫೆಡರೇಶನ್ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಬ್ಯಾರಿ ಭಾಷೆ ಓದುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

  ಓದು ಮತ್ತು ಬರಹದತ್ತ ನಾವು ಎಷ್ಟು ಆಸಕ್ತರಾಗಿರುತ್ತೇವೆಯೋ ನಮ್ಮ ಜೀವನವೂ ಸಾರ್ಥಕ ಎನಿಸುತ್ತದೆ. ಈ ವಿಷಯದಲ್ಲಿ ನಿರಾಸಕ್ತನಾದರೆ ಜೀವನವೂ ನಿಷ್ಕ್ರಿಯವಾಗುತ್ತದೆ. ಪ್ರವಾದಿಯವರೂ ಓದು, ಬರಹಕ್ಕೆ ಪ್ರೋತ್ಸಾಹ ನೀಡಿದ್ದರು ಎಂದರು.

  ಹಿರಿಯ ಸಂಶೋದಕರಾದ ಪ್ರೊ.ಬಿ.ಎಂ.ಇಚ್ಲಂಗೋಡು ಬ್ಯಾರಿ-ಕನ್ನಡ-ಇಂಗ್ಲೀಷ್ ನಿಘಂಟಿನ ಉಪಸಂಪಾದಕರಾದ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಅಕಾಡೆಮಿಯ ಸದಸ್ಯರಾದ ಝೊಹರಾ ಅಬ್ಬಾಸ್, ಝಕರಿಯಾ ಕಲ್ಲಡ್ಕ, ಆಲಿಯಬ್ಬ ಜೋಕಟ್ಟೆ ಮತ್ತಿತ್ತರು ಉಪಸ್ಥಿತರಿದ್ದರು.

  ಕರ್ನಾಟಕ ಬ್ಯಾರಿ ಸಾಹಿತ್ಯ ಆಕಾಡೆಮಿಯ ಮಾಜಿ ಸದಸ್ಯರಾದ ಹಂಝಮಲಾರ್ ರವರು ನಿಯಮವನ್ನು ಓದಿದರು. ಅದೇ ಸಂದರ್ಭದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅಕಾಡೆಮಿಯ ಸದಸ್ಯರಾದ ಶೆರೀಫ್ ನಿರ್ಮುಂಜೆ ರವರು ಸ್ವಾಗತವನ್ನು ಮಾಡಿದರು. ಅಕಾಡೆಮಿಯ ಸದಸ್ಯರಾದ ಹಮೀದ್ ಗೋಳ್ತಮಜಲು ರವರು ವಂದನಾರ್ಪಣೆಯನ್ನು ಮಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಯೂಸುಫ್ ವಕ್ತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

 • “ಬ್ಯಾರಿ ಭಾಷಾ ಪ್ರಚಾರ ಅಭಿಯಾನದ ಉದ್ಘಾಟನಾ ಸಮಾರಂಭ”
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 01-10-2015 ರಂದು ದ.ಕ.ಜಿಲ್ಲಾಧಿಕಾರಿಗಳ ಕಛೇರಿ ಆವರಣ ಮುಂಭಾಗದಲ್ಲಿ ನಡೆಸಿದ “ಬ್ಯಾರಿ ಭಾಷಾ ಪ್ರಚಾರ ಅಭಿಯಾನ ಉದ್ಘಾಟನಾ ಸಮಾರಂಭ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

  ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜೆಸಿಂತಾ ಆಲ್ಫ್ರೆಡ್ ರವರು ಪ್ರಚಾರ ಅಭಿಯಾನಕ್ಕೆ ಚಾಲನೆಯನ್ನು ನೀಡಿ, ಬಳಿಕ ಮಾತನಾಡಿದ ಅವರು ಬ್ಯಾರಿ ಭಾಷೆಯ ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆನೀಡುವ ಕೆಲಸವು ಇಂತಹ ಕಾರ್ಯಕ್ರಮ, ಸಾಹಿತ್ಯ, ದಾಖಲೆಗಳಿಂದ ಆಗಬೇಕಿದೆ. ಬ್ಯಾರಿ ಸಮುದಾಯದ ಸಂಘ ಸಂಸ್ಥೆಗಳು ಉತ್ತಮ ಸೇವಾಕಾರ್ಯಗಳನ್ನು ಮಾಡುತ್ತಿವೆ. ಇದರೊಂದಿಗೆ ಸಂಸ್ಕೃತಿ ಉಳಿಸುವ ಕೆಲಸವನ್ನೂ ಮಾಡಬೇಕಿದೆ ಎಂದು ಹೇಳಿದರು.

  ಚಿಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಜನಾಬ್ ಕೆ.ಮೊಹಮ್ಮದ್ ರವರು ಹಾಡುಗಳ ಸಿ.ಡಿ.ಬಿಡುಗಡೆ ಮಾಡಿ ಶುಭ ಹಾರೈಸಿದರು. ಬ್ಯಾರಿ ಪ್ರಚಾರ ಅಭಿಯಾನದ ಕರಪತ್ರವನ್ನು ಮಂಗಳೂರು ಆಕಾಶವಾಣಿಯ ಸಹಾಯಕ ನಿಲಯದ ನಿರ್ದೇಶಕರಾದ ಡಾ!.ವಸಂತ್ ಕುಮಾರ್ ಪೆರ್ಲ ರವರು ಬಿಡುಗಡೆ ಮಾಡಿದರು. ಮಂಗಳೂರು ಆಕಾಶವಾಣಿಯಲ್ಲಿ ಬ್ಯಾರಿ ಭಾಷಾ ಕಾರ್ಯಕ್ರಮ ಪ್ರಸಾರ ಮಾಡಲು ಮಂಡಿಸಿದ ಹಕ್ಕೊತ್ತಾಯವನ್ನು ಅಕಾಡಮಿಯ ಸದಸ್ಯರಾದ ಅಬ್ದುಲ್ ಹಮೀದ್ ಗೋಳ್ತಮಜಲು ರವರು ವಾಚಿಸಿದರು.

  ಕಾರ್ಪೋರೇಟರ್ ಲತೀಫ್ ಕಂದಕ್, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ.ಅಸ್ಲಂ, ಉಪಾಧ್ಯಕ್ಷರಾದ ಹಾಜಿ ಹಮೀದ್ ಕಂದಕ್,ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜೆಪ್ಪು ಮತ್ತಿತರು ಉಪಸ್ಥಿತರಿದ್ದರು. ಅದೇ ರೀತಿ ಮುಹಮ್ಮದ್ ಶರೀಫ್ ನಿರ್ಮುಂಜೆ, ಅಶ್ರಫ್ ಅಪೊಲೊ ಹಾಗೂ ಬಶೀರ್ ಕಿನ್ಯ ರವರು ಬ್ಯಾರಿ ಹಾಡುಗಳನ್ನು ಹಾಡಿದರು.

  ಬ್ಯಾರಿ ಭಾಷಾ ದಿನಾಚರಣೆಗೆ ಪೂರ್ವಭಾವಿಯಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಭಾಷಾ ಪ್ರಚಾರ ಅಭಿಯಾನದ ಕುದುರೆಗಾಡಿಯು ನಗರದ 32 ಸ್ಥಳಗಳಲ್ಲಿ ಗುರುವಾರ ಸಂಚರಿಸಿತು.

  ಕುದುರೆ ಗಾಡಿಯ ಮೂಲಕ ನಗರದಾದ್ಯಂತ ಸಂಚರಿಸಿ ಬ್ಯಾರಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಭಂದಿಸಿದ ಕರಪತ್ರಗಳನ್ನು ಹಂಚಿ, ಸಾರ್ವಜನಿಕರನ್ನು ಬ್ಯಾರಿ ಭಾಷೆಯತ್ತ ಸೆಳೆಯಲು ಅಕಾಡೆಮಿ ಈ ಕಾರ್ಯಕ್ರಮ ಆಯೋಜಿಸಿತ್ತು.ಬ್ಯಾರಿ ಗೀತೆಗಳ ಪ್ರಸಾರ ಮತ್ತು ಶನಿವಾರ ನಡೆಯುವ ಬ್ಯಾರಿ ಭಾಷಾ ದಿನಾಚರಣೆ ಸಮಾರಂಭದ ಮಾಹಿತಿಯನ್ನೂ ಈ ಗಾಡಿಗೆ ಅಳವಡಿಸಿದ್ದ ದ್ವನಿವರ್ಧಕದ ಮೂಲಕ ಪ್ರಸಾರ ಮಾಡಲಾಯಿತು.

  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿ.ಎ.ಮುಹಮ್ಮದ್ ಹನೀಫ್ ರವರು ಸ್ವಾಗತಿಸಿದರು. ಕರ್ನಾಟಕ ಬ್ಯಾರಿ ಅಕಾಡೆಮಿಯ ಸದಸ್ಯರಾದ ಯೂಸುಫ್ ವಕ್ತಾರ್ ವಂದಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಜನಾಬ್ ಉಮರಬ್ಬ ರವರು ಕಾರ್ಯಕ್ರಮ ನಿರೂಪಿಸಿದರು.

 • ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮ” ಕಾರ್ಯಕ್ರಮ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 05-09-2015 ರಂದು ಉಡುಪಿಯ ಲಯನ್ಸ್ ಕ್ಲಬ್ ನಲ್ಲಿ ನಡೆಸಿದ “ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

  ನಗರಾಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಅಕಾಡೆಮಿಯ ಒಂದು ವರ್ಷದ ಕಾರ್ಯಕ್ರಮಗಳ ಇಣುಕು ನೋಟ ಸಿ.ಡಿ. ಬಿಡುಗಡೆಯನ್ನು ಮಾಡಿದರು. ಉಡುಪಿ ಕ್ಷೇತ್ರದ ಶಾಸಕರಾದ ಶೀ ಪ್ರಮೋದ್ ಮದ್ವರಾಜ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯರು ನಮಗೆ ಕೊಟ್ಟ ಭಾಷಾ ಶೀಮಂತಿಕೆ ಹಾಗೂ ಕೆಲಸವನ್ನು ನಾವು ಮಾಡಬೇಕು, ಭಾರತ ದೇಶದಲ್ಲಿರುವ 1,600ಕ್ಕೂ ಅಧಿಕ ಭಾಷೆಗಳ ವೈವಿಧ್ಯತೆ ವಿಶ್ವದ ಇನ್ಯಾವುದೇ ದೇಶಗಳಲಿಲ್ಲ. ಆದ್ದರಿಂದ ಸೌಹಾರ್ದವನ್ನು ಕಾಪಾಡಿ ಕೊಂಡು ಬರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಬೆಲ್ಕಿರಿ ಸಂಗಮ ಸಂಭ್ರಮ ವಿಶೇಷಾಂಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಬಿ.ಎ. ಮಹಮ್ಮದ್ ಹನೀಫ್ ರವರು ವಹಿಸಿದ್ದರು.

  ಉಡುಪಿ ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಆಧ್ಯಕ್ಷರಾದ ಜನಾಬ್ ಯಹ್ಯಾ ನಕ್ವಾ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಾಕ್ಷರಾದ ಜನಾಬ್ ಗುಲಾಮ್ ಮುಹಮ್ಮದ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಜನಾಬ್ ಅಶ್ಪಾಕ್ ಅಹ್ಮದ್ ಕಾರ್ಕಳ, ಉಡುಪಿ ಜಿಲ್ಲೆಯ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶೀ ಚಿತ್ತರಂಜನ್ ದಾಸ್ ಶೆಟ್ಟಿ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಮೋಹನಚಂದ್ರ ನಂಬ್ಯಾರ್, ಲೀಲಾಧರ್ ಶೆಟ್ಟಿ ಕಾಪು ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಂತರ್ ಧರ್ಮೀಯ ಸಂವಾದ ನಿರ್ದೇಶಕರಾದ ವಂ. ವಿಲಿಯಮ್ ಮಾರ್ಟಿಸ್ ಸಾಮಾಜಿಕ ಸಹಬಾಳ್ವೆಗೆ ಶಿಕ್ಷಕರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

  ಈ ಸಂದರ್ಭದಲ್ಲಿ ಬ್ಯಾರೀಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್, ಹಿಂದಿ ಭಾಷಾ ಶಿಕ್ಷಕರಾದ ಜನಾಬ್ ಮೊಹಿದಿನ್ ಮಾಸ್ಟರ್ ಕಾಪು, ಸರಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಜನಾಬ್ ಆದಂ ದವಳಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ನಿರ್ಮಲ್ ಕುಮಾರ್ ಮುಂತಾದ ಶಿಕ್ಷಕರನ್ನು ಅಕಾಡೆಮಿಯ ಪರವಾಗಿ ಸನ್ಮಾನಿಸಲಾಯಿತು.

  ಮಹವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ| ಅಬ್ದುಲ್ ರಝಾಕ್ ಡಿ.ಎಮ್.(ಕೆ.ಎಮ್.ಸಿ. ಮಣಿಪಾಲ), ಬಳಕೆದಾರರ ವೇದಿಕೆಯ ಗೌರವಾಧ್ಯಕ್ಷರಾದ ಹಾಜಿ ಕೆ. ಅಬೂಬಕ್ಕರ್ ಆತ್ರಾಡಿ, ಸಮಾಜ ಸೇವಕ ಜನಾಬ್ ಮೊಹಮ್ಮದ್ ಶರೀಫ್ ಕಾರ್ಕಳ ಹಾಗೂ ಯುವ ಬರಹಗಾರ ಯಾಕುಬ್ ಖಾದರ್ ಗುಲ್ವಾಡಿ ಇವರನ್ನು ಸನ್ಮಾನಿಸಲಾಯಿತು.

  ಉಡುಪಿ ಜಿಲ್ಲಾ ಬ್ಯಾರಿಗಳು ವಿಷಯದ ಬಗ್ಗೆ ನ್ಯಾಯವಾದಿ ಜನಾಬ್ ಹಂಝ ಹೆಜಮಾಡಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ಜಂ-ಇಯ್ಯತುಲ್ ಫಲಾಹ್ ಇದರ ಪ್ರಧಾನ ಕಾರ್ಯದರ್ಶಿ ಜನಾಬ್ ಖಾಸಿಮ್ ಬಾರ್ಕೂರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷರಾದ ಜನಾಬ್ ಎಮ್.ಪಿ. ಮೊÊದಿನಬ್ಬ, ಉಡುಪಿ ಜಿಲ್ಲಾ ತುಳು ನಾಡ ರಕ್ಷಣಾ ವೇದಿಕೆಯ ಉಪಾಧ್ಯಾಕ್ಷರಾದ ನಝೀರ್ ಕೋಟೇಶ್ವರ ಗೌರವ ಉಪಸ್ಥಿತಿಯಾಗಿ ಭಾಗವಹಿಸಿದ್ದರು.

  ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಕಿನ್ಯಾ, ಫೈಝಲ್ ಮುಲ್ಕಿ, ಅಶ್ರಫ್ ಅಪೊಲೊ, ಪಿ.ಎಮ್. ಸಿದ್ದೀಕ್ ಪಡುಬಿದ್ರಿ, ಪೇರೂರು ಜಾ ಹಾಗೂ ತೌಫೀಕ್ ಪಡುಬಿದ್ರಿ ಕವಿಗಳಾಗಿ ಭಾಗವಹಿಸಿದ್ದರು,

  ಬಶೀರ್ ಕಿನ್ಯಾ ಮತ್ತು ಅಶ್ರಫ್ ಅಪೊಲೊ ದೇಶಭಕ್ತಿ ಗೀತೆ ಹಾಡಿದರು. ಶೌಕತ್ ಪಡುಬಿದ್ರಿ, ಶಮೀರ್ ಮುಲ್ಕಿ ತಂಡದಿಂದ ಬ್ಯಾರಿ ಹಾಡುಗಳು, ದಫ್ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ಸದಸ್ಯ ಹಮೀದ್ ಪಡುಬಿದ್ರಿ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರ್ವಹಿಸಿದರು. ಆಹ್ವಾನಿತ ಅತಿಥಿ ಗಣ್ಯರಿಗೆ, ಕಲಾವಿದರಿಗೆ, ಸಾಧಕರಿಗೆ, ಸಾಹಿತಿಗಳಿಗೆ ಗೌರವ ಸಂಭಾವನೆ, ಆತಿಥ್ಯ, ಪ್ರಯಾಣಭತ್ಯೆ ಹಾಗೂ ಸ್ಮರಣಿಕೆಯನ್ನು ನಿಯಮಾನುಸಾರ ನೀಡಲಾಯಿತು.

 • “ಬ್ಯಾರಿ ಸಾಹಿತ್ಯ ಅಕಾಡೆಮಿ ವಾರ್ಷಿಕ ಅವಲೋಕನ 2014-15”
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 13-08-2015ರಂದು ಹೋಟೆಲ್ ಶ್ರೀನಿವಾಸ್, ನೆಲಮಹಡಿ, ಜಿ.ಹೆಚ್.ಎಸ್.ರೋಡ್, ಹಂಪನಕಟ್ಟೆ, ಮಂಗಳೂರು ಇಲ್ಲಿ ನಡೆಸಿದ “ಬ್ಯಾರಿ ಸಾಹಿತ್ಯ ಅಕಾಡೆಮಿ ವಾರ್ಷಿಕ ಅವಲೋಕನ 2014-15” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಬಿ.ಎ. ಮುಹಮ್ಮದ್ ಹನೀಫ್ ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಕೃತಿಗಳಿಗೆ ಮಾರುಕಟ್ಟೆ ಒದಗಿಸುವ ಮತ್ತು ಪ್ರಕಟಿತ ಎಲ್ಲ ಬ್ಯಾರಿ ಕೃತಿಗಳು, ಸಿ.ಡಿ.ಗಳು ಪ್ರತಿಯೊಬ್ಬ ಬ್ಯಾರಿ ಸಾಹಿತ್ಯಾಸಕ್ತರ ಮನೆ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಶೀಘ್ರ ಬ್ಯಾರಿ ಸಂಚಾರಿ ಗ್ರಂಥಾಲಯ ಸ್ಥಾಪಿಸಲಾಗುವುದು, ಅಕಾಡೆಮಿಯ ಪ್ರಸಕ್ತ ಅವಧಿ ಪೂರ್ತಿಗೊಳಿಸುವ ಮುನ್ನ ಮಂಗಳೂರಿನಲ್ಲಿ ವಿಶ್ವ ಬ್ಯಾರಿ ಪ್ರತಿನಿಧಿ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ.

  2015ರ ಅ.3ರಿಂದ 31ರವರೆಗೆ ಮಂಗಳೂರು, ಉಡುಪಿ, ಬೆಂಗಳೂರು ಸಹಿತ ದೇಶ, ವಿದೇಶಗಳಲ್ಲಿ ಬ್ಯಾರಿ ಭಾಷಾ ಮಾಸಾಚರಣೆ ಪ್ರಯುಕ್ತ ಕಾರ್ಯಕ್ರಮ ನಡೆಸಲಾಗುವುದು. ವಿವಿಧ ಬ್ಯಾರಿ ಕಲೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಬ್ಯಾರಿ ಕಲಾ ಸಂಭ್ರಮ ಆಚರಿಸಲಾಗುವುದು. ಬ್ಯಾರಿ ಅಧ್ಯಯನಕಾರರಿಗೆ ಡಾ| ವಹಾಬ್ ದೊಡ್ಡಮನೆ ಸ್ಮಾರಕ ಮತ್ತು ಡಾ. ಸುಶೀಲ ಉಪಾಧ್ಯಾಯ ಸ್ಮಾರಕ ಬ್ಯಾರಿ ಮಹಿಳಾ ಸಾಹಿತಿಗೆ ಪ್ರಶಸ್ತಿಗಳನ್ನು ನೀಡಲಾಗುವುದು, ಸಮಗ್ರ ಬ್ಯಾರಿ ಕಥಾ ಸಂಕಲನ, ಸಮಗ್ರ ಬ್ಯಾರಿ ಕವನ ಸಂಕಲನ, ಬ್ಯಾರಿ ಸಾಹಿತ್ಯ ಚರಿತ್ರೆ ಕೃತಿಗಳನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

  ಮುಖ್ಯ ಅತಿಥಿಗಳಾದ ದ.ಕ.ಜಿಲ್ಲಾ ಯೋಜನಾ ಸಮಿತಿ ಸದಸ್ಯರಾದ ಜನಾಬ್ ಮುಸ್ತಫಾ ಸುಳ್ಯ, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಜನಾಬ್ ಕೆ. ಮೊಹಮ್ಮದ್ ಬ್ಯಾರಿ ಭವನ ನಿರ್ಮಾಣವಾಗಬೇಕೆಂದರು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಆದ ಜನಾಬ್ ಅತ್ತೂರು ಚೆಯ್ಯಬ್ಬ ಬ್ಯಾರಿ ಭಾಷಾ ನಿಘಂಟು ರಚನೆ ಜತೆಗೆ ಹೆಚ್ಚಿನ ಅನುವಾದ ಕಾರ್ಯ ನಡೆಯಬೇಕು ಎಂದರು. ಯುವ ಬರಹಗಾರ ಜನಾಬ್ ಯಾಕುಬ್ ಖಾದರ್ ಗುಲ್ವಾಡಿ, ಸಾಹಿತಿಗಳಾದ ಶ್ರೀಮತಿ ಮರಿಯಮ್ ಇಸ್ಮಾಯಿಲ್ ಅತಿಥಿ ಭಾಷಣ ಮಾಡಿದರು.

  ಅಬ್ದುಲ್ ಅಝೀಝ್ ಬೈಕಂಪಾಡಿ ಇವರು ಕಂಡ ಮುಖಗಳೇ ಮತ್ತೆ ಮತ್ತೆ ಕಾಣುವ ಬದಲಿಗೆ ಬ್ಯಾರಿ ಸಾಹಿತ್ಯದಲ್ಲಿ ಯುವಕರು ಹೆಚ್ಚು ತೊಡಗಿಸಿಕೊಳ್ಳಬೇಕು, ಶಾಲೆಗಳಲ್ಲಿ ಬ್ಯಾರಿ ಭಾಷೆಯಲ್ಲಿ ಪ್ರಬಂಧ, ಇತರ ಸ್ಪರ್ಧೆಗಳನ್ನು ನಡೆಸಬೇಕು, ಪ್ರತಿಭಾ ಕಾರಂಜಿಗಳು ಬ್ಯಾರಿ ಭಾಷೆಯಲ್ಲೇ ನಡೆಯಬೇಕು ಎಂದರು. ಪತ್ರಕರ್ತ ಹಂಝಮಲಾರ್ ಇವರು ಬ್ಯಾರಿ-ತುಳು ನಾಟಕ ಪ್ರದರ್ಶನ, ವಿಶ್ವ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಸುವ ಅಗತ್ಯವನ್ನು ಒತ್ತಿ ಹೇಳಿದರು. ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಇವರು ತುಳು ಭಾಷೆಯಲ್ಲಿ ಮಂದಾರ ರಾಮಾಯಣ ರಚನೆಯಾದಂತೆ ಬ್ಯಾರಿ ಭಾಷೆಯಲ್ಲೂ ಇಂತಹ ಗ್ರಂಥ ರಚನೆಯಾಗಬೇಕು ಎಂದು ಸಲಹೆ ನೀಡಿದರು.

  ಮಹಾನ್ ಗ್ರಂಥಗಳು, ಸಾಹಿತ್ಯ ರಚನೆಗಳು ಬ್ಯಾರಿ ಭಾಷೆಗೂ ಅನುವಾದಗೊಳ್ಳಬೇಕು, ವಿಶಾಲ ದೃಷ್ಟಿಕೋನದಿಂದ ಸಾಹಿತ್ಯ ಓದುವ ಹವ್ಯಾಸ ಬ್ಯಾರಿ ಭಾಷಿಗರಲ್ಲೂ ಮೂಡಬೇಕು, ಇತರ ಸಮುದಾಯದವರಿಗೂ ಬ್ಯಾರಿ ಭಾಷೆಯನ್ನು ಕಲಿಸಬೇಕು ಎಂದು ಮೊಹಮ್ಮದ್ ಬ್ಯಾರಿ ಎಡಪದವು ಪ್ರಮುಖ ಸಲಹೆಗಳನ್ನು ನೀಡಿದರು. ಅಶ್ರಫ್ ಅಪೋಲೊ, ಅಬ್ದುಲ್ ಅಝೀಝ್ ಹಕ್, ಶೌಕತ್ ಪಡುಬಿದ್ರಿ, ಮುಹಮ್ಮದ್ ಶರೀಫ್ ನಿರ್ಮುಂಜೆ ಮುಂತಾದ ಗಣ್ಯ ವ್ಯಕ್ತಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

  ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿ ಗಣ್ಯರಿಗೆ, ಕಲಾವಿದರಿಗೆ, ಸಾಹಿತಿಗಳಿಗೆ, ವಿದ್ವಾಂಸರಿಗೆ ಗೌರವ ಸಂಭಾವನೆ, ಆತಿಥ್ಯ, ಪ್ರಯಾಣಭತ್ಯೆಯನ್ನು ನಿಯಮಾನುಸಾರ ನೀಡಲಾಯಿತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಅಬ್ಬಾಸ್ ಕಿರುಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಇದಿನಬ್ಬ ಬ್ಯಾರಿ ವಂದಿಸಿದರು. ಅಕಾಡೆಮಿಯ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

 • “ಪೆರ್ನಾಲ್ ಸಂದೋಲ” ಕಾರ್ಯಕ್ರಮ
  ರಾಜ್ಯದ ಎಲ್ಲಾ ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರ, ಭಾಷಾ ಭಾರತಿ ಹಾಗೂ ಅಧ್ಯಯನ ಕೇಂದ್ರಗಳ “ಸಂಗಮ ಸಂಭ್ರಮ 2015” 2 ದಿನಗಳ ರಾಜ್ಯ ಸಮ್ಮೇಳನದ ಪ್ರಯುಕ್ತ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ೨೦೧೫ರ ಜುಲೈ ೨೪ ಶುಕ್ರವಾರದಂದು ಸಂಜೆ ೭:೦೦ ಗಂಟೆಗೆ “ಪೆರ್ನಾಲ್ ಸಂದೋಲ” ಕಾರ್ಯಕ್ರಮವು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ವಾಮಂಜೂರು, ಮಂಗಳೂರಿನಲ್ಲಿ ನಡೆಯಿತು.

  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಬಿ.ಎ. ಮುಹಮ್ಮದ್ ಹನೀಫ್ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಶೀಘ್ರದಲ್ಲೇ ಬ್ಯಾರಿ ವ್ಯಾಕರಣ ಕೃತಿ ರಚನೆಗೆ ಚಾಲನೆ ನೀಡಲಾಗುವುದು, ಬ್ಯಾರಿ ಜನಾಂಗದ ಗಣ್ಯ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಪ್ರಕಟಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಅಗಲಿದ ಪ್ರಮುಖರ ಜೀವನ ಚರಿತ್ರೆಯನ್ನೂ ಸೇರಿಸಿಕೊಳ್ಳಲಾಗುವುದು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಕೆ. ದಯಾನಂದ ಇವರು ಪೆರ್ನಾಲ್ ಸಂದೋಲ ವೀಡಿಯೋ ಆಲ್ಬಮ್ ಬಿಡುಗಡೆಗೊಳಿಸಿದರು. ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕರಾದ ಜನಾಬ್ ಮುಹಮ್ಮದ್ ಕುಂಞಿ ಇವರು ಮಾನವ ಸಮುದಾಯದ ಮತ್ತು ಸ್ವಸ್ಥ ಸಮಾಜ ವಿಷಯದ ಬಗ್ಗೆ ಸಾಮರಸ್ಯ ಸಂದೇಶವನ್ನು ನೀಡಿದರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಇದರ ಸಮನ್ವಯಾಧಿಕಾರಿ ಶ್ರೀ ಕಾ.ತ. ಚಿಕ್ಕಣ್ಣ, ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಮ್, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ, ಖ್ಯಾತ ಸಾಹಿತಿಗಳಾದ ಪ್ರೊ| ಎ.ವಿ. ನಾವಡ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾಧಿಕಾರಿ ಉಸ್ಮಾನ್.ಎ, ಬ್ಯಾರೀಸ್ ವೆಲ್ಫೇರ್ ಫೋರಮ್ ನ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಅಲಿ, ಉಚ್ಚಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೊಯ್ ಕ್ಯಾಸ್ತಲಿನೊ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಎಂ. ಜಾನಕಿ, ಬ್ರಹ್ಮಾವರ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಶ್ರೀ ಎಮ್.ಎಸ್. ಮೂರ್ತಿ, ಗಣ್ಯ ಉಪಸ್ಥಿತಿಯಾಗಿ ಭಾಗವಹಿಸಿದ್ದರು.

  ಇದೇ ಸಂದರ್ಭದಲ್ಲಿ ಶೌಕತ್ ಪಡುಬಿದ್ರಿ, ಶಮೀರ್ ಮುಲ್ಕಿ ತಂಡದಿಂದ ಬ್ಯಾರಿ ಹಾಡು, ದಫ್ ಪ್ರದರ್ಶನ ಕಾರ್ಯಕ್ರಮವು ನಡೆಯಿತು. ಹಾಗೂ ಪಾಲ್ಗೊಂಡ ಎಲ್ಲಾ ಕಲಾವಿದರಿಗೆ ಅಭಿನಂದನೆ ಮತ್ತು ಸ್ಮರಣಿಕೆಯನ್ನು ನೀಡಲಾಯಿತು.

  ರಾಜ್ಯದ ನಾನಾ ಭಾಗಗಳಿಂದ ಆಹ್ವಾನಿತ ಅತಿಥಿ ಗಣ್ಯರಿಗೆ, ಕಲಾವಿದರಿಗೆ, ಸಾಹಿತಿಗಳಿಗೆ, ವಿದ್ವಾಂಸರಿಗೆ ಗೌರವ ಸಂಭಾವನೆ, ಆತಿಥ್ಯ, ಊಟೋಪಚಾರ, ವಾಸ್ತವ್ಯ, ಪ್ರಯಾಣಭತ್ಯೆಯನ್ನು ನಿಯಮಾನುಸಾರ ನೀಡಲಾಯಿತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಅಬ್ಬಾಸ್ ಕಿರುಗುಂದ ಸ್ವಾಗತಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಪ್ರಾಸ್ತಾವಿಸಿದರು. ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
 • “ರಮ್ಝಾನ್ ಸ್ನೇಹಕೂಟ” ಕಾರ್ಯಕ್ರಮ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಕಾರದೊಂದಿಗೆ ದಿನಾಂಕ ೧೦-೦೭-೨೦೧೫ರಂದು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಕಂಕನಾಡಿಯಲ್ಲಿ “ರಮ್ಝಾನ್ ಸ್ನೇಹಕೂಟ” ಕಾರ್ಯಕ್ರಮವು ನಡೆಯಿತು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಬಿ.ಎ. ಮುಹಮ್ಮದ್ ಹನೀಫ್ ವಹಿಸಿದ್ದರು. ಫೌಝಿಯಾ ಜುಮ್ಮಾ ಮಸ್ಜಿದ್ ಪೊಲೀಸ್ ಲೇನ್ ಇಲ್ಲಿನ ಉಸ್ತಾದರಾದ ಅಬುಲ್ ವಫಾ ಖಾಸಿಮ್ ಮುಸ್ಲಿಯಾರ್ “ಬ್ಯಾರಿ ಸಂಸ್ಕೃತಿ ಮತ್ತು ರಮ್ಝಾನ್ ವೃತ”ದ ಬಗ್ಗೆ ವಿಷಯ ಮಂಡನೆಯನ್ನು ಮಾಡಿದರು.

  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾಬ್ ಹಾಜಿ ಇಬ್ರಾಹಿಮ್ ಕೋಡಿಜಾಲ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಜನಾಬ್ ಎಸ್.ಎಮ್. ರಶೀದ್ ಹಾಜಿ, ದ.ಕ.ಜಿಲ್ಲಾಇಸ್ಮಾಮಿಕ್ ಕಲ್ಚರಲ್ ಸೆಂಟರ್, ಪಂಪ್ ವೆಲ್ ಇಲ್ಲಿನ ಪ್ರಧಾನ ಕಾರ್ಯದರ್ಶಿಯಾದ ಜನಾಬ್ ಮುಮ್ತಾಝ್ ಅಲಿ, ಕಂಕನಾಡಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಜನಾಬ್ ಅಬ್ದುಲ್ ರವೂಫ್ ಪುತ್ತಿಗೆ ಮುಖ್ಯ ಅತಿಥಿಗಳಾಗಿ ಹಾಗೂ ಕಂಕನಾಡಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಅಧ್ಯಕ್ಷರಾದ ಜನಾಬ್ ರಿಯಾಝ್ ಕಣ್ಣೂರು ಗಣ್ಯ ಉಪಸ್ಥಿತಿಯಾಗಿ ಭಾಗವಹಿಸಿದ್ದರು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಗೌರವ ಸಲಹೆಗಾರರಾದ ಜನಾಬ್ ರಫೀಕ್ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿಯ ಸದಸ್ಯ ಜನಾಬ್ ಟಿ.ಎ. ಆಲಿಯಬ್ಬ ಜೋಕಟ್ಟೆ ದನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳಿಗೆ ಗೌರವ ಸಂಭಾವನೆ, ಪ್ರಯಾಣ ಭತ್ಯೆ, ಸ್ಮರಣಿಕೆ ಹಾಗೂ ಪುಸ್ತಕವನ್ನು ನೀಡಿ ಗೌರವಿಸಲಾಯಿತು.
 • “ಊನು-ತೀನ್” (ಬ್ಯಾರಿ ಭಾಷೆಯಲ್ಲಿ ಪ್ರಥಮ ಅಡುಗೆ ಪುಸ್ತಕ) ಹಾಗೂ “ಬೆಲ್ಕಿರಿ ದ್ವೈಮಾಸಿಕ” ಬಿಡುಗಡೆ ಸಮಾರಂಭ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ ೧೩-೦೬-೨೦೧೫ರಂದು ಹಂಪನಕಟ್ಟೆಯ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ “ಊನು-ತೀನ್” (ಬ್ಯಾರಿ ಭಾಷೆಯಲ್ಲಿ ಪ್ರಥಮ ಅಡುಗೆ ಪುಸ್ತಕ) ಹಾಗೂ “ಬೆಲ್ಕಿರಿ ದ್ವೈಮಾಸಿಕ” ಬಿಡುಗಡೆ ಸಮಾರಂಭವು ನಡೆಯಿತು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಬಿ.ಎ. ಮುಹಮ್ಮದ್ ಹನೀಫ್ ವಹಿಸಿದ್ದರು. ಅನುಪಮ ಮಾಸಪತ್ರಿಕೆಯ ಸಂಪಾದಕಿ ಶಹನಾಝ್ ಎಮ್. ಊನು-ತೀನ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಜನಾಬ್ ಮೊಹಮ್ಮದ್ ನಝೀರ್ ಬೆಲ್ಕಿರಿ ದ್ವೈಮಾಸಿಕ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಬದ್ರಿಯಾ ಪ್ರಥಮ ದರ್ಜೆ ಕಾಲೇಜ್ನ ಉಪನ್ಯಾಸಕಿಯಾದ ಶ್ರೀಮತಿ ಶಕೀನಾ ಯಹ್ಯಾ ಪುಸ್ತಕದ ಪರಿಚಯವನ್ನು ಮಾಡಿದರು. ಹಿರಿಯ ಸಾಹಿತಿಯಾದ ಪೇರೂರು ಜಾರು “ಮಹಿಳಾ ಸಾಹಿತಿಗಳಿಗೆ ಪ್ರೊತ್ಸಾಹ” ಎಂಬ ವಿಷಯದ ಬಗ್ಗೆ ವಿಚಾರ ಮಂಡನೆಯನ್ನು ಮಾಡಿದರು.

  ಬದ್ರಿಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಇಸ್ಮಾಯಿಲ್, ಸಾಹಿತಿಯಾದ ಬಿ.ಎ. ಮುಹಮ್ಮದ್ ಅಲಿ ಮುಖ್ಯ ಅತಿಥಿಗಳಾಗಿ ಹಾಗೂ ಶ್ರೀಮತಿ ಮರಿಯಮ್ ಇಸ್ಮಾಯಿಲ್ ಗಣ್ಯ ಉಪಸ್ಥಿತಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀಮತಿ ಮರಿಯಮ್ ಇಸ್ಮಾಯಿಲ್ರವರನ್ನು ಅಕಾಡೆಮಿಯ ಪರವಾಗಿ ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಜನಾಬ್ ಬಶೀರ್ ಅಹ್ಮದ್ ಕಿನ್ಯಾ ಮತ್ತು ಬಳಗದವರು ಬ್ಯಾರಿ ಹಾಡುಗಳನ್ನು ನಡೆಸಿಕೊಟ್ಟರು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮವನ್ನು ನಿರೂಪಿಸಿದರು. ಎ.ಎ. ಆಯಿಷಾ ಪೆರ್ಲ ದನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳಿಗೆ ಆತಿಥ್ಯ, ಪ್ರಯಾಣ ವೆಚ್ಚ, ಸ್ಮರಣಿಕೆ ಹಾಗೂ ಪುಸ್ತಕವನ್ನು ನೀಡಿ ಗೌರವಿಸಲಾಯಿತು.
 • “ಗಡಿನಾಡ ಬ್ಯಾರಿ ಕುಟುಂಬ ಸಮ್ಮಿಲನ ಮತ್ತು ಸಾಹಿತ್ಯ ಸೌಹಾರ್ದ ಕೂಟ” ಕಾರ್ಯಕ್ರಮ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ ೯-೫-೨೦೧೫ರಂದು ಪೆರ್ಲ ಕಾಸರಗೋಡಿನಲ್ಲಿ “ಗಡಿನಾಡ ಬ್ಯಾರಿ ಕುಟುಂಬ ಸಮ್ಮಿಲನ ಮತ್ತು ಸಾಹಿತ್ಯ ಸೌಹಾರ್ದ ಕೂಟ” ಕಾರ್ಯಕ್ರಮವು ನಡೆಯಿತು.

  ಮಂಜೇಶ್ವರ ಶಾಸಕರಾದ ಪಿ.ಬಿ.ಅಬ್ದುಲ್ ರಝಾಕ್ ಕಾರ್ಯಕ್ರಮವನ್ನು ಉದ್ಟಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಮಹೀನ್ ಕೆಲೋಟ್ ಸರಕಾರಿ ಸವಲತ್ತುಗಳ ಮಾಹಿತಿಯನ್ನು ನೀಡಿದರು. ಎನ್ಮಕಜೆ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಜೆ.ಎಸ್. ಸೋಮಶೇಖರ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಎ.ಕೆ.ಎಮ್. ಅಶ್ರಫ್, ಎನ್ಮಕಜೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್. ಗಾಂಭೀರ, ಮರ್ಚಂಟ್ಸ್ ಅಸೋಸಿಯೇಶನ್ನ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.

  ನಂತರ “ಕೇರಳದಲ್ಲಿ ಬ್ಯಾರಿ ಆಂದೋಲನ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ಮತ್ತು ಸಮಾರೋಪ ಸಮಾರಂಭವು” ನಡೆಯಿತು. ಅಖಿಲ ಭಾರತ ಬ್ಯಾರಿ ಪರಿಷತ್ ನ ಅಧ್ಯಕ್ಷರಾದ ಅಝೀಝ್ ಬೈಕಂಪಾಡಿ ವಿಷಯವನ್ನು ಮಂಡಿಸಿದರು. ಸಮಾಜ ಸೇವಕರಾದ ಅಬೂಬಕ್ಕರ್ ಪೆರ್ತನೆ, ಎನ್ಮಕಜೆ ಕ್ಷೇಮಕಾರ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾದ ಸೌಧ ಬಿ.ಹನೀಫ್, ಎನ್ಮಕಜೆ ಗ್ರಾಮ ಪಂಚಾಯತ್ನ ಸದಸ್ಯರಾದ ರಮ್ಲಾ ಪಿ.ಎಮ್, ಬುಶ್ರಾ ಸಿದ್ದೀಕ್, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಸದಸ್ಯರಾದ ಎ.ಆರ್.ಸುಬ್ಬಯ್ಯಕಟ್ಟೆ ಮುಂತಾದವರು ಗಣ್ಯ ಉಪಸ್ಥಿತಿಯಾಗಿ ಭಾಗವಹಿಸಿದ್ದರು.

  ಕಾರ್ಯಕ್ರಮದಲ್ಲಿ ಹಿರಿಯ ೧೨ ಸಾಹಿತ್ಯ ಸಾಧಕರನ್ನು ಶಾಲು, ಸ್ಮರಣಿಕೆ ಹಾಗೂ ಪುಸ್ತಕ ನೀಡಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬ್ಯಾರಿ ಜನದಪ ಹಾಡು ಅಶ್ರಫ್ ಅಪೋಲೋ ಮತ್ತು ಬಳಗದವರಿಂದ ನಡೆಯಿತು.

  ಅಕಾಡೆಮಿಯ ರಿಜಿಸ್ಟ್ರಾರ್‍ ಉಮರಬ್ಬ ಸ್ವಾಗತಿಸಿದರು. ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮವನ್ನು ನಿರೂಪಿಸಿದರು. ಮೊಹಮ್ಮದ್ ಪಿರ್ದೌಸ್ ದನ್ಯವಾದ ಸಮರ್ಪಿಸಿದರು. ಎ.ಎ. ಆಯಿಷ ಪೆರ್ಲ ಸದಸ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.
 • “ಎರಂಟೆ ಎರಡು ಬ್ಯಾರಿ ನಾಟಕಗಳ ಪುಸ್ತಕ ಹಾಗೂ ಕೊತ್ತಿಪ್ಪು ಬ್ಯಾರಿ ಹಾಡುಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ ೨೭-೪-೨೦೧೫ ರಂದು ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ “ಎರಂಟೆ –ಎರಡು ಬ್ಯಾರಿ ನಾಟಕಗಳ ಪುಸ್ತಕ ಹಾಗೂ “ಕೊತ್ತಿಪ್ಪು” ಬ್ಯಾರಿ ಹಾಡುಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮವು” ನಡೆಯಿತು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ವಹಿಸಿದ್ದರು. ಇಸ್ಮಾಯಿಲ್ ಮೂಡುಶೆಡ್ಡೆ ಬರೆದ ಎರಂಟೆ ಎರಡು ಬ್ಯಾರಿ ನಾಟಕಗಳ ಪುಸ್ತಕವನ್ನು ಮಾಜಿ ಉನ್ನತ ಶಿಕ್ಷಣ ಸಚಿವರಾದ ಬಿ.ಎ. ಮೊಹಿದಿನ್ ಬಿಡುಗಡೆ ಮಾಡಿದರು. ಬಶೀರ್ ಅಹ್ಮದ್ ಕಿನ್ಯಾ ಇವರ ಕೊತ್ತಿಪ್ಪು ಬ್ಯಾರಿ ಹಾಡುಗಳ ಸಿ.ಡಿ.ಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಜೆಸಿಂತಾ ವಿಜಯ ಅಲ್ಪ್ರೇಡ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅಶ್ರಫ್ ಅಪೋಲೊರವರಿಗೆ ಹೊಸ ಬ್ಯಾರಿ ಹಾಡುಗಳ ಸಿ.ಡಿ. ತಯಾರಿಕೆಗೆ ಅಕಾಡೆಮಿಯಿಂದ ಆದೇಶವನ್ನು ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಹಸ್ತಾಂತರಿಸಿದರು. ಪತ್ರಕರ್ತರಾದ ಹಂಝ ಮಲಾರ್ ಎರಂಟೆ ಪುಸ್ತಕದ ಪರಿಚಯವನ್ನು ಮಾಡಿದರು. ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಎ. ಶಂಶುದ್ದೀನ್ ಮಡಿಕೇರಿ ಕೊತ್ತಿಪ್ಪು ಸಿ.ಡಿ.ಯ ಪರಿಚಯವನ್ನು ಮಾಡಿದರು. ಹಿರಿಯ ರಂಗ ನಟ ನಿರ್ದೇಶಕರಾದ ವಿ.ಜಿ.ಪಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಸಂಗೀತ ನಿರ್ದೇಶಕ ಕಮರುದ್ದೀನ್ ಕೀಚೇರಿ, ಬಹುಭಾಷಾ ಕವಿ ಬಶೀರ್ ಅಹ್ಮದ್ ಕಿನ್ಯಾ, ಬಹುಭಾಷಾ ಕಲಾವಿದ ಇಸ್ಮಾಯಿಲ್ ಮೂಡುಶೆಡ್ಡೆ, ಹಾಡುಗಾರರಾದ ಶರೀಫ್ ಬೆಳ್ಳಾರೆ, ಶೌಕತ್ ಪಡುಬಿದ್ರಿ, ಶಮೀರ್ ಮುಲ್ಕಿ, ಇಬ್ರಾಹಿಮ್ ಕಡಂಬು, ಹನೀಫ್ ಚೆಂಗಳ, ಖಲೀಲ್ ಚೆಂಗಳ, ಬದ್ರುದ್ದೀನ್ ವಿಟ್ಲ ಇವರನ್ನು ಅಕಾಡೆಮಿಯ ಪರವಾಗಿ ಗೌರವಿಸಲಾಯಿತು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮವನ್ನು ನಿರೂಪಿಸಿದರು. ಯೂಸುಫ್ ವಕ್ತಾರ್ ದನ್ಯವಾದ ಸಮರ್ಪಿಸಿದರು. ಕಾರ್ಯುಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳಿಗೆ, ಸಾಹಿತಿಗಳಿಗೆ, ಕವಿಗಳಿಗೆ ಆತಿಥ್ಯ, ಸಿ.ಡಿ. ಹಾಗೂ ಪುಸ್ತಕವನ್ನು ಉಚಿತವಾಗಿ ನಿಡಲಾಯಿತು.
 • “ಬೆಲ್ಕಿರಿ ವಿಶೇಷಾಂಕ ಬಿಡುಗಡೆ ಮತ್ತು ’ಬ್ಯಾರಿ-ಕನ್ನಡ-ಇಂಗ್ಲಿಷ್’ ನಿಘಂಟು ರಚನೆಯ ಪ್ರಗತಿ ಪರಿಶೀಲನೆ”
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ “ಬೆಲ್ಕಿರಿ ವಿಶೇಷಾಂಕ ಬಿಡುಗಡೆ ಮತ್ತು ’ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ರಚನೆಯ ಪ್ರಗತಿ ಪರಿಶೀಲನೆಯು ಮಾರ್ಚ್ ೨೫ ರಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿಯಲ್ಲಿ ನಡೆಯಿತು.

  ಬೆಲ್ಕಿರಿ ವಿಶೇಷಾಂಕವನ್ನು ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹಾಜಿ ಇಬ್ರಾಹಿಮ್ ಕೋಡಿಜಾಲ್ ರವರು ಬಿಡುಗಡೆಗೊಳಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿ.ಎ.ಮುಹಮ್ಮದ್ ಹನೀಫ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು, ಸುಧಾ ವಾರಪತ್ರಿಕೆಯ ಉಪ ಸಂಪಾದಕರಾದ ಜನಾಬ್ ಬಿ.ಎಂ. ಹನೀಫ್, ಅಖಿಲ ಭಾರತ ಬ್ಯಾರಿ ಪರಿಷತ್ ನ ಗೌರವಾಧ್ಯಕ್ಷರಾದ ಜನಾಬ್ ಅಬ್ದುಲ್ ಮಜೀದ್ ಸೂರಲ್ಪಾಡಿ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಗೂ ಬ್ಯಾರಿ ಕಲಾರಂಗದ ಅಧ್ಯಕ್ಷರಾದ ಜನಾಬ್ ಅಬ್ದುಲ್ ಅಝೀಝ್ ಬೈಕಂಪಾಡಿ, ಸಾಹಿತಿಗಳಾದ ಪ್ರೊ.ಬಿ.ಎಂ.ಇಚ್ಲಂಗೋಡು, ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಹಾಗೂ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.

  ಇದೇ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ದಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಮ್ ಕೋಡಿಜಾಲ್ ರವರನ್ನು ಅಕಾಡೆಮಿಯ ಪರವಾಗಿ ಅಭಿನಂದಿಸಲಾಯಿತು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮವನ್ನು ನಿರೂಪಿಸಿದರು. ಯೂಸುಫ್ ವಕ್ತಾರ್ ದನ್ಯವಾದ ಸಮರ್ಪಿಸಿದರು.
 • ವಿಶ್ವ ಮಹಿಳಾ ದಿನಾಚರಣೆ ಮತ್ತು ಬಹುಭಾಷಾ ಮಹಿಳಾ ಸಾಹಿತ್ಯ ಕಮ್ಮಟ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘ (ರಿ) ಮಂಗಳೂರು ಇದರ ಸಹಯೋಗದೊಂದಿಗೆ ದಿನಾಂಕ ೮-೩-೨೦೧೫ ರಂದು ಕಂಕನಾಡಿಯ ಜಂ-ಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ “ವಿಶ್ವ ಮಹಿಳಾ ದಿನಾಚರಣೆ ಮತ್ತು ಬಹುಭಾಷಾ ಮಹಿಳಾ ಸಾಹಿತ್ಯ ಕಮ್ಮಟ” ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

  ಶ್ರೀ ಗುರು ಸೌಹಾರ್ದ ಸಹಕಾರಿ ನಿಯಮಿತ ಇದರ ಚೇರ್ ಮ್ಯಾನ್ ಸುಮಲತಾ ಎನ್.ಸುವರ್ಣ ಕಾರ್ಯಕ್ರಮದ ಉದ್ಟಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಕಾಡೆಮಿಯ ಸದಸ್ಯೆ ಝೊಹರಾ ಅಬ್ಬಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಲೇಖಕಿ ಶಕುಂತಲಾ ಭಟ್ ಹಳೆಯಂಗಡಿ , ಮಂಗಳೂರು ಜಿಲ್ಲಾ ಪಂಚಾಯತ್ ಸದಸ್ಯರಾದ ಯಶವಂತ ಆಳ್ವ, ಮಂಗಳೂರು ತಾಲೂಕು ಪಂಚಾಯತ್ ಸದಸ್ಯರಾದ ಕ್ಲಾರಾ ಕುವೆಲ್ಲೊ, ಜಮಾತೆ ಇಸ್ಲಾಮಿ ಹಿಂದ್ ಇದರ ರಾಜ್ಯ ಸಹ ಸಂಚಾಲಕಿಯಾದ ಶಮೀರಾ ಜಹಾನ್, ಸಮಾಜ ಸೇವಕಿ ಝೀನತ್ ಹಸನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕುಮಾರಿ ಶಬಾನ (ಸಿ.ಎ.) ಉಡುಪಿ ಜಿಲ್ಲಾ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಕುಮಾರಿ ಮುಮ್ತಾಝ್ (ಎಲ್.ಎಲ್.ಎಮ್.) ವಾಹನ ತರಬೇತಿ ಅದ್ಯಾಪಕಿ ಶ್ರೀಮತಿ ಫಾತಿಮಾ ಝೊಹರಾ ಮುಂತಾದ ಸಾಧಕಿಯರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಸದಸ್ಯೆ ಎ.ಎ. ಆಯಿಷಾ ಪೆರ್ಲ ಅಭಿನಂದನಾ ಭಾಷಣವನ್ನು ಮಾಡಿದರು.

  ನಂತರ ಕಾವ್ಯ ಕಮ್ಮಟವು ನಡೆಯಿತು. ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರ್ ಕಾವ್ಯ ಕಮ್ಮಟದ ತರಬೇತುದಾರರಾಗಿ ಭಾಗವಹಿಸಿದ್ದರು. ಹಾಗೂ “ಆಧುನಿಕ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರ” ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಿತು. ಆಯಿಷಾ ಯು.ಕೆ. ಪ್ರಬಂಧವನ್ನು ಮಂಡಿಸಿದರು. ಎ.ಎ. ಆಯಿಷಾ ಪೆರ್ಲ, ಮರಿಯಮ್ ಶಹೀರಾ, ಸಮೀನಾ ಅಪ್ಸಾನ, ಶಶಿಲೇಖ, ಐರಿನ್ ರೆಬೆಲ್ಲೊ ಇವರುಗಳು ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅಕಾಡೆಮಿಯ ಸದಸ್ಯೆ ಶ್ರೀಮತಿ ಝೊಹರಾ ಅಬ್ಬಾಸ್ ಚರ್ಚಾಗೋಷ್ಠಿಯ ಸಂಯೋಜನೆಯನ್ನು ಮಾಡಿದರು. ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.

 • ಜಾತಿ ಜನಗಣತಿ ಯಾಕೆ ? ಮತ್ತು ಹೇಗೆ ? ವಿಚಾರವಿಮರ್ಶೆ
  ಮೇಲಿನ ಉಲ್ಲೇಖಿತ ವಿಷಯಕ್ಕೆ ಸಂಬಂದಿಸಿದಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಟ್ಯಾಲೆಂಟ್ ರಿಸರ್ಜ್ ಫೌಂಡೇಶನ್ ಇವರ ಸಹಯೋಗದೊಂದಿಗೆ ದಿನಾಂಕ ೫-೩-೨೦೧೫ ರಂದು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ “ಜಾತಿ ಜನಗಣತಿ ಯಾಕೆ ? ಮತ್ತು ಹೇಗೆ? ವಿಚಾರವಿಮರ್ಶೆ” ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

  ದ.ಕ. ಜಿಲ್ಲೆ ಅಹಿಂದ ಜನ ಚಳವಳಿಯ ಅಧ್ಯಕ್ಷರಾದ ವಾಸುದೇವ ಬೋಳೂರು ಕಾರ್ಯಕ್ರಮವನ್ನು ಉದ್ಟಾಟಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಸಾಂಖ್ಯಿಕ ಅಧಿಕಾರಿಯಾದ ಪ್ರದೀಪ್ ಡಿಸೋಜ ಜಾತಿ ಜನಗಣತಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಮಾಜಿ ಉನ್ನತ ಶಿಕ್ಷಣ ಸಚಿವರಾದ ಬಿ.ಎ. ಮೊಹಿದಿನ್ ಸಮಾರೋಪ ಭಾಷಣ ಮಾಡಿದರು. ವಾರ್ತಾಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ಬುಸ್ಸಲಾಮ್ ಪುತ್ತಿಗೆ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಸ್ಥಾಪಕಾಧ್ಯಕ್ಷರಾದ ಅಬ್ದುಲ್ ರವೂಫ್ ಪುತ್ತಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಗೌರವ ಸಲಹೆಗಾರರಾದ ರಫೀಕ್ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಅಧ್ಯಕ್ಷರಾದ ರಿಯಾಝ್ ಕಣ್ಣೂರ್ ದನ್ಯವಾದ ಸಮರ್ಪಿಸಿದರು. ಅಕಾಡೆಮಿಯ ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.

 • ಬ್ಯಾರಿ ಜಾನಪದ ಕಲೋತ್ಸವ ಹಾಗೂ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಅಲ್-ಅಮೀನ್ ಯಂಗ್ ಮೆನ್ಸ್ (ರಿ) ಗಾಂಧಿನಗರ ಸುಳ್ಯ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಇದರ ಸಹಯೋಗದೊಂದಿಗೆ ದಿನಾಂಕ ೨೮-೨-೨೦೧೫ ರಂದು ಗ್ರೀನ್ ವ್ಯೂ ಶಾಲಾ ಮೈದಾನ ನಾವೂರು ಗಾಂಧಿನಗರ ಸುಳ್ಯದಲ್ಲಿ “ಬ್ಯಾರಿ ಜಾನಪದ ಕಲೋತ್ಸವ ಹಾಗೂ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ” ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

  ಬ್ಯಾರಿ ಭಾಷೆಯ ಅಭಿವೃದ್ದಿ ಬಗ್ಗೆ ಚಿಂತನಾ ಶಿಬಿರದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ವಹಿಸಿದ್ದರು. ಅಕಾಡೆಮಿಯ ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು, ಸಾಹಿತಿಗಳಾದ ಬಿ.ಎ. ಮುಹಮ್ಮದ್ ಅಲಿ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಬಿ.ಎ. ಶಂಶುದ್ದೀನ್ ಮಡಿಕೇರಿ, ಹಂಝ ಮಲಾರ್, ಬಹುಭಾಷಾ ಕವಿ ಬಶೀರ್ ಕಿನ್ಯಾ ಮುಂತಾದವರು ಚಿಂತನಾ ಶಿಬಿರದಲ್ಲಿ ಭಾಗವಹಿಸಿದ್ದರು. ನ್ಯಾಯವಾದಿ ಕುಂಞಿಪಳ್ಳಿ ಶುಭಾಶಂಸನೆಯನ್ನು ಮಾಡಿದರು. ಈ ಸಭೆಯಲ್ಲಿ ಪುತ್ತೂರು, ಉಡುಪಿ, ಮಡಿಕೇರಿ ಮುಂತಾದ ಕಡೆಯಿಂದ ಬಂದಿದ್ದ ಬ್ಯಾರಿ ಸಾಹಿತ್ಯ ಸಮಿತಿಯ ಪ್ರತಿನಿದಿಗಳು ಹಾಗೂ ಸುಳ್ಯದ ಪ್ರತಿನಿಧಿಗಳು ಭಾಗವಹಿಸಿದ್ದರು.

  ನಂತರ ಗಾಂಧಿನಗರದಿಂದ ಗ್ರೀನ್ ವ್ಯೂ ಶಾಲಾ ಮೈದಾನದವರೆಗೆ ದಫ್ ತಂಡಗಳಿಂದ ರಾಲಿ ನಡೆಯಿತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಜಾಥಾಕ್ಕೆ ಚಾಲನೆಯನ್ನು ನೀಡಿದರು. ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ.ಎಮ್. ಮುಸ್ತಫಾ, ಸುಳ್ಯ ಕಂಟ್ರಾಕ್ಟರ್ ಬಿಜು ಅಗಸ್ಟಿನ್, ದುಲ್ ಪುಕಾರ್ ದಫ್ ಎಸೋಸಿಯೇಶನ್ ನ ಅಧ್ಯಕ್ಷರಾದ ಸತ್ತಾರ್ ಸಂಗಮ್, ಅಲ್-ಅಮೀನ್ ಯಂಗ್ ಮೆನ್ಸ್ ಸುಳ್ಯ ಇದರ ಅಧ್ಯಕ್ಷರಾದ ಎಂ.ಎಸ್. ಮುನಾಫ್ ಗಣ್ಯ ಉಪಸ್ಥಿತಿಯಾಗಿ ಭಾಗವಹಿಸಿದ್ದರು.

  ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಕ್ರೀಡಾಕ್ಷೇತ್ರದಲ್ಲಿ ದುಡಿದ ಗಣ್ಯರಾದ ಪಡ್ಡಂಬೈಲು ವೆಂಕಟ್ರಮಣ ಗೌಡ, ಹಾಜಿ ಕೆ.ಎ. ಅಬ್ಬಾಸ್ ಕಟ್ಟೆಕಾರ್ಸ್, ರೆಫಾ ಸೆಲಿನ್, ಸಂಶೀರ್ ಜಯನಗರ, ಶರೀಫ್ ಬೆಳ್ಳಾರೆ ಇವರುಗಳನ್ನು ಅಕಾಡೆಮಿಯ ಪರವಾಗಿ ಸನ್ಮಾನಿಸಲಾಯಿತು. ಹಾಗೂ ಅಲ್-ಅಮೀನ್ ಸಂಸ್ಥೆಯ ಪರವಾಗಿ ಅಂಗವಿಕಲರಿಗೆ ಟ್ರಾಲಿ ವಾಹನ ಮತ್ತು ಪ್ರತಿಭಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

  ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ಸ್ಥಾಯಿ ಸಮಿತಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಇದರ ಅಧ್ಯಕ್ಷರಾದ ಇಬ್ರಾಹಿಮ್ ಗೂನಡ್ಕ, ಸುಳ್ಯ ಗೌಡ ಯುವ ಸಂಘದ ಅಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಐ. ಇಸ್ಮಾಯಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಸಮಾರೋಪ ಸಮಾರಂಭವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ.ಎಸ್. ಉಮ್ಮರ್, ಗೋಕುಲ್ ದಾಸ್, ಕನಕಮಜಲು ಗ್ರಾಮ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಪೂಪಿ, ಸುಳ್ಯ ತಾಲೂಕು ರಬ್ಬರ್ ಸೊಸೈಟಿ ಇದರ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಎ.ಪಿ.ಎಂ.ಸಿ. ನಿರ್ದೇಶಕರಾದ ಆದಂ ಹಾಜಿ ಕಮ್ಮಾಡಿ, ಮಾಜಿ ಗ್ರಾಮ ಪಂಚಾಯತ್ ಸಂಪಾಜೆ ಇದರ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ, ಅನ್ಸಾರಿಯಾ ಅನಾಥಾಲಯ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಆರ್.ಕೆ. ಮಹಮ್ಮದ್, ಸುಳ್ಯ ನ್ಯಾಯವಾದಿ ಅಬೂಬಕ್ಕರ್ ಅಡ್ಕಾರ್, ಅಲ್ಪಸಂಖ್ಯಾತ ವಿವಿದೊದ್ದೇಶ ಸಹಕಾರಿ ಸಂಘದ ನಿಕಟ ಪೂರ್ವ ನಿರ್ದೇಶಕರಾದ ಅಬ್ದುಲ್ ಕಲಾಮ್, ನ್ಯಾಯವಾದಿ ಮೂಸಾ ಪೈಂಬಚಾಲ್, ಮೋಡೆಲ್ ಎಜ್ಯುಕೇಶನ್ ಟ್ರಸ್ಟ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಕೆ.ಬಿ. ಇಬ್ರಾಹಿಮ್, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ರಿಯಾಝ್ ಕಟ್ಟೆಕಾರ್ಸ್, ಸುಳ್ಯ ಯುನೈಟೆಡ್ ಅಧ್ಯಕ್ಷರಾದ ಎಮ್.ಕೆ. ಶರೀಪ್ ಕಂಪಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆಯ ಸುಮಾರು ೧೦ಕ್ಕೂ ಹೆಚ್ಚು ದಫ್ ತಂಡಗಳು ಭಾಗವಹಿಸಿದ್ದರು. ದಫ್ ರಾಲಿಯಲ್ಲಿ ಪರ್ಕಿನಕಟ್ಟೆ ಕಾಪು ಮೊದಲ ಬಹುಮಾನ ಹಾಗೂ ಮಾಜೂರು ಉಡುಪಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು. ದಫ್ ಸ್ಪರ್ಧೆಯಲ್ಲಿ ಪರ್ಕಿನಕಟ್ಟೆ ಕಾಪು ಮೊದಲನೇ ಬಹುಮಾನ ಮಾಜೂರು ಕಾಪು ದ್ವಿತೀಯ ಬಹುಮಾನ ಹಾಗೂ ಮಣಿಪುರ ಕಟಪಾಡಿ ತೃತೀಯ ಬಹುಮಾನ ಪಡೆದುಕೊಂಡರು. ರಿಜಿಸ್ಟ್ರಾ ರ್ ಉಮರಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ಸದಸ್ಯ ಅಬ್ದುಲ್ ಹಮೀದ್ ಗೊಳ್ತಮಜಲು ಸ್ವಾಗತಿಸಿದರು. ಸಾಹಿತಿ ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ಎ.ಎ. ಆಯಿಷಾ ಪೆರ್ಲ, ಎಂ.ಇ. ಮೊಹಮ್ಮದ್ ಫಿರ್ದೌಸ್ ಸದಸ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.
 • “ಬ್ಯಾರಿ ಜಾ ನಪದ ಕ್ರೀಡೋತ್ಸವ – ಸಾಂಸ್ಕೃತಿಕ ಮೇಳ”
  ಕರ್ನಾಟಕ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗ ಪಾವೂರು ಇದರ ಸಹಯೋಗದೊಂದಿಗೆ ದಿನಾಂಕ ೨೨-೨-೨೦೧೫ ರಂದು ಸರಕಾರಿ ಪ್ರೌಢ ಶಾಲೆ ಪಾವೂರಿನಲ್ಲಿ “ಬ್ಯಾರಿ ಜಾನಪದ ಕ್ರೀಡೋತ್ಸವ – ಸಾಂಸ್ಕೃತಿಕ ಮೇಳ” ಕಾರ್ಯಕ್ರಮವು ನಡೆಯಿತು.

  ಬೆಳಿಗ್ಗೆ ೯:೦೦ ಗಂಟೆಗೆ ನಡೆದ ಕ್ರೀಡೋತ್ಸವಕ್ಕೆ ಚಾಲನೆಯನ್ನು ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಬೀಫಾತಿಮ ಮಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಯೂಸುಫ್ ವಕ್ತಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆ ಪಾವೂರು ಇದರ ಮುಖ್ಯ ಶಿಕ್ಷಕರಾದ ಪ್ರಶಾಂತ ಕೆ.ಎಸ್. ವಹಿಸಿದ್ದರು. ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ದುಗ್ಗಪ್ಪ ಪೂಜಾರಿ, ಪಾವೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ವಲೇರಿಯನ್ ಡಿಸೋಜ, ಅಬ್ದುಲ್ ಖಾದರ್, ನಾಸೀರ್ ಮಲಾರ್, ಮುಹಮ್ಮದ್ ಮುಂತಾದವರು ಗಣ್ಯ ಉಪಸ್ಥಿತಿಯಾಗಿ ಭಾಗವಹಿಸಿದ್ದರು.

  ಈ ಸಂದರ್ಭದಲ್ಲಿ ಸ್ಥಳೀಯ ನಾಲ್ಕು ಗ್ರಾಮಗಳಾದ ಪಾವೂರು, ಹರೇಕಳ, ಬೋಳಿಯಾರು, ಪಜೀರು ಗ್ರಾಮಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಲಗೋರಿ, ಡೊಂಕಾಟ, ಜುಬುಲಿ, ಕಲ್ಲಾಟ, ಬಚ್ಚ ಹಾಗೂ ಕಂಬಾಟ ಮುಂತಾದ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.ಈ ಕ್ರೀಡೆಗಳನ್ನು ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ನಡೆಸಲಾಯಿತು. ಕ್ರೀಡೆಯಲ್ಲಿ ನಾಲ್ಕು ಗ್ರಾಮಗಳ ಸುಮಾರು ೫೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ನೀಡಲಾಯಿತು. ಪತ್ರಕರ್ತ ಹಂಝ ಮಲಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

  ಸಂಜೆ ೪:೦೦ ಗಂಟೆಗೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ನೀರುಮಾರ್ಗ ಜಿಲ್ಲಾ ಪಂಚಾಯತ್ ಸದಸ್ಯರಾದ ಮೆಲ್ವಿನ್ ಡಿಸೋಜ, ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಕೊಣಾಜೆ ಜಿಲ್ಲಾ ಪಂಚಾಯತ್ ಸದಸ್ಯರಾದ ಎನ್.ಎಸ್. ಕರೀಮ್, ತಾಲೂಕು ಪಂಚಾಯತ್ ಸದಸ್ಯರುಗಳಾದ ಮುಹಮ್ಮದ್ ಮೋನು, ಮುಹಮ್ಮದ್ ಮುಸ್ತಫಾ, ಬೋಳಿಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹರೇಕಳ ಹಾಜಬ್ಬ, ಸಾಹಿತ್ಯ ಕ್ಷೇತ್ರದಲ್ಲಿ ಇಸ್ಮತ್ ಪಜೀರ್, ಸ್ತ್ರೀ ಶಕ್ತಿ ಸಂಘಟನೆಯಲ್ಲಿ ಜುಬೇದ ಹಾಗೂ ನಾಟಿ ವೈದ್ಯೆ ಕ್ಷೇತ್ರದಲ್ಲಿ ರುಕಿಯಾ ಮುಂತಾದ ಸಾಧಕರನ್ನು ಸ್ಮರಣಿಕೆ, ಶಾಲು ಹಾಗೂ ನಗದು ನೀಡಿ ಅಭಿನಂದಿಸಲಾಯಿತು.

  ಸಂಝೆ ೭:೩೦ ಗಂಟೆಗೆ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬಹುಭಾಷಾ ಕವಿ ಮುಹಮ್ಮದ್ ಬಡ್ಡೂರು ವಹಿಸಿದ್ದರು. ಬಶೀರ್ ಅಹ್ಮದ್ ಕಿನ್ಯ, ಹಂಝ ಮಲಾರ್, ಮುಆದ್ ಗೊಳ್ತಮಜಲು, ಹರೇಕಳ ಲಕ್ಷ್ಮಿ ನಾರಾಯಣ ರೈ, ವಿಜಯಲಕ್ಷ್ಮಿ ಕಟೀಲು, ಎಡ್ವರ್ಡ್ ಲೋಬೋ ಹಾಗೂ ಕುಮಾರಿ ಜೆವಿತಾ ಸಿಕ್ವೇರಾ ಕವಿಗಳಾಗಿ ಭಾಗವಹಿಸಿದ್ದರು.

  ಆನಂತರ ಇಸ್ಮಾಯಿಲ್ ಮೂಡುಶೆಡ್ಡೆ ರಚಿಸಿ ನಿರ್ದೇಶಿಸಿದ ”ಕಾಸಿಮಾಕರೊ ಪಿತ್ತ ’ಲ್” ಎಂಬ ಬ್ಯಾರಿ ಹಾಸ್ಯಮಯ ನೀತಿಭೋದಕ ನಾಟಕ ಪ್ರದರ್ಶನಗೊಂಡಿತು. ಹಾಗೂ ಬಶೀರ್ ಅಹ್ಮದ್ ಕಿನ್ಯ, ಸುಹೈಲ್ ಬಡ್ಡೂರು, ಅಶ್ರಫ್ ಅಪೋಲೊ, ಲತೀಫ್ ನೇರಳಕಟ್ಟೆ ಇವರುಗಳು ಬ್ಯಾರಿ ಹಾಡುಗಳನ್ನು ನಡೆಸಿಕೊಟ್ಟರು. ಲತೀಫ್ ನೇರಳಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು. ಸದಸ್ಯರಾದ ಯೂಸುಫ್ ವಕ್ತಾರ್ ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.
 • ಪತ್ರಕರ್ತ ಹಂಝ ಮಲಾರ್ ರವರ ಬ್ಯಾರಿ ಕೃತಿ ಸುವಾದ್ ಬಿಡುಗಡೆ
  ಕರ್ನಾಟಕ ಬ್ಯಾರಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ ೭-೨-೨೦೧೫ರಂದು ಅಕಾಡೆಮಿ ಕಚೇರಿಯಲ್ಲಿ “ಪತ್ರಕರ್ತ ಹಂಝ ಮಲಾರ್ ರವರ ಬ್ಯಾರಿ ಕೃತಿ ಸುವಾದ್ ಬಿಡುಗಡೆ” ಕಾರ್ಯಕ್ರಮವು ನಡೆಯಿತು.

  ಅಕಾಡೆಮಿಯ ಅಧ್ಯಕ್ಷ್ಯರಾದ ಬಿ.ಎ.ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಹಿತಿಯಾದ ಪ್ರೊ.ಬಿ.ಎಂ. ಇಚ್ಲಂಗೋಡು ಸುವಾದ್ ಪುಸ್ತಕವನ್ನು ಬಿಡುಗಡೆ ಮಾಡಿದರು.ಹಾಜಿ ಹಮೀದ್ ಕಂದಕ್ ಪುಸ್ತಕವನ್ನು ಸ್ವೀಕರಿಸಿದರು. ಲೇಖಕರಾದ ಇಸ್ಮತ್ ಪಜೀರ್ ಪುಸ್ತಕವನ್ನು ಪರಿಚಯಿಸಿದರು. ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರಾದ ಎ.ಕೆ. ಕುಕ್ಕಿಲ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಕೇಟ್ ಸದಸ್ಯರಾದ ಪಿ.ವಿ.ಮೋಹನ್, ಸಾಹಿತಿಯಾದ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಇದೇ ಸಂದರ್ಭದಲ್ಲಿ ಪತ್ರಕರ್ತ ಹಂಝ ಮಲಾರ್ ರವರನ್ನು ಅಕಾಡೆಮಿಯ ಪರವಾಗಿ ಸನ್ಮಾನಿಸಲಾಯಿತು. ಮತ್ತು ನಿಯಮಾನುಸಾರ ಪುಸ್ತಕ ಹಾಗೂ ಸಂಭಾವನೆಯನ್ನು ನೀಡಲಾಯಿತು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮವನ್ನು ನಿರೂಪಿಸಿದರು. ಯೂಸುಫ್ ವಕ್ತಾರ್ ದನ್ಯವಾದ ಸಮರ್ಪಿಸಿದರು. ಶ್ರೀಮತಿ ಎ.ಎ. ಆಯಿಶಾ ಪೆರ್ಲ ಸದಸ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳಿಗೆ, ಸಾಹಿತಿಗಳಿಗೆ ಸಂಭಾವನೆ ಆತಿಥ್ಯ ಹಾಗೂ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು.
 • ಬ್ಯಾರಿ ಸಾಹಿತ್ಯ – ಸಾಂಸ್ಕೃತಿಕ ಮೇಳ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಬಂಟ್ವಾಳ ಇದರ ಸಹಯೋಗದೊಂದಿಗೆ ೨೩-೧೧-೨೦೧೪ರಂದು ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪ ಕೆಳಗಿನಪೇಟೆ ಬಂಟ್ವಾಳದಲ್ಲಿ “ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳ” ಕಾರ್ಯಕ್ರಮ ನಡೆಯಿತು.

  ದ.ಕ. ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖಾ ಸಚಿವರಾದ ಶ್ರೀ ಬಿ.ರಮಾನಾಥ ರೈ ಕಾರ್ಯಕ್ರಮವನ್ನು ಉದ್ಟಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಂಟ್ವಾಳ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ವಂಸತಿ ಚಂದಪ್ಪ, ಬಂಟ್ವಾಳ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಯಾಸ್ಮೀನ್, ದ.ಕ. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಚಂದ್ರ ಪ್ರಕಾಶ್ ಶೆಟ್ಟಿ, ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಾಗೂ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಹಾಜಿ ಬಿ.ಮೊಹಮ್ಮದ್ ಅಲಿ, ಹಜಾಜ್ ಸಮೂಹ ಸಂಸ್ಥೆಯ ಪಾಲುದಾರರಾದ ಹಾಜಿ ಜಿ.ಮೊಹಮ್ಮದ್ ಹನೀಫ್, ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷರಾದ ಜನಾಬ್ ಪಿ.ಎ.ರಹೀಮ್, ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಅಲಿ ಬೊಳಂತೂರು, ಬಂಟ್ವಾಳ ಪುರಸಭೆಯ ಮಾಜಿ ಸದಸ್ಯರಾದ ಜನಾಬ್ ರಿಯಾಝ್ ಹುಸೇನ್ ಮುಂತಾದವರು ಗಣ್ಯ ಉಪಸ್ಥಿಯಾಗಿ ಭಾಗವಹಿಸಿದ್ದರು.

  ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಶ್ರೀ ರಮೇಶ್ ನಾಯಕ್, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಬ್ದುಲ್ ರಝಾಕ್ ಅನಂತಾಡಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ೨೦೧೪ರ ಡಾಕ್ಟರೇಟ್ ಪದವಿ ಪುರಸ್ಕೃತ ಸಹೋದರರಾದ ಡಾ|ಇಸ್ಮಾಯಿಲ್, ಡಾ|ಸಂಶುದ್ದೀನ್ ಇವರನ್ನು ಶ್ರೀ ಬಿ.ರಮಾನಾಥ ರೈ ಶಾಲು ಸ್ಮರಣಿಕೆ ಹಾಗೂ ಪಲಪುಷ್ಪ ನೀಡಿ ಸನ್ಮಾನಿಸಿದರು.

  ನಂತರ ಸಮಾರೋಪ ಸಮಾರಂಭ ಮತ್ತು ಬ್ಯಾರಿ-ತುಳು ಕವಿಗೋಷ್ಠಿ ನಡೆಯಿತು. ಹಿರಿಯ ಬಹುಭಾಷಾ ಕವಿ ಮುಹಮ್ಮದ್ ಬಡ್ಡೂರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ| ಸಾಯಿಗೀತಾ, ಮುಸ್ತಾಫ ಗೂಡಿನಬಳಿ, ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ, ಪೂವಪ್ಪ ನೇರಳಕಟ್ಟೆ, ಸತ್ತಾರ್ ಗೂಡಿನಬಳಿ, ಮುಆದ್ ಗೊಳ್ತಮಜಲು, ದಯಾನಂದ ಕತ್ತಲ್ ಸಾರ್, ಅಶ್ರಫ್ ಅಪೋಲೋ ಕಲ್ಲಡ್ಕ, ರಶೀದ್ ನಂದಾವರ ಮುಂತಾದವರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಅಶ್ರಫ್ ಅಪೋಲೋ ಮತ್ತು ರಹೀಮ್ ಬಿ.ಸಿ.ರೋಡ್ ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

  ಅಕಾಡೆಮಿಯ ರಿಜಿಸ್ಟ್ರಾರ್‍ ಉಮರಬ್ಬ ಸ್ವಾಗತಿಸಿದರು. ಸದಸ್ಯರಾದ ಅಬ್ಬಾಸ್ ಕಿರುಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಯೂಸುಪ್ ವಕ್ತಾರ್ ದನ್ಯವಾದ ಸಮರ್ಪಿಸಿದರು.
 • ಬ್ಯಾರಿ-ಕನ್ನಡ-ಇಂಗ್ಲಿಷ್ ತ್ರಿಭಾಷಾ ಶಬ್ದಕೋಶ ರಚನೆಗೆ ಚಾಲನೆ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ೧೨-೧೧-೨೦೧೪ರಂದು ಅಕಾಡೆಮಿ ಕಚೇರಿಯಲ್ಲಿ “ಬ್ಯಾರಿ-ಕನ್ನಡ-ಇಂಗ್ಲಿಷ್ ಬ್ಯಾರಿ ಭಾಷೆ ಶಬ್ದಕೋಶ ರಚನೆಗೆ ಚಾಲನೆ” ಕಾರ್ಯಕ್ರಮವು ನಡೆಯಿತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ್ಯರಾದ ಬಿ.ಎ. ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಶಬ್ದಕೋಶ ರಚನೆಗೆ ಚಾಲನೆಯನ್ನು ನೀಡಿದರು. ಮಾಜಿ ರಾಜ್ಯಸಭಾ ಸದಸ್ಯರಾದ ಬಿ.ಇಬ್ರಾಹಿಮ್, ಕರ್ನಾಟಕ ತಿಯೊಲಾಜಿಕಲ್ ಸಂಶೊಧನಾ ಕೇಂದ್ರದ ಪ್ರಾಧ್ಯಾಪಕರಾದ ಡಾ|ಎನ್.ಇಸ್ಮಾಯಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಇದೇ ಸಂದರ್ಭ “ಕನಕ ಶ್ರೀ” ಪ್ರಶಸ್ತಿ ವಿಜೇತರಾದ ಪ್ರೊ.ಎ.ವಿ.ನಾವಡ ಇವರನ್ನು ಸನ್ಮಾನಿಸಲಾಯಿತು. ರಿಜಿಸ್ಟ್ರಾರ್‍ ಉಮರಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ಸದಸ್ಯರಾದ ಯೂಸುಪ್ ವಕ್ತಾರ್ ಸ್ವಾಗತಿಸಿದರು. ಕೆ. ಇದಿನಬ್ಬ ಬ್ಯಾರಿ ದನ್ಯವಾದ ಸಮರ್ಪಿಸಿದರು. ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
 • ಸಾಹಿತ್ಯ ಅಧ್ಯಯನ ಶಿಬಿರ ಹಾಗೂ ಹೊಸ ಬ್ಯಾರಿ ಹಾಡುಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ ೨೭-೧೦-೨೦೧೪ರಂದು ಸಂತ ಅಲೋಶಿಯಸ್ ಕಾಲೇಜ್ ಸಭಾಂಗಣದಲ್ಲಿ “ಸಾಹಿತ್ಯ ಅಧ್ಯಯನ ಶಿಬಿರ” ಕಾರ್ಯಕ್ರಮ ನಡೆಯಿತು.

  ಬೆಳಿಗ್ಗೆ ೯:೩೦ಕ್ಕೆ ನಡೆದ ಉದ್ಟಾಟನಾ ಸಮಾರಂಭವನ್ನು ಶ್ರೀಮತಿ ಚಂದ್ರಕಲಾ ನಂದಾವರ ಉದ್ಟಾಟಿಸಿದರು. ಜನಾಬ್ ಮುಹಮ್ಮದ್ ಶರೀಫ್ ನಿರ್ಮುಂಜೆ ಧ್ಯೇಯಗೀತೆ ಹಾಡಿದರು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸದಸ್ಯರಾದ ಯೂಸುಫ್ ವಕ್ತಾರ್ ಪ್ರಾಸ್ತಾವಿಕ ಮಾತುಗಳ್ನಾಡಿದರು. ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ನ ಕಾರ್ಯಾದರ್ಶಿಯಾದ ಬಿ.ಎ. ಶಂಸುದ್ದೀನ್ ಮಡಿಕೇರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

  ಬೆಳಿಗ್ಗೆ ೧೦:೪೫ ರಿಂದ ಸಾಹಿತ್ಯ ಅಧ್ಯಯನ ತರಗತಿ ನಡೆಯಿತು. ಡಾ| ಮುರಳೀಧರ ಉಪಾಧ್ಯಾಯ ಇವರು ಸಾಹಿತ್ಯ ಏನು?ಹೇಗೆ? ಮತ್ತು ಏಕೆ? ಜನಾದ್ ಶಾದ್ ಬಾಗಲಕೋಟೆ ಇವರು ಫಝಲ್ನ ಇತಿಹಾಸ, ಜನಾಬ್ ಮುಹಮ್ಮದ್ ಬಡ್ಡೂರ್ ಸಾಹಿತ್ಯ ಮತ್ತು ಸಮಾಜ ಎಂಬ ವಿಷಯದ ಬಗ್ಗೆ ಗೋಷ್ಠಿ ನಡೆಸಿಕೊಟ್ಟರು.

  ನಂತರ ಶಿಬಿರಾರ್ಥಿಗಳಿಗೆ ಸಾಹಿತ್ಯದ ಪರೀಕ್ಷೆ ಹಾಗೂ ಸಾಹಿತಿಗಳೊಂದಿಗೆ ಶಿಬಿರಾರ್ಥಿಗಳ ಸಂವಾದ ನಡೆಯಿತು. ಅಕಾಡೆಮಿಯ ಮಾಜಿ ಸದಸ್ಯರಾದ ಹಂಝ ಮಲಾರ್ ಅಧ್ಯಯನ ಶಿಬಿರದ ನಿರ್ವಹಣೆ ಮಾಡಿದರು ಹಾಗೂ ಶಿಬಿರಾರ್ಥಿಗಳಿಗೆ ಪರೀಕ್ಷೆ ನಡೆಸಿಕೊಟ್ಟರು.

  ಸಾಯಂಕಾಲ ೩:೩೦ಕ್ಕೆ ಸಮಾರೋಪ ಸಮಾರಂಭ ಮತ್ತು ಹೊಸ ಬ್ಯಾರಿ ಹಾಡುಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮ ನಡೆಯಿತು. ದ.ಕ. ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖಾ ಸಚಿವರಾದ ಶ್ರೀ ಬಿ.ರಮಾನಾಥ ರೈ ಹೊಸ ಬ್ಯಾರಿ ಹಾಡುಗಳ ಸಿ.ಡಿ. ಬಿಡುಗಡೆ ಮತ್ತು ಸಮರೋಪ ಭಾಷಣ ಮಾಡಿದರು. ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜನಾಬ್ ಮೊÊದಿನ್ ಬಾವಾ ಸಾಹಿತಿಗಳಿಗೆ, ಹಾಡುಗಾರರಿಗೆ ಹಾಗೂ ಸಂಗೀತ ನಿರ್ದೇಶಕರಿಗೆ ಅಭಿನಂದನೆ ಮಾಡಿದರು. ಖ್ಯಾತ ನಾಟಕಕಾರರಾದ ಶ್ರೀ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಸಿ.ಡಿ.ಯ ಬಗ್ಗೆ ವಿಮರ್ಶೆ ಮಾಡಿದರು. ಸಂಗೀತ ನಿರ್ದೇಶಕರಾದ ಶ್ರೀ ವಿಜಯ್ (ಕೋಕಿಲ) ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಸಾಹಿತ್ಯದ ಪರೀಕ್ಷೆಯಲ್ಲಿ ವಿಜೇತರಾದವರಿಗೆ ನಗದು (ಪ್ರಥಮ, ದ್ವೀತಿಯ ತೃತೀಯ) ಹಾಗೂ ಪ್ರಮಾಣ ಪತ್ರ ನೀಡಲಾಯಿತು. ದ.ಕ. ಮತ್ತು ಉಡುಪಿ ಜಿಲ್ಲೆ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಜನಾಬ್ ಇಬ್ರಾಹಿಮ್ ಕೋಡಿಜಾಲ್ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಿದರು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಆಯಿಷಾ ಪೆರ್ಲ ದನ್ಯವಾದ ಸಮರ್ಪಿಸಿದರು. ಟಿ.ಎ. ಆಲಿಯಬ್ಬ ಜೋಕಟ್ಟೆ ಸದಸ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.
 • ಬ್ಯಾರಿ ಅಕಾಡೆಮಿ ಮತ್ತು ಚಿಕ್ಕಮಗಳೂರಿನ ಬ್ಯಾರಿಗಳು ಕಾರ್ಯಕ್ರಮದ ವರದಿ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ ೯-೧೦-೨೦೧೪ ರಂದು ಲಯನ್ಸ್ ಸೇವಾ ಮಂದಿರ, ಭಾರತ ರೈಸ್ ಮಿಲ್ ಕೊಪ್ಪದಲ್ಲಿ “ಬ್ಯಾರಿ ಅಕಾಡೆಮಿ ಮತ್ತು ಚಿಕ್ಕಮಗಳೂರಿನ ಬ್ಯಾರಿಗಳು” ಕಾರ್ಯಕ್ರಮ ನಡೆಯಿತು.

  ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೊಪ್ಪ ತಾಲೂಕು ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಬದ್ರಿಯಾ ಮುಹಮ್ಮದ್, ಮೂಡಿಗೆರೆ ತಾಲೂಕು ಬ್ಯಾರೀಸ್ ಒಕ್ಕೂಟದ ಅಧ್ಯಕ್ಷರಾದ ಸಿ.ಕೆ. ಇಬ್ರಾಹಿಮ್, ಮೂಡಿಗೆರೆ ಸಂಯುಕ್ತ ಜಮಾಅತ್ನ ಪ್ರಧಾನ ಕಾರ್ಯದರ್ಶಿಯಾದ ಎ.ಸಿ ಅಯ್ಯೂಬ್ ಹಾಜಿ, ಕರ್ನಾ ಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಎನ್.ಎ. ಶೇಕಬ್ಬ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಕೆ.ಇದಿನಬ್ಬ ಬ್ಯಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮತ್ತು ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯರಾದ ಅಬ್ಬಾಸ್ ಕಿರುಗುಂದ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಬ್ದುಲ್ ಹಮೀದ್ ಗೊಳ್ತಮಜಲು ವಂದಿಸಿದರು.
 • ಬ್ಯಾರಿ ಭಾಷಾ ದಿನಾಚರಣೆ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ ೩-೧೦-೨೦೧೪ರಂದು ಅಕಾಡೆಮಿ ಕಚೇರಿಯಲ್ಲಿ “ಬ್ಯಾರಿ ಭಾಷಾ ದಿನಾಚರಣೆ” ಕಾರ್ಯಕ್ರಮ ನಡೆಯಿತು. ಸುಧಾ ವಾರಪತ್ರಿಕೆಯ ಉಪಸಂಪಾದಕರಾದ ಬಿ.ಎಮ್. ಹನೀಫ್ ಕಾರ್ಯಕ್ರಮವನ್ನು ಉದ್ಟಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಸತ್ಯನಾರಾಯಣ ಮಲ್ಲಿಪಟ್ನ, ಬಹುಭಾಷಾ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು, ಬದ್ರಿಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ|ಎನ್.ಇಸ್ಮಾಯಿಲ್ ಹಾಗೂ ಅಲ್-ಬದ್ರಿಯಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ.ಎಮ್. ಮುಮ್ತಾಝ್ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಬ್ಯಾರಿ ಭಾಷೆಯಲ್ಲಿ ಮಹತ್ತರ ಸಾಧನೆಗೈದ ಅಬ್ದುಲ್ ಅಝೀಝ್ ಬೈಕಂಪಾಡಿ, ಇಬ್ರಾಹಿಮ್ ತಣ್ಣೀರುಬಾವಿ, ಬಿ.ಎ. ಷಂಶುದ್ದೀನ್ ಮಡಿಕೇರಿ, ರಹೀಮ್ ಬಿ.ಸಿ.ರೋಡ್, ಇಸ್ಮಾಯಿಲ್ ಮೂಡುಶೆಡ್ಡೆ, ಹಂಝ ಮಲಾರ್ ಹಾಗೂ ಮುಹಮ್ಮದ್ ಶರೀಫ್ ನಿರ್ಮುಂಜೆ ಇವರನ್ನು ಸನ್ಮಾನಿಸಲಾಯಿತು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯರಾದ ಹಮೀದ್ ಪಡುಬಿದ್ರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಹಾಗೂ ಅಬ್ಬಾಸ್ ಕಿರುಗುಂದ ವಂದಿಸಿದರು.
 • ಗಡಿನಾಡ ಬ್ಯಾರಿಗಳ ಸಾಂಸ್ಕೃತಿಕ ಕಾರ್ಯಾಗಾರ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಪತ್ರಕರ್ತರ ಸಮಾಲೋಚನೆ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ೨೭-೯-೨೦೧೪ರಂದು ಸಿ.ಟಿ. ಟವರ್ ಸಭಾಂಗಣ ಕಾಸರಗೋಡಿನಲ್ಲಿ ಗಡಿನಾಡ ಬ್ಯಾರಿಗಳ ಸಾಂಸ್ಕೃತಿಕ ಕಾರ್ಯಾಗಾರ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಪತ್ರಕರ್ತರ ಸಮಾಲೋಚನೆ ಕಾರ್ಯಕ್ರಮ ನಡೆಯಿತು.

  ಕೇರಳ ಮಾಪಿಳ್ಳ ಕಲಾ ಮಂಡಲಮ್ ಇದರ ಅಧ್ಯಕ್ಷರಾದ ಎಮ್.ಸಿ.ಕಮರುದ್ದೀನ್ ಕಾರ್ಯಕ್ರಮವನ್ನು ಉದ್ಟಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮೊಹಮ್ಮದ್ ಹನೀಪ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ಶ್ರೀಮತಿ ಎ.ಎ.ಆಯಿಷಾ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇರಳ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮುಹಮ್ಮದ್ ಅಹಮ್ಮದ್, ಮಲಯಾಳಂ ಕ್ಯಾಂಪಸ್ ಕಣ್ಣೂರು ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಶ್ರೀ ಡಾ|ಎ.ಎಮ್. ಶ್ರೀಧರನ್, ಹಿರಿಯ ಬ್ಯಾರಿ ಮುಂದಾಳು ಎ.ಅಬೂಬಕ್ಕರ್, ಕರ್ನಾಟಕ ಜಾನಪದ ಪರಿಷತ್ನ ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ನಾನಿತ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಹಮೀದ್ ಶಮ್ಮಾಡ್, ಅಹ್ಮದ್ ಕುಂಞಿ, ಎ.ಅಬೂಬಕ್ಕರ್, ಎ.ಎಮ್. ಶ್ರೀಧರನ್ ಇವರನ್ನು ಅಕಾಡೆಮಿಯ ಪರವಾಗಿ ಸನ್ಮಾನಿಸಲಾಯಿತು.

  ಅಕಾಡೆಮಿಯ ರಿಜಿಸ್ಟ್ರಾರ್‍ ಉಮರಬ್ಬ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಯೂಸುಫ್ ವಕ್ತಾರ್ ವಂದಿಸಿದರು.
 • ಬ್ಯಾರಿ ಭಾಷಾ ಶಿಕ್ಷಕರ ದಿನಾಚರಣೆ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಸಮನ್ವಯ ಮುಸ್ಲಿಮ್ ಶಿಕ್ಷಕರ ಸಂಘದ ಸಹಯೋಗದೊಂದಿಗೆ ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ಸಭಾಂಗಣದಲ್ಲಿ ೧೪-೯-೨೦೧೪ರಂದು “ಬ್ಯಾರಿ ಭಾಷಾ ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾದ ಎ.ಬಿ. ಇಬ್ರಾಹಿಮ್ ಕಾರ್ಯಕ್ರಮವನ್ನು ಉದ್ಟಾಟಿಸಿದರು. ಶಿಕ್ಷಣ ತಙ್ಙರು ಮತ್ತು ನಿವೃತ್ತ ಶಿಕ್ಷಕರಾದ ಹೆಚ್ ಕೃಷ್ಣ ಶಾಸ್ತ್ರಿ ಬಾಳಿಲ, ಯೆನೆಪೋಯ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಚಾರ್ಯರಾದ ಡಾ|ಮುಹಮ್ಮದ್ ಗುತ್ತಿಗಾರ್, ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ನ ಗೌರವ ಸಲಹೆಗಾರರಾದ ಅಕ್ಬರ್ ಅಲಿ, ಸಮನ್ವಯ ಮುಸ್ಲಿಮ್ ಶಿಕ್ಷಕರ ಸಂಘದ ಅಧ್ಯಕ್ಷರಾದ ಮುಹಮ್ಮದ್ ತುಂಬೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಇಬ್ರಾಹಿಮ್ ಎಮ್, ಇಸ್ಮಾಯಿಲ್ ಹೆಚ್.ಮಲಾರ್, ಖಾಲಿದಾ ಬಾನು, ಹೆಚ್ ಕೃಷ್ಣ ಶಾಸ್ತ್ರಿ ಬಾಳಿಲ, ಮುಹಮ್ಮದ್ ಗುತ್ತಿಗಾರ್, ನೂರುಲ್ ಹಮೀದ್, ಎ.ಬಿ.ಇಬ್ರಾಹಿಮ್, ಮುಹಮ್ಮದ್ ತುಂಬೆ, ಮುಸ್ಲಿಮ್ ಶಿಕ್ಷಕ ಸಂಘ, ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್, ಸಂಸ್ಥೆ ಇವರೆಲ್ಲರನ್ನು ಅಕಾಡೆಮಿಯ ಪರವಾಗಿ ಸನ್ಮಾನಿಸಲಾಯಿತು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ದನ್ಯವಾದ ಸಮರ್ಪಿಸಿದರು.

  ಕಾರ್ಯಕ್ರಮದ ಪ್ರಯುಕ್ತ ಬ್ಯಾರಿ ಭಾಷಾ ಶಿಕ್ಷಕರಿಗೆ ಚಿತ್ರಕಲೆ, ಆಶುಭಾಷಣ, ಕವನ ರಚನೆ, ಕ್ವಿಝ್, ನೆನಪಿನ ಶಕ್ತಿ, ಪ್ರಬಂಧ ಮುಂತಾದ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
 • ಬ್ಯಾರಿ ಸಾಹಿತ್ಯ ಸಾಮರಸ್ಯ ಮತ್ತು ಸಾಂಸ್ಕೃತಿಕ ಮೇಳ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಮೈನಾರಿಟಿ ಡೆವಲಪ್ ಮೆಂಟ್ ಅಸೋಸಿಯೇಶನ್ ಉಳ್ಳಾಲ ಇವರ ಸಹಯೋಗದೊಂದಿಗೆ ತಾಜ್ ಮಹಲ್ ಹಾಲ್ ಉಳ್ಳಾಲದಲ್ಲಿ ಮೇ ೩೧ ರಂದು “ಬ್ಯಾರಿ ಸಾಹಿತ್ಯ ಸಾಮರಸ್ಯ ಮತ್ತು ಸಾಂಸ್ಕೃತಿಕ ಮೇಳ” ಕಾರ್ಯಕ್ರಮ ನಡೆಯಿತು. ಮೀಫ್ ನ ಅಧ್ಯಕ್ಷರಾದ ಮುಹಮ್ಮದ್ ಬ್ಯಾರಿ ಎಡಪದವು ಕಾರ್ಯಕ್ರಮವನ್ನು ಉದ್ಟಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಈಶ್ವರ್ ಉಳ್ಳಾಲ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾದ ಮುಹಮ್ಮದ್ ಕುಂಞಿ, ಕರ್ನಾಟಕ ಮುಸ್ಲಿಮ್ ಪರಿಷತ್ನ ಅಧ್ಯಕ್ಷರಾದ ಅಲ್ ಹಾಜಿ ಹಮೀದ್ ಕಂದಕ್, ಉಳ್ಳಾಲ ನಗರ ಪಂಚಾಯತ್ನ ಮಾಜಿ ಅಧ್ಯಕ್ಷರಾದ ದಿನಕರ್ ಉಳ್ಳಾಲ್, ಕೆ.ಎಮ್. ಡಿ.ಸಿಯ ಜಿಲ್ಲಾ ವ್ಯವಸ್ಥಾಪಕರಾದ ಸೋಮಪ್ಪ, ಪುರಸಭೆ ಉಳ್ಳಾಲದ ಕೌನ್ಸಿಲರಾದ ಫಾರೂಕ್ ಉಳ್ಳಾಲ್, ಶಾಸಕರಾದ ಮೊÊದಿನ್ ಬಾವಾ, ಮಾಜಿ ಶಿಕ್ಷಣ ಸಚಿವರಾದ ಬಿ.ಎ. ಮೊÊದಿನ್, ಉಳ್ಳಾಲ ಪುರಸಭೆಯ ಅಧ್ಯಕ್ಷರಾದ ಗಿರಿಜಾ ಎಮ್, ಉಳ್ಳಾಲ ಪುರಸಭೆಯ ಉಪಾಧ್ಯಕ್ಷರಾದ ರಝಿಯಾ ಇಬ್ರಾಹಿಮ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಇದೇ ಸಂದರ್ಭದಲ್ಲಿ ಅಮೃತ ಸೋಮೇಶ್ವರ, ಅನ್ವರ್ ಹುಸೈನ್, ಪಂಡಿತ್ ಇಬ್ರಾಹಿಮ್, ವಾಸುದೇವ ಬೊಳೂರು, ಶ್ರೀಧರ್ ಮಾಸ್ಟರ್, ಶ್ರೀಮಾನ್ ಲೋಯಿ ಅಲ್ಬುಕರ್ಕ್, ಅಬ್ದುಲ್ಲ ಉಸ್ತಾದ್ ಇವರನ್ನು ಸನ್ಮಾನಿಸಲಾಯಿತು. ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಬಿ.ರಮಾನಾಥ ರೈ ಸನ್ಮಾನ ನೆರವೇರಿಸಿದರು.

  ಸುಧಾ ವಾರಪತ್ರಿಕೆಯ ಉಪಸಂಪಾದಕರಾದ ಬಿ.ಎಮ್. ಹನೀಫ್ ದಿಕ್ಸೂಚಿ ಭಾಷಣ ಮಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಶರೀಫ್ ನಿರ್ಮುಂಜೆ ಆಶಯಗೀತೆ ಹಾಡಿದರು. ಅಕಾಡೆಮಿಯ ಅಧ್ಯಕ್ಷ ಶುಭಾ ಶಂಸನೆಗೈದರು.

  ನಂತರ ಇಬ್ರಾಹಿಮ್ ತಣ್ಣೀರುಬಾವಿಯವರ ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿಯು ನಡೆಯಿತು. ಕವಿಗಳಾದ ಮುಹಮ್ಮದ್ ಬಡ್ಡೂರು, ಯು.ಎ.ಕಾಸೀಮ್ ಉಳ್ಳಾಲ್, ಮುಹಮ್ಮದ್ ಶರೀಫ್ ನಿರ್ಮುಂಜೆ, ಭಾಸ್ಕರ ರೈ ಕುಕ್ಕುವಳ್ಳಿ, ರಘು ಇಡ್ಕಿದು, ಮರಿಯಮ್ ಉಳ್ಳಾಲ್ ಬೈಲು, ಲಕ್ಷೀ ನಾರಾಯಣ ರೈ ಹರೇಕಳ, ಯಶೋದಾ ಮೋಹನ್ ಕಾವೂರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

  ರಹೀಮ್ ಬಿ.ಸಿ. ರೋಡ್ ಬಳಗ ಮತ್ತು ಅಶ್ರಫ್ ಅಪೋಲೋ ಬಳಗದಿಂದ ದಫ್, ಕೋಲ್ಕಲಿ, ಬ್ಯಾರಿ ಹಾಡು, ಜಾನಪದ ರಸಮಂಜರಿ, ಮಿಮಿಕ್ರಿ ಮತ್ತು ಚಿರಿಕಲಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
 • ಗೌರವ ಪ್ರಶಸ್ತಿ ವಿಜೇತರ ಸಾಹಿತ್ಯ ಸಮಾಗಮ
  ಕರ್ನಾಟಕ ಬ್ಯಾರಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ೨೧-೫-೨೦೧೪ರಂದು ಮಂಗಳೂರಿನ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ“ಗೌರವ ಪ್ರಶಸ್ತಿ ವಿಜೇತರ ಸಾಹಿತ್ಯ ಸಮಾಗಮ” ಕಾರ್ಯಕ್ರಮ ನಡೆಯಿತು.

  ಅಕಾಡೆಮಿಯ ಅಧ್ಯಕ್ಷರಾದ ಬಿ.ಎ.ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಜಾನಕಿ ಎಂ.ಬ್ರಹ್ಮಾವರ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರೊನಾಲ್ಡ್ ಎಸ್.ಕ್ಯಾಸ್ತಲಿನೋ, ತುಳು ಅಕಾಡೆಮಿ ಕೇರಳ ಇದರ ಅಧ್ಯಕ್ಷರಾದ ಶ್ರೀ ಸುಬ್ಬಯ್ಯ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ೨೦೦೮ರಿಂದ ೨೦೧೩ರವರೆಗಿನ ಗೌರವ ಪ್ರಶಸ್ತಿ ವಿಜೇತ ಮತ್ತು ಪುರಸ್ಕೃತರಾದ ಜನಾಬ್ ಇಬ್ರಾಹಿಮ್ ತಣ್ಣೀರುಬಾವಿ, ಯು.ಎ.ಕಾಸೀಮ್ ಉಳ್ಳಾಲ್, ಕೆ.ಪಿ.ಅಬ್ದುಲ್ ಖಾದರ್ ಕುತ್ತೆತ್ತೂರು, ಮುಹಮ್ಮದ್ ಮಾರಿಪಳ್ಳ, ರಹೀಮ್ ಬಿ.ಸಿ.ರೋಡ್, ಅಹ್ಮದ್ ಬಾವಾ ಬಜಾಲ್, ವಿ.ಎ. ಇಸ್ಮಾಯಿಲ್ ಮದನಿ, ಹಂಝ ಮಲಾರ್, ಮುಹಮ್ಮದ್ ಬಡ್ಡೂರು, ಕೆ.ಮೊಹಮ್ಮದ್ ಚಿಕ್ಕಮಗಳೂರು, ಬಶೀರ್ ಬೈಕಂಪಾಡಿ, ಇಸ್ಮಾಯಿಲ್ ಮೂಡುಶೆಡ್ಡೆ, ಚಾರ್ಮಾಡಿ ಹಸನಬ್ಬ, ಝಕರಿಯಾ ವೇಣೂರು ಮುಂತಾದವರು ಭಾಗವಹಿಸಿ ಅಕಾಡೆಮಿಯ ಕಾರ್ಯ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದರು.

  ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಶಿಕ್ಷಕ ಬಿ.ಎಂ. ತುಂಬೆ ಕಾರ್ಯಕ್ರಮವನ್ನು ನಿರೂಪಿಸಿದರು.
 • ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ವಿದ್ಯಾಭಾರತಿ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಆತೂರು ಸಹಯೋಗದಲ್ಲಿ ೨೭-೪-೨೦೧೪ರಂದು ವಿದ್ಯಾಭಾರತಿ ವಿದ್ಯಾಕೇಂದ್ರ ಆತೂರಿನಲ್ಲಿ “ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳ” ಕಾರ್ಯಕ್ರಮ ನಡೆಯಿತು.

  ಕಾರ್ಯಕ್ರಮದ ಉದ್ಟಾಟನೆಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಪಕಾಧ್ಯಕ್ಷರಾದ ಎಂ.ಬಿ. ಅಬ್ದುಲ್ ರಹ್ಮಾನ್ ನೆರವೇರಿಸಿದರು. ಅಕಾಡೆಮಿಯ ಅಧ್ಯಕ್ಷ್ಯರಾದ ಬಿ.ಎ.ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಲ್ಪಸಂಖ್ಯಾ ತ ಕಲ್ಯಾಣ ಘಟಕದ ಜಿಲ್ಲಾ ಅಧಿಕಾರಿಯಾದ ಸಾಬಿರ್ ಅಹ್ಮದ್ ಮುಲ್ಲ, ಬ್ಯಾರಿ ಸಾಹಿತಿಯಾದ ಕೆ.ಪಿ.ಅಬ್ದುಲ್ ಖಾದರ್ ಕುತ್ತೆತ್ತೂರು, ಜಯಕರ್ನಾಟಕ ಪತ್ರಿಕೆಯ ಉಪಸಂಪಾದಕರಾದ ನಾಝಿಮ್ ಸಾಹೇಬ್, ಉದ್ಯಮಿಯಾದ ಇಕ್ಬಾಲ್ ಹಲ್ಯಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಲ್ಹಾಜಿ ಇಬ್ರಾಹಿಮ್ ಮುಸ್ಲಿಯಾರ್ ನೀರಾಜೆ, ರಮೇಶ್ ಉಪಾಧ್ಯಾಯ ಕಲ್ಲೇರಿ ರಾಮಕುಂಜ, ಸೇಸಪ್ಪ ರೈ ಕಲ್ಲೇರಿ ರಾಮಕುಂಜ, ಇಸ್ಮಾಯಿಲ್ ಹಾಜಿ ನೆಲ್ಯೋಟು, ಎಸ್.ಎ. ಅಬ್ದುಲ್ ಖಾದರ್ ಹಾಜಿ ಗೇರುಗಟ್ಟೆ ಹಾಗೂ ಟ್ರಸ್ಟ್ನ ಅಧ್ಯಕ್ಷರಾದ ಎಂ.ಹೆಚ್. ಮುಹಮ್ಮದ್ ಅಲಿ ಇವರನ್ನು ಸನ್ಮಾನಿಸಲಾಯಿತು.

  ಬಳಿಕ ಬಿ.ಎ. ಮುಹಮ್ಮದಾಲಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯು ನಡೆಯಿತು. ಮುಹಮ್ಮದ್ ಬಡ್ಡೂರು ಕವಿಗೋಷ್ಠಿಗೆ ಚಾಲನೆಯನ್ನು ನೀಡಿದರು. ಯು.ಎ. ಕಾಸೀಮ್ ಉಳ್ಳಾಲ್, ಶರೀಫ್ ನಿರ್ಮುಂಜೆ, ಪಿ.ಎಂ.ಬಶೀರ್ ಬಂಟ್ವಾಳ, ಸತ್ತಾರ್ ಗೂಡಿನಬಳಿ, ಸಮದ್ ಕಾಟಿಪಳ್ಳ, ಶಮೀಮ್ ಕುಟ್ಟಿಕ್ಕಳ, ಅಶ್ರಫ್ ಅಪೋಲೋ , ಹೆಚ್ ಆದಂ ಹೇಂತಾರ್, ಜಿ.ಎಂ. ಮುಸ್ತಫಾ ಉಪ್ಪಿನಂಗಡಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
 • ಬ್ಯಾರಿ ಅಕಾಡೆಮಿ ಮತ್ತು ಭವಿಷ್ಯದ ಹೆಜ್ಜೆಗಳು
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ೧೭-೩-೨೦೧೪ರಂದು ಅಕಾಡೆಮಿ ಕಚೇರಿಯಲ್ಲಿ “ಬ್ಯಾರಿ ಅಕಾಡೆಮಿ ಮತ್ತು ಭವಿಷ್ಯದ ಹೆಜ್ಜೆಗಳು “ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಿತು.

  ಅಕಾಡೆಮಿಯ ಅಧ್ಯಕ್ಷರಾದ ಬಿ.ಎ.ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಾದ ಬಿ.ಎಮ್.ಹನೀಫ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಎಸ್.ಎಮ್. ರಶೀದ್ ಹಾಜಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಪಕಾಧ್ಯಕ್ಷರಾದ ಎಂ.ಬಿ.ಅಬ್ದುಲ್ ರಹ್ಮಾನ್, ಹಾಗೂ ಕೇಂದ್ರ ಬ್ಯಾರಿ ಪರಿಷತ್ನ ಸ್ಥಾಫಕಾಧ್ಯಕ್ಷರಾದ ಅಬ್ದುಲ್ ರಹೀಮ್ ಟಿ.ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಬಿ.ಎಮ್. ಹನೀಫ್ ಹಾಗೂ ಎಸ್.ಎಮ್.ರಶೀದ್ ಹಾಜಿ ಇವರನ್ನು ಅಕಾಡೆಮಿಯ ಪರವಾಗಿ ಸನ್ಮಾನಿಸಲಾಯಿತು. ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಯೂಸುಫ್ ವಕ್ತಾರ್ ವಂದಿಸಿದರು. ಯು.ಹೆಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
 • ಅಧ್ಯಕ್ಷರು ಮತ್ತು ಸದಸ್ಯರ ಸಾರ್ವಜನಿಕ ಪದಗ್ರಹಣ ಸಮಾರಂಭದ ವರದಿ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ೪-೩-೨೦೧೪ರಂದು ಬಿ.ಸಿ.ರೋಡಿನ ರಂಗೋಲಿ ಸಭಾಭವನದಲ್ಲಿ “ಅಧ್ಯಕ್ಷರು ಮತ್ತು ಸದಸ್ಯರ ಸಾರ್ವಜನಿಕ ಪದಗ್ರಹಣ ಸಮಾರಂಭ” ನಡೆಯಿತು. ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖಾ ಸಚಿವರಾದ ಶ್ರೀ.ಬಿ.ರಮಾನಾಥ ರೈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ದ.ಕ ಜಿಲ್ಲಾ ಅಹಿಂದ ಜನಚಳವಳಿಯ ಅಧ್ಯಕ್ಷರಾದ ಶ್ರೀ ವಾಸುದೇವ ಬೋಳೂರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಪಕಾಧ್ಯಕ್ಷರಾದ ಎಂ.ಬಿ.ಅಬ್ದುಲ್ ರಹ್ಮಾನ್, ಬ್ಯಾರಿ ಪರಿಷತ್ತಿನ ಗೌರವಾಧ್ಯಕ್ಷರಾದ ಅಬ್ದುಲ್ ಮಜೀದ್ ಸೂರಲ್ಪಾಡಿ, ಬಿ.ಎಚ್.ಖಾದರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ್ ರೈ, ಬ್ಯಾರಿ ಕಲಾರಂಗದ ಅಧ್ಯಕ್ಷರಾದ ಅಝೀಝ್ ಬೈಕಂಪಾಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎಸ್. ಮೊಹಮ್ಮದ್ ಹಾಗೂ ಹಲವಾರು ಸಾಹಿತಿಗಳು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.

  ನೂತನ ಸಮಿತಿಯ ಸದಸ್ಯರಾದ ಹಮೀದ್ ಗೊಳ್ತಮಜಲು ಕಾರ್ಯಕ್ರಮ ನಿರೂಪಿಸಿ ಬದ್ರುದ್ದೀನ್ ಕೆ. ಮಾಣಿ ವಂದಿಸಿದರು.

  ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿ ಸರಕಾರದ ಆದೇಶ ಪ್ರತಿಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಹಸ್ತಾಂತರಿಸಿದರು.
 • ಜುಲೈ ೧೪, ೨೦೧೨ ರಂದು “ ಮಂಗಳೂರಿನಲ್ಲಿ “ಬ್ಯಾರಿ ಅಕಾಡೆಮಿಯ ಮುಂದಿನ ಹೆಜ್ಜೆಗಳು” ಸಂವಾದ ಕಾರ್ಯಕ್ರಮವನ್ನು ನಡೆಸಲಾಗಿದೆ.
 • ಆಗಸ್ಟ್ ೧೨, ೨೦೧೨ ರಂದು ಕುಂದಾಪುರದಲ್ಲಿ”ರಂಝಾನ್ ಸಾಹಿತ್ಯ ಸಂಜೆ ಮತ್ತು ಬಹುಭಾಷಾ ಕವಿಗೋಷ್ಠಿ” ಕಾರ್ಯಕ್ರಮವನ್ನು ನಡೆಸಲಾಗಿದೆ.
 • ಸೆಪ್ಟೆಂಬರ್ ೮, ೨೦೧೨ ರಂದು ಮಂಗಳೂರು ನಗರದ ಪುರಭವನದಲ್ಲಿ “ಪೆರ್ನಾಲ್ ಸಂದೋಲ” ಕಾರ್ಯಕ್ರಮವನ್ನು ನಡೆಸಲಾಗಿದೆ.
 • ಸೆಪ್ಟೆಂಬರ್ ೯ ೨೦೧೨ ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ “ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್” (ಬ್ಯಾರಿ ಜಾನಪದ ಜಾಥ) ಕಾರ್ಯಕ್ರಮವನ್ನು ನಡೆಸಲಾಗಿದೆ.
 • ಸೆಪ್ಟೆಂಬರ್ ೨೩, ೨೦೧೨ ರಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ (ಸುರತ್ಕಲ್)ದ ಹತ್ತು ಕಡೆಗಳಲ್ಲಿ “ ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್” (ಬ್ಯಾರಿ ಜಾನಪಥ ಜಾಥ) ಕಾರ್ಯಕ್ರಮವನ್ನು ನಡೆಸಲಾಗಿದೆ
 • ಅಕ್ಟೋಬರ್ ೧೪ ೨೦೧೨ ರಂದು ಮಂಗಳೂರು ವಿಧಾನಸಭಾ ಕ್ಷೇತ್ರ( ಉಳ್ಳಾಲ)ದ ಹತ್ತು ಕಡೆಗಳಲ್ಲಿ “ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್” (ಬ್ಯಾರಿ ಜಾನಪಥ ಜಾಥ) ಕಾರ್ಯಕ್ರಮವನ್ನು ನಡೆಸಲಾಗಿದೆ
 • ಅಕ್ಟೋಬರ್ ೨೮, ೨೦೧೨ ರಂದು ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ “ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್” (ಬ್ಯಾರಿ ಜಾನಪಥ ಜಾಥ) ಕಾರ್ಯಕ್ರಮವನ್ನು ನಡೆಸಲಾಗಿದೆ.
 • ನವೆಂಬರ್ ೪ ೨೦೧೨ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ “೨೦೧೧ರ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ” ಕಾರ್ಯಕ್ರಮವನ್ನು ನಡೆಸಲಾಗಿದೆ.
 • ಡಿಸೆಂಬರ್ ೨ ೨೦೧೨ ರಂದು ಪುತ್ತೂರಿನ ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯಲ್ಲಿ “ಬೆಲಿಯೆ ಪೆರ್ನಾಲ್ ಸಂದೋಲ ಕಲಾಸ್ಪರ್ದೆ” ಕಾರ್ಯಕ್ರಮವನ್ನು ನಡೆಸಲಾಗಿದೆ.
 • ಡಿಸೆಂಬರ್ ೩೦ ೨೦೧೨ ರಂದು ಮೈಸೂರಿನಲ್ಲಿ“ಬ್ಯಾರಿ ಸಾಹಿತ್ಯ ಸಾಂಸ್ಕೃತಿಕ ಸೌಹಾರ್ದ ಮೇಳ” ಕಾರ್ಯಕ್ರಮವನ್ನು ನಡೆಸಲಾಗಿದೆ.
 • ಡಿಸೆಂಬರ್ ೩೧ ೨೦೨೧ ರಂದು ಮೈಸೂರು ಜಿಲ್ಲೆಯ ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ “ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್” (ಬ್ಯಾರಿ ಜಾನಪದ ಜಾಥ) ಕಾರ್ಯಕ್ರಮವನ್ನು ನಡೆಸಲಾಗಿದೆ.
 • ಜನವರಿ ೧೨ ೨೦೧೨ ರಂದು ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ “ಬ್ಯಾರಿ ಸಾಹಿತ್ಯತ್ತ್ ಲ್ ಒರ್ಮಪ್ಪಾಡ್ ಪಿರ್ಸಪ್ಪಾಡ್” ಕಾರ್ಯಕ್ರಮವನ್ನು ನಡೆಸಲಾಗಿದೆ
 • ಜನವರಿ ೧೩ ೨೦೧೨ ರಂದು ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಹತ್ತು ಕಡೆಗಳಲ್ಲಿ”ಹಳ್ಳಿ-ಹಳ್ಳಿಗ್ ಬ್ಯಾರಿ ಸಂದಲ್” (ಬ್ಯಾರಿ ಜಾನಪಥ ಜಾಥ) ಕಾರ್ಯಕ್ರಮವನ್ನು ನಡೆಸಲಾಗಿದೆ.
 • ಪೆಬ್ರವರಿ ೧ ೨೦೧೩ ರಂದು ಗುಲ್ವಾಡಿಯ ಮಸೀದಿ ಮೈದಾನದಲ್ಲಿ “ಈದ್ ಮಿಲನ್ ಪ್ರತಿಭಾ ಸೌಹಾರ್ದ ಸಂದೇಶೋತ್ಸವ” ಕಾರ್ಯಕ್ರಮವನ್ನು ನಡೆಸಲಾಗಿದೆ
 • ಮಾರ್ಚ್ ೧೬, ೨೦೧೩ ರಂದು ಬಂಟ್ವಾಳದ ಹಯಾತುಲ್ ಇಸ್ಲಾಂ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆ ಗೂಡಿನ ಬಳಿಯಲ್ಲಿ “ರಾಜ್ಯ ಮಟ್ಟ ದ ದಫ್ ಹಾಗೂ ಸಾಂಸ್ಕೃತಿಕ ಉತ್ಸವ” ಕಾರ್ಯಕ್ರಮವನ್ನು ನಡೆಸಲಾಗಿದೆ
 • ಕರ್ನಾಟಕ ಸರಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಸಮಿತಿಗೆ ಅಧ್ಯಕ್ಷರಾಗಿ ಶ್ರೀ ರಹೀಂ ಉಚ್ಚಿಲ್ ಮಂಗಳೂರು ಇವರು ಆಯ್ಕೆಗೊಂಡಿರುತ್ತಾರೆ. ಸರ್ಕಾರಿ ಆದೇಶದ ಪ್ರತಿಯನ್ನು ನೂತನ ಅಧ್ಯಕ್ಷರಿಗೆ ನೀಡಿದ್ದು, ಸದರಿ ಆದೇಶದಂತೆ, ದಿನಾಂಕ ೬-೨-೨೦೧೨ರಂದು ಬೆಳಿಗ್ಗೆ ೧೧:೦೦ ಗಂಟೆಗೆ ನೂತನ ಅಧ್ಯಕ್ಷರ ಪದಗ್ರಹಣ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಅತ್ತಾವರ ಪ್ರಿಸಿಡಿಯಂ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಕಾಡೆಮಿಯ ಕಚೇರಿಯಲ್ಲಿ ನಡೆಸಲಾಯಿತು. ಪ್ರಾರಂಭದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ರವರಿಂದ ಅಧ್ಯಕ್ಷರಿಗೆ ಇಲಾಖೆಯ ಪರವಾಗಿ ಸ್ವಾಗತಿಸಿ, ಹೂಗುಚ್ಚ ನೀಡಲಾಗಿದೆ. ಈ ಸಮಾರಂಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಶ್ರೀ ಅನ್ವರ್ ಮಾಣಿಪ್ಪಾಡಿ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷರಾದ ಶ್ರೀ ಪದ್ಮನಾಭ ಕೊಟ್ಟಾರಿ, ನ್ಯಾಯವಾದಿ ಶ್ರೀ ಮೋನಪ್ಪ ಭಂಡಾರಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಉಸ್ಮಾನ್ ಹಾಜಿ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ನ ಸ್ಥಾಪಕಾಧ್ಯಕ್ಷ ಶ್ರೀ ಅಬ್ದುಲ್ ರಹೀಂ ಟೀಕೆ ಹಾಗೂ ಅಖಿಲ ಭಾರತ ಬ್ಯಾರಿ ಪರಿಷತ್ ನ ಅಧ್ಯಕ್ಷರಾದ ಶ್ರೀ ಅಬ್ದುಲ್ ಮಜೀದ್ ಸೂರಲ್ಪಾಡಿ ಇವರುಗಳ ಘನ ಉಪಸ್ಥಿತಿಯಲ್ಲಿ ಬ್ಯಾರಿ ಅಕಾಡೆಮಿಯ ಅಧ್ಯಕ್ಷರಾಗಿ ಶ್ರೀ ರಹೀಂ ಉಚ್ಚಿಲ್ ಅವರು ಅಧಿಕೃತವಾಗಿ ಬ್ಯಾರಿ ಅಕಾಡೆಮಿಯ ಅಧಿಕಾರ ಸ್ವೀಕರಿಸಿರುತ್ತಾರೆ. ಬಳಿಕ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಎಂ.ಬಿ. ಅಬ್ದುಲ್ ರಹ್ ಮಾನ್ ರವರು, ಗಣ್ಯರು ಹಾಗೂ ಅತಿಥಿಗಳು ನೂತನ ಅಧ್ಯಕ್ಷರನ್ನು ಹೂಗುಚ್ಚ ನೀಡಿ ಗೌರವಿಸಿ ಅಭಿನಂದಿಸಿದರು. ಮಾಜಿ ಸದಸ್ಯರಾದ ಶ್ರೀ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿ, ಶ್ರೀ ಪಿ. ಮುಹಮ್ಮದ್ ರವರು ವಂದಿಸಿದರು.
 • ಡಿಸೆಂಬರ್ 10 ಮತ್ತು 11ರ ‘ಬ್ಯಾರಿ ಸಮ್ಮೇಳನ’ದ ವರದಿ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಡಿಸೆಂಬರ್ 10 ಮತ್ತು 11ರಂದು ನಗರದ ಪುರಭವನದ ಬಿ.ಎಂ. ಇದಿನಬ್ಬ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಬ್ಯಾರಿ ಸಮ್ಮೇಳನ’ವು ಅದ್ದೂರಿಯಾಗಿ ನಡೆಯಿತು.

  ಉದ್ಟಾಟನಾ ಸಮಾರಂಭ : ಸಮ್ಮೇಳನವು ಬೆಳಿಗ್ಗೆ 9:00ರಿಂದ 10:30ಗಂಟೆಯವರೆಗೆ ನೋಂದಣಿ ಮತ್ತು ಉಪಾಹಾರದ ಬಳಿಕ ಉದ್ಘಾಟನಾ ಸಮಾರಂಭ ಜರುಗಿತು. ವೇದಿಕೆಯಲ್ಲಿದ್ದ ಅತಿಥಿಗಣ್ಯರನ್ನು ಬ್ಯಾರಿ ಸಂಸ್ಕೃತಿಯಂತೆ ಅತ್ತರು, ಪನ್ನೀರು ಸಿಂಪಡಿಸಿ, ಕಲ್ಲುಸಕ್ಕರೆ, ಒಣಖರ್ಜೂರ, ಬಾಳೆಹಣ್ಣು ಹಾಗೂ ಹಾಲು ನೀಡಿ ಸತ್ಕರಿಸಲಾಯಿತು. 10:30ಕ್ಕೆ ಶಿಕ್ಷಣ ಪ್ರೇಮಿ ಶ್ರೀ ಹರೇಕಳ ಹಾಜಬ್ಬರವರು ಅಕಾಡೆಮಿಯು ಪ್ರಕಟಿಸಿದ 5 ಗ್ರಂಥಗಳನ್ನು ಅನಾವರಣಗೊಳಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು `ನಾನು ಬ್ಯಾರಿ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವೆ. ಅಂತೆಯೇ ಸಮಾಜದಲ್ಲಿ ಶಿಕ್ಷಣ ಕೊರತೆ ಎದ್ದು ಕಾಣಿಸುವಷ್ಟು ಇರುವುದು ಬೇಸರ ತರಿಸಿದೆ. ಇದಕ್ಕೆ ನಾನೇ ಸಾಕ್ಷಿ. ಶಿಕ್ಷಣ ಸಿಗದ ನಾನು ಶಿಕ್ಷಣವನ್ನು ನಮ್ಮ ಮುಂದಿನ ಜನಾಂಗಕ್ಕಾದರೂ ಸಿಗಬೇಕು ಎಂದು ಪಣತೊಟ್ಟು ಶಾಲೆ ಆರಂಭಿಸಿದೆ. ಬ್ಯಾರಿ ಸಮುದಾಯ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಬೇಕು’ ಎಂದರು. ಬಿಡುಗಡೆಗೊಳಿಸಿದ ಪೆರಿಮೆ – ಸಂಶೋಧನಾ ಗ್ರಂಥ (ಸಂಪಾದಿತ), `ದಿ ಬ್ಯಾರೀಸ್ ಆಫ್ ತುಳುನಾಡು’ (ಪ್ರೊ. ಬಿ.ಎಂ. ಇಚ್ಲಂಗೋಡು) `ತುಳುನಾಡಿನ ಬ್ಯಾರಿಗಳು’ (ಅನುವಾದ : ಶ್ರೀ ತುಫೈಲ್ ಮುಹಮ್ಮದ್), `ದಿ ಬ್ಯಾರಿ ಲ್ಯಾಂಗ್ವೇಜ್’ (ಡಾ. ಸುಶೀಲಾ ಪಿ. ಉಪಾಧ್ಯಾಯ) ಹಾಗೂ `ಬ್ಯಾರಿ ಭಾಷೆ’ (ಅನುವಾದ : ಡಾ. ಸುಶೀಲಾ ಪಿ. ಉಪಾಧ್ಯಾಯ) ಗ್ರಂಥಗಳನ್ನು ಶ್ರೀ ಉಮರ್ ಟೀಕೆಯವರು ಪರಿಚಯಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

  ಮಾಜಿ ಶಿಕ್ಷಣ ಸಚಿವ ಶ್ರೀ ಬಿ.ಎ. ಮೊಹಿದಿನ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಆಹಾರಮೇಳವನ್ನು ಉದ್ಘಾಟಿಸಿದರು. ವಸ್ತು ಪ್ರದರ್ಶನ ಹಾಗೂ ಪುಸ್ತಕ ಮಳಿಗೆಗಳನ್ನು ಅತಿಥಿಗಳು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹಾಜಬ್ಬರವರಿಗೆ `ಅಕ್ಕರದ ಅವಧೂತ’ ಬಿರುದು ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಾಸಕ ಶ್ರೀ ಯು.ಟಿ. ಖಾದರ್, ಪ್ರೊ.ಬಿ.ಎಂ.ಇಚ್ಲಂಗೋಡು, ಡಾ.ಸುಶೀಲಾ ಪಿ. ಉಪಾಧ್ಯಾಯ ಹಾಗೂ ಶ್ರೀ ತುಫೈಲ್ ಮುಹಮ್ಮದ್ ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷ ಶ್ರೀ ಎಂ.ಬಿ. ಅಬ್ದುಲ್ ರಹ್ ಮಾನ್ ಸ್ವಾಗತ ಪ್ರಸ್ತಾವನೆಗೈದರು ಹಾಗೂ ರಿಜಿಸ್ಟ್ರಾರ್ ಶ್ರೀ ಉಮರಬ್ಬ ವಂದಿಸಿದರು.

  `ಸಂವಾದಗೋಷ್ಠಿ’ : ಶ್ರೀ ಉಮರ್ ಟೀಕೆಯವರ ಅಧ್ಯಕ್ಷತೆಯಲ್ಲಿ `ಬ್ಯಾರಿ ಬದುಕಿನ ತಲ್ಲಣಗಳು’ ಎಂಬ ವಿಷಯದಲ್ಲಿ ನಡೆದ ಸಂವಾದಗೋಷ್ಠಿಯಲ್ಲಿ ಶ್ರೀ ಸೈಯದ್ ಮುಹಮ್ಮದ್ ಬ್ಯಾರಿ, ಶ್ರೀ ಕೆ.ಎಂ. ಶರೀಫ್, ಶ್ರೀ ಮುಹಮ್ಮದ್ ಕುಂಞ, ಶ್ರೀ ಅಬ್ದುಲ್ ರವೂಫ್ ಪುತ್ತಿಗೆ, ಶ್ರೀ ರಫೀಉದ್ದೀನ್ ಕುದ್ರೋಳಿ, ಶ್ರೀ ಕೆ.ಎಂ. ಅಬೂಬಕರ್ ಸಿದ್ದೀಕ್, ಶ್ರೀಮತಿ ಝೊಹರಾ ಅಬ್ಬಾಸ್, ಶ್ರೀ ಮುಹಮ್ಮದ್ ಬ್ಯಾರಿ ಎಡಪದವು ಹಾಗೂ ಶ್ರೀಮತಿ ಖೈರುನ್ನೀಸಾ ಸೈಯದ್ ಪಾಲ್ಗೊಂಡಿದ್ದರು. ಶ್ರೀ ಅತ್ತೂರು ಚೈಯ್ಯಬ್ಬರವರು ಪ್ರಬಂಧ ಮಂಡಿಸಿದರು. ಸುವರ್ಣನ್ಯೂಸ್ 24x7 ಇದರ ಸಂಪಾದಕ ಹಾಗೂ ಅಕಾಡೆಮಿ ಸದಸ್ಯ ಶ್ರೀ ಹಮೀದ್ ಪಾಳ್ಯ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಬ್ಯಾರಿ ಆಂದೋಲನ, ಬ್ಯಾರಿ ಭಾಷೆ ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ಬ್ಯಾರಿ ಸಾಧಕರಾದ ಶ್ರೀ ಬಶೀರ್ ಬೈಕಂಪಾಡಿ, ಡಾ. ಅಖ್ತರ್ ಹುಸೈನ್, ಶ್ರೀ ಅಲ್ತಾಫ್ ಹುಸೈನ್, ಶ್ರೀ ಮನ್ಸೂರ್ ಹೆಜಮಾಡಿ ಬಹರೈನ್, ಶ್ರೀ ಎಸ್.ಎಂ.ಶರೀಫ್ ಮಡಿಕೇರಿ ಹಾಗೂ ಶ್ರೀ ಜಿ.ಎ.ಬಾವಾ ಇವರನ್ನು ಶಾಲು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

  `ಬ್ಯಾರಿ ಕವಿಗೋಷ್ಠಿ’ : ಸಂಜೆ 4:30ಕ್ಕೆ ಕವಯಿತ್ರಿ ಶ್ರೀಮತಿ ಆಯಿಷಾ ಯು.ಕೆ. ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ನಡೆದ `ಬ್ಯಾರಿ ಕವಿಗೋಷ್ಠಿ’ಯಲ್ಲಿ ಶ್ರೀ ಇಬ್ರಾಹೀಂ ತಣ್ಣೀರುಬಾವಿ, ಶ್ರೀ ಯು.ಎ. ಕಾಸೀಮ್ ಉಳ್ಳಾಲ, ಶ್ರೀ ಮುಹಮ್ಮದ್ ಶರೀಫ್ ನಿರ್ಮುಂಜೆ, ಶ್ರೀ ಹನೀಫ್ ಪರ್ಲಿಯಾ ದುಬೈ, ಶ್ರೀ ಬಶೀರ್ ಕಿನ್ಯಾ, ಶ್ರೀ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಶ್ರೀ ಜಲೀಲ್ ಮುಕ್ರಿ, ಶ್ರೀಮತಿ ಫಾತಿಮಾಬಿ ಜೋಕಟ್ಟೆ ಮತ್ತು ಶ್ರೀ ಅಬ್ದುಲ್ ಅಝೀಝ್ ಹಕ್ ಇವರು ಸ್ವರಚಿತ ಕವನಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ಅಬ್ದುಲ್ ಅಝೀಝ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.

  ಆನಂತರ ಸಂಜೆ 6:30ಕ್ಕೆ ಪ್ರದರ್ಶನಗೊಂಡ ಶ್ರೀ ಹುಸೈನ್ ಕಾಟಿಪಳ್ಳ ರಚಿಸಿ ನಿರ್ದೇಶಿಸಿದ `ಮಹಾಸಭೆ’ ಬ್ಯಾರಿ ಹಾಸ್ಯ ನಾಟಕ ಕಲಾಭಿಮಾನಿಗಳನ್ನು ರಂಜಿಸಿತು.
  `ಸಾಹಿತಿಗಳೊಂದಿಗೆ ಮುಖಾಮುಖಿ’ : ಡಿಸೆಂಬರ್ 11 ರಂದು ಬೆಳಗ್ಗೆ ದಫ್ ಕುಣಿತದ ಮೂಲಕ ಅತಿಥಿಗಳನ್ನು ವೇದಿಗೆ ಆಹ್ವಾನಿಸಿ, ಬ್ಯಾರಿ ಸಂಸ್ಕೃತಿಯಂತೆ ಸತ್ಕರಿಸಲಾಯಿತು. ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಮತಿ ವೈದೇಹಿಯವರ ಅಧ್ಯಕ್ಷತೆಯಲ್ಲಿ `ಸಾಹಿತಿಗಳೊಂದಿಗೆ ಮುಖಾಮುಖಿ’ ಕಾರ್ಯಕ್ರಮ ನಡೆಯಿತು. ವಿಶೇಷ ಅತಿಥಿಗಳಾಗಿ ಕೇಂದ್ರ ಕಾರ್ಪೋರೇಟ್ ಸಚಿವರಾದ ಡಾ. ಎಂ. ವೀರಪ್ಪ ಮೊಯ್ಲಿ ಉಪಸ್ಥಿತರಿದ್ದರು. ಖ್ಯಾತ ಸಾಹಿತಿ ಶ್ರೀ ಜಯಂತ ಕಾಯ್ಕಿಣಿ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಶ್ರೀ ಪಿ. ಶೇಷಾದ್ರಿಯವರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಅಕಾಡೆಮಿ ಸದಸ್ಯರಾದ ಶ್ರೀ ಬಿ.ಎ. ಷಂಶುದ್ದೀನ್ ಮಡಿಕೇರಿ ನಿರೂಪಣೆಗೈದರು.

  ಮಧ್ಯಾಹ್ನ 1:30ಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ಖ್ಯಾತಿಯ ಶ್ರೀ ಅಪ್ಪಗೆರೆ ತಿಮ್ಮರಾಜು ತಂಡದವರಿಂದ ಕನ್ನಡ ಜನಪದ ಹಾಡುಗಳು ಕಿಕ್ಕಿರಿದು ನೆರೆದ ಪ್ರೇಕ್ಷಕರನ್ನು ರಂಜಿಸಿತು.

  ಸಮಾರೋಪ ಸಮಾರಂಭ : ಸಂಜೆ 4:00 ಗಂಟೆಗೆ ಮಾಜಿ ಶಿಕ್ಷಣ ಸಚಿವ ಬಿ.ಎ. ಮೊಹಿದಿನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೊಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೆಮಾರ್ ಹಾಗೂ ಮಂಗಳೂರು ಶಾಸಕರಾದ ಶ್ರೀ ಯು.ಟಿ. ಖಾದರ್ ಭಾಗವಹಿಸಿದ್ದರು. ಅಕಾಡೆಮಿ ಅಧ್ಯಕ್ಷರು ಅತಿಥಿಗಳನ್ನು ಸ್ವಾತಿಸಿದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು, ದ.ಕ.ಜಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮರ್ ಕಲ್ಕೂರ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ, ಜೆ.ಡಿ.ಎಸ್. ರಾಸ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಹೈದರ್ ಪರ್ತಿಪ್ಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಲಾ ವೆಂ. ನಾಯ್ಕ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಚಂದ್ರಹಾಸ ರೈ ಬಿ. ಉಪಸ್ಥಿತರಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ವಂದಿಸಿದರು.

  ಸಂಜೆ 6:30ರಿಂದ ಬ್ಯಾರಿ, ತುಳು, ಕೊಂಕಣಿ, ಕೊಡವ, ಮಾಪಿಳ್ಳ ಸೌಹಾರ್ದ ಸಾಂಸ್ಕೃತಿಕ ಸಂಭ್ರಮದಲ್ಲಿ ವಿವಿಧ ಭಾಷೆಗಳ ಸೌಹಾರ್ದಯುತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

  ಸಮ್ಮೇಳನಕ್ಕೆ ಪೂರಕವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಹಾಗೂ ಸಾರ್ವಜನಿಕರಿಗಾಗಿ ಏರ್ಪಡಿಸಿದ್ದ ನಾಟಕ ಹಸ್ತಪ್ರತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು. ಜೊತೆಗೆ ಸಮ್ಮೇಳನದಲ್ಲಿ ಭಾಗವಹಿಸಿದ ಅತಿಥಿ ಗಣ್ಯರಿಗೆಲ್ಲರಿಗೂ ಅಕಾಡೆಮಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
 • ದ.ಕ. ಜಿಲ್ಲಾ ಮಟ್ಟದ ಬ್ಯಾರಿ ಭಾಷಿಗ " ಶಿಕ್ಷಕರ ಪ್ರತಿಭಾ ಸ್ಪರ್ಧೆ":-
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಮಾರ್ಚ್ 13 ಭಾನುವಾರದಂದು ನಗರದ ಹೊಟೇಲ್ ಪೆಂಟಗಾನ್ ಸಭಾಂಗಣದಲ್ಲಿ ದ.ಕ. ಜಿಲ್ಲಾ ಮಟ್ಟದ ಬ್ಯಾರಿ ಭಾಷಿಗ " ಶಿಕ್ಷಕರ ಪ್ರತಿಭಾ ಸ್ಪರ್ಧೆ" ಕಾರ್ಯಕ್ರಮವು ನಡೆಯಿತು.

  ಸ್ಪರ್ಧೆಯನ್ನು ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ.ಪಿ. ಸೂಫಿಯವರು ತೆಂಗಿನ ಸಸಿಗೆ ನೀಋ ಹಾಕುವ ಮೂಲಕ ವಿಶೇಷವಾಗಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಂ.ಬಿ. ಅಬ್ದುಲ್ ರಹ್ ಮಾನ್ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಉಮರಬ್ಬರವರು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಎನ್. ಗಂಗಾಧರ ಆಳ್ವ ಭಾಗವಹಿಸಿದ್ದರು. ಅಕಾಡೆಮಿಯ ಸದಸ್ಯರಾದ ಶ್ರೀ ಅಬ್ದುಲ್ ಅಝೀಝ್ ಬೈಕಂಪಾಡಿ ವಂದಿಸಿದರು. ಸ್ಪರ್ಧಾ ವಿಜೇತ ಶಿಕ್ಷಕರಿಗೆ ಬಹುಮಾನವಾಗಿ ನಗದು, ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಶಿಕ್ಷಕರಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.
 • ಬ್ಯಾರಿ ಭಾಷೆ - ಸಾಹಿತ್ಯ - ಸಂಸ್ಕೃತಿ - ಸಂವಾದ:-
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಮಾರ್ಚ್ 6 ಭಾನುವಾರದಂದು ನಗರದ ಹೊಟೇಲ್ ಶ್ರೀನಿವಾಸನಲ್ಲಿ ಏರ್ಪಡಿಸಿದ್ದ "ಬ್ಯಾರಿ ಭಾಷೆ ಸಾಹಿತ್ಯ ಸಂಸ್ಕೃತಿ - ಸಂವಾದ" ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

  ಸಂವಾದದಲ್ಲಿ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀ ಬಶೀರ್ ಬೈಕಂಪಾಡಿ, ಬಂಟ್ವಾಳ ತಾಲೂಕು ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಪಿ.ಎ. ರಹೀಂ, ಅಖಿಲ ಭಾರತ ಬ್ಯಾರಿ ಪರಿಷತ್ತಿನ ಶ್ರೀ ಬಿ.ಎ. ಮುಹಮ್ಮದ್ ಹನೀಫ್, ಬ್ಯಾರಿ ಕಲಾರಂಗದ ಅಧ್ಯಕ್ಷರಾದ ಶ್ರೀ ಅಬ್ದುಲ್ ಅಝೀಝ್ ಬೈಕಂಪಾಡಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಂ.ಬಿ. ಅಬ್ದುಲ್ ರಹ್ ಮಾನ್ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಉಮರಬ್ಬರವರು ಸ್ವಾಗತಿಸಿದರು.
 • ಕಮ್ಮಟಗಳು
 • ಬ್ಯಾರಿ ಸಾಹಿತ್ಯ ಕಮ್ಮಟ :-
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ಎರಡು ದಿನದ ಬ್ಯಾರಿ ಸಾಹಿತ್ಯ ಕಮ್ಮಟವನ್ನು ಎಪ್ರಿಲ್ 5 ಹಾಗೂ 6, 2011 ರಂದು ಬೆಳಗ್ಗೆ 10:00ರಿಂದ ಸಂಜೆ 4:00 ಗಂಟೆಯವರೆಗೆ ಸರಕಾರಿ ಪ್ರೌಢಶಾಲೆ, ಸಜಿಪನಡು ಇಲ್ಲಿ ಹಮ್ಮಿಕೊಂಡಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮುಹಮ್ಮದ್ ಕುಳಾಯಿ, ಅಬ್ದುಲ್ ರಝಾಕ್ ಅನಂತಾಡ್, ಬಿ.ಎಂ. ತುಂಬೆ ಹಾಗೂ ಮುಹಮ್ಮದ್ ಮಾರಿಪಳ್ಳರವರು ಕಮ್ಮಟವನ್ನು ನಡೆಸಿಕೊಟ್ಟರು. ಕಮ್ಮಟದಲ್ಲಿ ಕಥೆ ಬರೆಯುವುದು, ಕವನ ರಚಿಸುವುದು, ಚುಟುಕು ಕವನ ರಚಿಸುವ ಬಗ್ಗೆ ತರಬೇತಿಯನ್ನು ನೀಡಲಾಯಿತು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಬಿ. ತಮ್ಮಯ್ಯ ಕಮ್ಮಟವನ್ನು ಉದ್ಘಾಟಿಸಿದರು. ಕಮ್ಮಟವು ಪ್ರೌಢಶಾಲಾ 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದು, 75 ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. .
 • ಬ್ಯಾರಿ ಸಾಹಿತ್ಯ ಕಮ್ಮಟ :-
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ಒಂದು ದಿನದ ಬ್ಯಾರಿ ಸಾಹಿತ್ಯ ಕಮ್ಮಟವನ್ನು ಜನವರಿ 5, 2011 ರಂದು ಬೆಳಗ್ಗೆ 10:00ರಿಂದ ಸಂಜೆ 4:00 ಗಂಟೆಯವರೆಗೆ ಹಿರಾ ವಿಮೆನ್ಸ್ ಕಾಲೇಜು, ಬಬ್ಬುಕಟ್ಟೆಯಲ್ಲಿ ಹಮ್ಮಿಕೊಂಡಿತ್ತು.

  ಈ ಕಮ್ಮಟದಲ್ಲಿ ಹಳೆಯಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ಜ್ಯೋತಿ ಚೇಳ್ಯಾರು ಹಾಗೂ ಅನುಪಮಾ ಮಾಸಿಕದ ಸಂಪಾದಕ ಮಂಡಳಿಯ ಸದಸ್ಯೆಯಾದ ಶ್ರೀಮತಿ ರಹಿನಾ ತೊಕ್ಕೊಟ್ಟುರವರು ಕಥೆ ಹಾಗೂ ಕವನ ರಚಿಸುವ ಬಗ್ಗೆ ತರಬೇತಿಯನ್ನು ನೀಡಿದರು. ಕಮ್ಮಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಎಂಬಿ. ಅಬ್ದುಲ್ ರಹ್ ಮಾನ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಂತಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಅಧ್ಯಕ್ಷ ಕೆ.ಎಂ. ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಸದಸ್ಯರಾದ ಶ್ರೀ ಹಂಝ ಮಲಾರ್ ಸ್ವಾಗತಿಸಿ, ಮತ್ತೋರ್ವ ಸದಸ್ಯ ಪಿ. ಮುಹಮ್ಮದ್ ವಂದಿಸಿದರು.
 
ಇತ್ತೀಚಿನ ಪ್ರಕಟಣೆಗಳು
beary saahithya academy mangalore
beary book beary book
beary mangalore
beary saahithya academy mangalore
beary mangalore
ಬ್ಯಾರಿ ಚರಿತ್ರೆ
ಬ್ಯಾರಿಗಳು ತುಳುನಾಡು ಎಂದು ಹಿಂದೆ ಕರೆಯಲಾಗುತ್ತಿದ್ದ ಕರ್ನಾಟಕದ ಈಗಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಸವಾಗಿರುವ ಒಂದು ಮುಸ್ಲಿಮ್ ಜನಾಂಗ. ಅವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಒಂದು ಸಾಮಾಜಿಕ ಪಂಗಡ. ಬ್ಯಾರಿಗಳಿಗೆ ಕೊಂಕಣ ತೀರದ ನವಾಯತರು . ಇನ್ನೂ ಓದಿ »
beary saahithya academy mangalore
beary mangalore
ಗ್ಯಾಲರಿ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
beary saahithya academy mangalore
beary mangalore
ಬ್ಯಾರಿ ಸಾಹಿತ್ಯ ಅಕಾಡೆಮಿ ಚಟುವಟಿಕೆಗಳು
beary academy Activity ಪ್ರಶಸ್ತಿ ಪ್ರದಾನ beary academy Activity ಕವಿ ಸಮ್ಮೇಳನೆ
beary academy Activity ಛಾಯಚಿತ್ರಗಳ ಸಂಗ್ರಹ beary academy Activity ಹೊರನಾಡು ಕಾರ್ಯಕ್ರಮ
beary academy Activity ಸಾಂಸ್ಕೃತಿಕ ಕಾರ್ಯಕ್ರಮ beary academy Activity ಕಮ್ಮಟಗಳು
  ಇನ್ನೂ ಓದಿ »  
beary saahithya academy mangalore