ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
 

ಪ್ರಶಸ್ತಿಗಳು

beary sahithya academy

ಗೌರವ ಪ್ರಶಸ್ತಿ 2015ಕ್ಕೆ ಆಯ್ಕೆಯಾದವರು ಮತ್ತು ಪರಿಚಯ

ಬಿ.ಎಂ.ಹನೀಫ್ (ಬೆಳ್ಳಾಯರು ಮೊಹಮ್ಮದ್ ಹನೀಫ್) ಬೆಂಗಳೂರು (ಭಾಷೆ ಮತ್ತು ಸಾಹಿತ್ಯ ಕ್ಷೇತ್ರ)

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬೆಳ್ಳಾಯರು ಗ್ರಾಮದಲ್ಲಿ ದಿನಾಂಕ 12-12-1961ರಲ್ಲಿ ಜನಿಸಿದ ಇವರು ಮಂಗಳೂರಿನ ಸುರತ್ಕಲ್‍ನ ಗೋವಿಂದದಾಸ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು, ಮಂಗಳೂರಿನ ಎಸ್‍ಡಿಎಂ ಲಾ ಕಾಲೇಜಿನಲ್ಲಿ ಕಾನೂನು ಪದವಿ ಓದುತ್ತಿರುವಾಗಲೇ 1984ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟರ ನೇತೃತ್ವದ "ಮುಂಗಾರು' ದಿನಪತ್ರಿಕೆಯಲ್ಲಿ ಹಲವು ವರ್ಷ ಉಪ ಸಂಪಾದಕರಾಗಿ, ಹಿರಿಯ ಉಪಸಂಪಾದಕರಾಗಿ ಮತ್ತು ಸಹಾಯಕ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

1989ರಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ನಂತರ ವಿಜಾಪುರ ಜಿಲ್ಲೆಯ ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ವಿಜಾಪುರ, ಬಾಗಲಕೋಟೆ, ಧಾರವಾಡ, ಗುಲ್ಬರ್ಗಾಗಳಲ್ಲಿ ಓಡಾಟ ಪತ್ರಕರ್ತನಾಗಿ ಅನುಭವ ಪಡೆದಿದ್ದಾರೆ.

ಭಡ್ತಿ ಪಡೆದು ಹಿರಿಯ ಉಪಸಂಪಾದಕರಾಗಿ, ಪ್ರಜಾವಾಣಿಯಲ್ಲಿ ವಾಣಿಜ್ಯ ವಿಭಾಗದ ಸುದ್ದಿಗಳ ಮತ್ತು ವಾಣಿಜ್ಯ ಪುರವಣಿಯ ಮುಖ್ಯಸ್ಥರಾಗಿ ಮೈಸೂರಿಗೆ ಪ್ರಜಾವಾಣಿ ಬ್ಯೂರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಆನಂತರ ಬೆಂಗಳೂರಿಗೆ ವರ್ಗಾವಣೆಯಾಗಿ ಸಹಾಯಕ ಸಂಪಾದಕರಾಗಿ ಭಡ್ತಿ ಪಡೆದು, ಬೆಂಗಳೂರಿನಲ್ಲಿ ಸುಧಾ ವಾರಪತ್ರಿಕೆಯ ಮುಖ್ಯಸ್ಥರಾಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಈ ಮಧ್ಯೆ ಜರ್ಮನಿಯ ಇಂಟರ್‍ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಜರ್ನಲಿಸಂ ನಿಂದ ವಾಣಿಜ್ಯ ಪತ್ರಿಕೋದ್ಯಮದಲ್ಲಿ ವಿಶೇಷ ಕೋರ್ಸ್ ಮಾಡಿದ್ದಾರೆ. ಇವರು ಕಥೆಗಾರ ಮತ್ತು ಕವಿಯಾಗಿಯೂ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರು. ಇವರ ಹಲವಾರು ಕವಿತೆಗಳು, ಕಥೆಗಳು ಪ್ರಜಾವಾಣಿ ಮತ್ತು ಮಯೂರ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಅನನ್ಯ ಸಮಾಜವಾದಿ ಲೋಹಿಯಾ (ಲೋಹಿಯಾ ಜೀವನ ಕುರಿತು ಪುಸ್ತಕ), ಇತಿಹಾಸ ಮತ್ತು ಇಸ್ಲಾಂ (ಎಂ.ಎನ್.ರಾಯ್ ಅವರ ಆಂಗ್ಲ ಪುಸ್ತಕದ ಕನ್ನಡ ಅನುವಾದ), ಕತ್ತಲೆಗೆ ಯಾವ ಬಣ್ಣ(ಕವನ ಸಂಕಲನ), ಮಾತೇ ಮಾತು (ಸುಧಾ ಪತ್ರಿಕೆಯಲ್ಲಿ ಪ್ರಕಟವಾದ, ಕನ್ನಡದ ಪ್ರಮುಖ ಸಾಹಿತಿಗಳ ಸಂದರ್ಶನಗಳ ಸಂಕಲನ), ಬಣ್ಣದ ಬುಗುರಿ, ಸಜ್ಜನ ರಾಜಕಾರಣಿ ಎಸ್.ಎಂ.ಯಾಹ್ಯಾ (ವಿಧಾನ ಮಂಡಲ ಗ್ರಂಥಾಲಯಕ್ಕೆ ಬರೆದ ಅಧ್ಯಯನ ಪುಸ್ತಕ), ಕೆಂಪರಾಜ ಅರಸು (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಟಿಸಿದ ಪುಸ್ತಕ)

ಕನಸು ಕನ್ನಡಿ (ಪ್ರಜಾವಾಣಿ ಸಿನಿಮಾ ಪುರವಣಿಯಲ್ಲಿ ಪ್ರಕಟವಾದ ಅಂಕಣಗಳ ಸಂಕಲನ), ಕೊಲಾಝ್ (ಕಥೆ, ಕವಿತೆ, ಪ್ರವಾಸ ಕಥನ, ಸಂದರ್ಶನ, ವಿಡಂಬನೆಗಳ ಸಂಕಲನ), ಮೈನಾರಿಟಿ ಕಾಂಪ್ಲೆಕ್ಸ್ (ಮುಸ್ಲಿಮರ ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ ತಲ್ಲಣಗಳ ಕುರಿತು ಬರಹಗಳ ಸಂಕಲನ), ಮಾಂಜಿ ರವಾ ಫ್ರೈ (ಕಥಾ ಸಂಕಲನ) ಮುಂತಾದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

“ಬ್ಯಾರಿ-ಕನ್ನಡ-ಇಂಗ್ಲಿಷ್” ಶಬ್ದಕೋಶ ಇದರ ಸಲಹಾ ಮಂಡಳಿ ಸದಸ್ಯರಾಗಿ ದುಡಿಯುತ್ತಿದ್ದು ಮೈಕಾಲ ಎನ್ನುವ ಅಹ್ಮದ್ ನೂರೀ ಅವರ ಬ್ಯಾರಿಗಳ ಕುರಿತ ಸಂಶೋಧನಾ ಗ್ರಂಥದ ಮುದ್ರಣ, ನವರಸ ನಗು (ನವರಸಪುರ ಉತ್ಸವದ ಅಂಗವಾಗಿ ರಾಜ್ಯ ಮಟ್ಟದ ಹಾಸ್ಯ ಕವಿಗೋಷ್ಠಿಯ ಸಂಕಲನ), ನವರಸ ಕಾವ್ಯ (ನವರಸಪುರ ಉತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯ ಸಂಕಲನ), ಮುತ್ತುಮಾಲೆ (ಬ್ಯಾರಿ ಭಾಷೆಯ ನುಡಿಮುತ್ತುಗಳ ಸಂಗ್ರಹ) ಇವುಗಳು ಇವರ ಸಂಪಾದಿತ ಕೃತಿಗಳು.

ರಾಜ್ಯದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ, ಬೆಂಗಳೂರಿನಲ್ಲಿರುವ ಬ್ಯಾರೀಸ್ ವೆಲ್‍ಫೇರ್ ಅಸೋಸಿಯೇಶನ್‍ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಳೆದ 20 ವರ್ಷಗಳಿಂದ ಕೆಲಸ, ಈ ಸಂಸ್ಥೆಯ ಬ್ಯಾರಿ ಸಮುದಾಯದಲ್ಲಿ ಶಿಕ್ಷಣ ಪ್ರಸಾರಕ್ಕೆ ಒತ್ತುಕೊಟ್ಟು ಹಲವು ಯೋಜನೆಗಳ ಜಾರಿಗೆ, ಬೆಂಗಳೂರು ದೂರದರ್ಶನದಲ್ಲಿ ಮೂರು ವರ್ಷಗಳ ಕಾಲ ಪ್ರದರ್ಶನವಾಗುವ ಸಿನಿಮಾ ಸೆನ್ಸಾರ್ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಎರಡು ಬಾರಿ ಕೆಲಸ ಮಾಡಿದ್ದಾರೆ.

ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪತ್ರಕರ್ತರಾಗಿ, ಫ್ರಾನ್ಸ್, ದುಬೈ, ಮಲೇಶಿಯಾ ಮತ್ತು ಹಾಂಕಾಂಗ್‍ಗೆ ಪತ್ರಕರ್ತರಾಗಿ ಪ್ರವಾಸ ಮಾಡಿದ್ದಾರೆ.
ಕನಕ ಅಧ್ಯಯನ ಕೇಂದ್ರ ಹೊರತರುತ್ತಿರುವ ಬ್ಯಾರಿ ಭಾಷೆಯಲ್ಲಿ ‘ಕನಕದಾಸ ಜೀವನ ಚರಿತ್ರೆ’ ಪುಸ್ತಕದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾರಿ ಟೈಮ್ಸ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬ್ಯಾರಿ ಸಾಕ್ಷ್ಯಚಿತ್ರದ ನಿರ್ದೇಶನ ಮಾಡಿರುತ್ತಾರೆ. ಹಾಗೂ ಸಂತ-ಕನಕದಾಸರ ಜೀವನ-ಕಾವ್ಯ-ದರ್ಶನ ಬ್ಯಾರಿ ಭಾಷೆಗೆ ಅನುವಾದಿಸಿದ್ದಾರೆ.

ಪ್ರಶಸ್ತಿಗಳು:

ಬೆಂಗಳೂರು ತುಳು ಕೂಟದಿಂದ ತೌಳವಶ್ರೀ ಪ್ರಶಸ್ತಿ, ಗದಗದ ಡಂಬಳ ಸ್ವಾಮೀಜಿಯವರ ನೇತೃತ್ವದ ಸಾಂಸ್ಕøತಿಕ ಪ್ರತಿಷ್ಠಾನದಿಂದ ರಾಜ್ಯ ಮಟ್ಟದ "ಮಾಧ್ಯಮ ಮಂದಾರ" ಪ್ರಶಸ್ತಿ, ಬೆಂಗಳೂರಿನ ಕರಾವಳಿ ಒಕ್ಕೂಟದಿಂದ- ಕರಾವಳಿ ಸಿರಿ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ 2013ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಆಸಕ್ತಿಯ ವಿಷಯಗಳು

ಕನ್ನಡ ಭಾಷಾ ಚಳವಳಿ * ಕನ್ನಡ ಸಿನಿಮಾ * ವಿವಿಧ ಧರ್ಮ ಮತ್ತು ಸಂಸ್ಕøತಿಗಳ ಅಧ್ಯಯನ.
 

ಮಹಮ್ಮದ್ ಕೆ. ಮಠ (ಎಮ್.ಕೆ. ಮಠ) ಉಪ್ಪಿನಂಗಡಿ (ಕಲಾಕ್ಷೇತ್ರ)

ಕಳೆದ 16 ವರುಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ಸಂಭಾಷಣೆಕಾರ, ಕತೆಗಾರನಾಗಿ ದುಡಿಯುತ್ತಿರುವ ಇವರು 14 ವರುಷಗಳಿಂದ ಕನ್ನಡ ಚಿತ್ರಗಂಗದ ಹೆಸರಾಂತ ನಿರ್ದೇಶಕರಾದ ಟಿ.ಎಸ್. ಗಂಗಾಧರ್‍ರವರ ಎಲ್ಲಾ ಕಿರುತೆರೆ ಧಾರಾವಾಹಿಗೆ ಸಂಚಿಕೆ ನಿರ್ದೇಶಕನಾಗಿದ್ದು, ಅವರ ನಿರ್ದೇಶನದ ಚಲನ ಚಿತ್ರಗಳಿಗೆ ಸಹ ನಿರ್ದೇಶಕ ಹಾಗೂ ಸಂಭಾಷಣೆಗಾರನಾಗಿ ದುಡಿಯುತ್ತಿದ್ದರು.

ಕನ್ನಡ, ತುಳು, ತಮಿಳು ಚಿತ್ರದಲ್ಲಿ ಅಭಿನಯಿಸಿದ್ದಲ್ಲದೆ ಗಗ್ಗರ ಎಂಬ ತುಳು ಚಿತ್ರದ ಅಭಿನಯಕ್ಕಾಗಿ 2008-09ರ ಸಾಲಿನಲ್ಲಿ ಕರ್ನಾಟಕ ಸರಕಾರದ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದರು.

ಕನ್ನಡದಲ್ಲಿ ಹಲವು ಕತೆಗಳನ್ನು ಬರೆದಿದ್ದು “ಎಲ್ಲಾ ಮರ್ತಿದೀಯ”, “ಮಾನವ್” ಎಂಬ ಎರಡು ಕಥಾ ಸಂಕಲನಗಳು ಪ್ರಕಟಗೊಂಡಿದೆ. ‘ಪಾಸಿಡೊ ಬಲ್ಲಿ’ ಬ್ಯಾರಿ ಕರ್ನಾಟಕದಲ್ಲಿ ನಿರ್ದೇಶನ ಮತ್ತು ಅಭಿನಯ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಮೊಟ್ಟ ಮೊದಲ ತುಳು ಹಾಸ್ಯ ಧಾರಾವಾಹಿ “ಗೊತ್ತಾನಗ ಪೊರ್ತಾಂಡ್”ಗೆ ಸಂಭಾಷಣೆ ಬರೆದು ನಿರ್ದೇಶಿಸಿದ ಹಿರಿಮೆ ಇವರದು. ಪ್ರಸ್ತುತ ಇವರ ನಿರ್ದೇಶನದ ತುಳು ಧಾರಾವಾಹಿಯೊಂದು “ನಮ್ಮ ಟಿವಿ” ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. “ಮದಿಪು” ಎಂಬ ಕಲಾತ್ಮಕ ಚಿತ್ರದಲ್ಲಿ ನಟಿಸುತ್ತಿದ್ದರಲ್ಲದೆ “ನಂಡೆ ಎಲೆವುಲು” ಎಂಬ ಬ್ಯಾರಿ ಕಥಾ ಸಂಕಲನವನ್ನು ಹೊರತರುವ ತಯಾರಿಯಲ್ಲಿದ್ದಾರೆ.

ಜನುಮದಾತ, ಠಪೋರಿ, ಸಿಂಗಾರವ್ವ, ಚಿಗುರಿನ ಕನಸು, ಕಲ್ಲರಳಿ ಹೂವಾಗಿ, ನಂ ಯಜಮಾನ್ರು, ಗಗ್ಗರ(ತುಳು), ಎನ್.ವಯಿ ತನಿವಯಿ(ತಮಿಳು), ವಸುಂದರ, ಗಜಕೇಸರಿ, ಮಿ&ಮಿ ರಾಮಚಾರಿ, ಮದಿಮೆ(ತುಳು), ವಾರಿಯರ್, ಡೇಂಜರ್ ಝೋನ್, ಹಾವಳಿ, ಮದಿಪು(ತುಳು), ಹರೇರಾಮ ಹರೇಕೃಷ್ಣ, ಟೈಗರ್, ಬದಲಾವಣೆ, ಓ ನನ್ನ ಬೆಳಕೆ, ಸಂಕ್ರಾಂತಿ, ಗೆಳತಿ, ಜೀವನ್ಮುಖಿ, ದೂರ ತೀರ ಯನ, ಮಹಾಮಾಯಿ, ಅಪ್ಪ, ನೆಲ-ಮುಗಿಲು, ಆ ಊರು-ಈ ಊರು, ಹೊಸ ಬೆಳಕು, ಗೊತ್ತಾನಗ ಪೊರ್ತಾಂಡ್(ತುಳು), ಕೆಳದಿ ಚೆನ್ನಮ್ಮ, ಕ್ಲೀನ್ ಕೃಷ್ಣಪ್ಪ(ತುಳು) ಮತ್ತು ನೈಸ್ ನಾರಾಯಾಣಿ(ತುಳು).

ಈ ಮೇಲಿನ ಚಲನಚಿತ್ರಗಳು ಮತ್ತು ಧಾರವಾಹಿಗಳಲ್ಲಿ ಸಂಭಾಷಣೆ, ಸಹ-ನಿರ್ದೇಶನ, ನಿರ್ದೇಶನ, ನಟರಾಗಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೇ ‘ನಂಡೆ ಎಲೊವುಲು’ ಬ್ಯಾರಿ ಕಥಾಸಂಕಲನ ಮತ್ತು “ಬ್ಯಾರಿ ಫಿಲ್ಮ್” ಸದ್ಯದಲ್ಲೇ ತೆರೆ ಕಾಣಲಿದೆ.

 

ಮೊಹಮ್ಮದ್ ಅಲಿ ಉಚ್ಚಿಲ್ ಅಬುಧಾಬಿ (ಸಂಸ್ಕೃತಿ ಮತ್ತು ಸಂಘಟನೆ)

ದಿನಾಂಕ 1-6-1957ರಲ್ಲಿ ಜನಿಸಿದ ಇವರು ಪ್ರಸ್ತುತ ಬ್ಯಾರೀಸ್ ವೆಲ್‍ಫೇರ್ ಫೋರಂ ಅಬುಧಾಬಿ, ಯು.ಎ.ಇ. ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರಾವಳಿ ಕರ್ನಾಟಕ ಮುಸ್ಲಿಮ್ ಸಮುದಾಯದ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದನೆ, ವರದಕ್ಷಿಣೆ ನಿರ್ಮೂಲನೆ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸುಮಾರು 100 ಶೌಚಾಲಯಗಳ ನಿರ್ಮಾಣ ಹಾಗೂ ಸಮುದಾಯದ ಅರ್ಹ ಕುಟುಂಬದ ಹೆಣ್ಮಕ್ಕಳ ಮದುವೆಗೆ ಪ್ರೋತ್ಸಾಹ ಮುಂತಾದ ಯೋಜನೆಗಳು. ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸವಲತ್ತು.

2008ನೇ ಸಾಲಿನಲ್ಲಿ 12 ಜೋಡಿಗಳ ಸಾಮೂಹಿಕ ವಿವಾಹ, 2009ನೇ ಸಾಲಿನಲ್ಲಿ 16 ಜೋಡಿಗಳ ಸಾಮೂಹಿಕ ವಿವಾಹ, 2011ನೇ ಸಾಲಿನಲ್ಲಿ 16 ಜೋಡಿಗಳ ಸಾಮೂಹಿಕ ವಿವಾಹ, 2012ನೇ ಸಾಲಿನಲ್ಲಿ 16 ಜೋಡಿಗಳ ಸಾಮೂಹಿಕ ವಿವಾಹ, 2014ನೇ ಸಾಲಿನಲ್ಲಿ 25 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ.

ಅಂಗವಿಕಲರಿಗೆ ಗಾಲಿಕುರ್ಚಿ ಮತ್ತು ಕೃತಕ ಅವಯವಗಳನ್ನು ನೀಡುವ ಯೋಜನೆ ಮುಂತಾದವುಗಳನ್ನು ಇವರ ಅಧ್ಯಕ್ಷತೆಯಲ್ಲಿ ನಡೆಸಿರುತ್ತಾರೆ.

ಗಲ್ಫ್ ರಾಷ್ಟ್ರದಲ್ಲಿ ‘ಬ್ಯಾರಿ ವೆಲ್ಫೇರ್ ಎಸೋಸಿಯೇಷನ್’ ಸ್ಥಾಪಿಸಿ ಬ್ಯಾರಿ ಭಾಷೆಯ ಅಭಿವೃದ್ದಿಗೆ ಸಂಬಂಧಿಸಿ ಬೇರೆ ಬೇರೆ ಕಡೆಗಳಲ್ಲಿ ಬಾಷಾ ಕಾರ್ಯಕ್ರಮಗಳನ್ನು ಆಯೋಜಿಸುವುದು. ವಿದೇಶದಲ್ಲಿರುವ ಬ್ಯಾರಿ ಭಾಷಿಗರನ್ನು ಒಟ್ಟು ಸೇರಿಸಿ ಬ್ಯಾರಿ ಸಂಸ್ಕøತಿಗೆ ಸಂಬಂಧಿಸಿದ ಕಾರ್ಯಕ್ರಮಗಳು, ಬ್ಯಾರಿ ಭಾಷೆಗೆ ಸಂಬಂಧಿಸಿದ ವಿಚಾರ ವಿನಿಮಯಗಳು ಅಲ್ಲದೇ ಬ್ಯಾರಿ ಭಾಷೆ ಸಾಹಿತ್ಯ ಸಂಸ್ಕøತಿಯ ಸಂಘಟನೆಗಾಗಿ ಕಳೆದ ಹಲವಾರು ವರ್ಷಗಳಿಂದ ಸಂಘಟನಾತ್ಮಕ ಕಾರ್ಯಗಳಿಂದ ಎಲ್ಲದ ಜನಮನವನ್ನು ಗೆದ್ದಿರುತ್ತಾರೆ.

 

ಡಾ| ವಹಾಬ್ ದೊಡ್ಡಮನೆ ಸ್ಮಾರಕ ಅಧ್ಯಯನ ಪ್ರಶಸ್ತಿ

ಯಾಕುಬ್ ಖಾದರ್ ಗುಲ್ವಾಡಿ

ದಿನಾಂಕ 18-05-1978ರಲ್ಲಿ ಜನಿಸಿದ ಇವರು ಕರ್ನಾಟಕ ಸರಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯನಾಗಿ, ರಾಜ್ಯ ಸರಕಾರದ ಚಲನಚಿತ್ರ ಆಯ್ಕೆ ಸಲಹಾ ಸಮಿತಿಯ ಸದಸ್ಯನಾಗಿ, ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಪ್ರಧಾನ ಕಾರ್ಯ ನಿರ್ವಾಹಕ ನಿರ್ದೇಶಕನಾಗಿ, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ಸಲಹಾ ಮಂಡಳಿಯ ನಿರ್ದೇಶಕನಾಗಿ, 12 ದೇಶಗಳಲ್ಲಿ ಕನ್ನಡ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ಹೊರದೇಶಗಳಲ್ಲಿ ಕನ್ನಡ ಕಟ್ಟುವ ಕೆಲಸಗಾರನಾಗಿ ತ್ರೀ-ಸ್ಟಾರ್ ಕ್ರಿಕೆಟ್ ಕ್ಲಬ್ ಇದರ ಅಧ್ಯಕ್ಷನಾಗಿ, ಸಿರಾಜುಲ್ ಹುದಾ ಮುಸ್ಲಿಂ ಯಂಗ್‍ಮೆನ್ಸ್ ಅಸೋಸಿಯೇಶನ್ ಇದರ ಉಪಾಧ್ಯಾಕ್ಷನಾಗಿ, ಗುಲ್ವಾಡಿ ವೆಂಕಟರಾವ್ ಸ್ಮಾರಕ ಸಾರ್ವಜನಿಕ ಗ್ರಂಥಾಲಯದ ಪ್ರದಾನ ಕಾರ್ಯದರ್ಶಿಯಾಗಿ, ಕರಾವಳಿ ಕ್ರಿಕೆಟ್ ಕ್ಲಿನಿಕ್ ಮಂಗಳೂರು ಇದರ ಕಾರ್ಯದರ್ಶಿಯಾಗಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ ಇದರ ಅಜೀವ ಸದಸ್ಯರಾಗಿ; ಸಹಮತ, ನಡುಮನೆ, ಸಧ್ಬಾವನಾ ಈ ಸಂಘಟನೆಗಳ ಸದಸ್ಯರಾಗಿ, ಹೃದಯವಾಹಿನಿ ಪತ್ರಿಕೆ ಮಂಗಳೂರು ಇದರ ಗೌರವ ಸಂಪಾದಕರಾಗಿ, ಕಳೆದ ಹಲವಾರು ವರ್ಷಳಿಂದ ಬರವಣಿಗೆ, ಸಮಾಜ ಸೇವೆ, ಕೋಮು ಸೌಹಾರ್ದತೆ, ಅಭಿನಯ, ಛಾಯಾಚಿತ್ರ, ಕ್ರಿಕೆಟ್, ರಕ್ತದಾನ, ಪ್ರವಾಸ ಹಾಗೂ ಪ್ರಾಚೀನ ಕಾಲದ ವಸ್ತು ಹಾಗೂ ನಾಣ್ಯ, ವಿದೇಶಿ ನಾಣ್ಯ ಹಾಗೂ ಅಪರೂಪದ ನೋಟುಗಳ ಸಂಗ್ರಹಕಾರನಾಗಿ ಸೇವೆ ಸಲ್ಲಿಸಿದ್ದೇನೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಬುದಾಬಿ ಕನ್ನಡ ಸಂಘದಿಂದ ಅಂತರಾಷ್ಟ್ರೀಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯಿಂದ ರಾಜ್ಯಮಟ್ಟದ ಸಧ್ಬಾವನಾ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾಂಗ್ರೆಸ್ ಸೇವಾದಳದ ಕಾರ್ಯಕರ್ತನಾಗಿ ಅಂಡಮಾನ್ ಮತ್ತು ತಮಿಳುನಾಡಿನಲ್ಲಿ ತ್ಸುನಾಮಿ ಸಂತೃಸ್ತರ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಕೇಂದ್ರ ಸರಕಾರದ ವತಿಯಿಂದ ಪ್ರಶಸ್ತಿ, ತಮಿಳುನಾಡು ರೆಡ್‍ಕ್ರಾಸ್ ಸಂಸ್ಥೆಯಿಂದ ಪ್ರಶಸ್ತಿ, ಭಾರತ್ ಸೇವಾ ದಳ ರಾಜ್ಯ ಸಂಘಟನೆಯಿಂದ ಪ್ರಶಸ್ತಿ, ಅಂಡಮಾನ್ ಮತ್ತು ತ್ಸುನಾಮಿ ಛಾಯಾಚಿತ್ರ ಪ್ರದರ್ಶನಕ್ಕೆ ಸಿಂಗಾಪುರ ಕನ್ನಡ ಸಂಘದಿಂದ ಪ್ರಶಸ್ತಿ, ಮಿನಿಯೇಟರ್ ಕೌಶಲ್ಯಕ್ಕೆ ದ.ಕ.ಜಿಲ್ಲಾಧಿಕಾರಿಯವರಿಂದ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಸನ್ಮಾನ ಮತ್ತು ಸೌತ್ ಕೆನರಾ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ ಕುಂದಾವರ ವಲಯದಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸನ್ಮಾನ ಮುಂತಾದ ಪ್ರಶಸ್ತಿಗಳು ದೊರಕಿವೆ.

ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕನ್ನಡದ ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರ ಹೆಸರಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ್ದು, ನಾಡಿನ ಹಿರಿಯ ಸಾಹಿತಿ, ಸಾಂಸ್ಕೃತಿಕ ರಾಯಭಾರಿ, ಸಂಘಟಕರನ್ನು ಗುರುತಿಸಿ, ಗೌರವಿಸುವ ಕೆಲಸ, ಅಲ್ಲದೇ ಕನ್ನಡ ಮತ್ತು ಬ್ಯಾರಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಹೆಚ್ಚು ಒಲವುಳ್ಳವರಾಗಿದ್ದಾರೆ. ಕನ್ನಡ ಮತ್ತು ಬ್ಯಾರಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಕುರಿತಂತೆ ಅನೇಕ ಚರ್ಚೆ ಮತ್ತು ದೇಶ-ವಿದೇಶಗಳಾದ್ಯಂತ ಅನೇಕ ಕಾರ್ಯಕ್ರಮ, ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.

ಶ್ರೀಲಂಕಾ’ ಒಂದು ಸುಂದರ ದ್ವೀಪ ರಾಷ್ಟ್ರ, ‘ಅಂಡಮಾನ್’ ಮತ್ತು ತ್ಸುನಾಮಿ’, ‘ನನ್ನ ಫಾರಿನ್ ಟೂರಿಂಗ್ ಟಾಕೀಸ್’ ಮುಂತಾದÀ ಅಧ್ಯಯನ ಕೃತಿಗಳನ್ನು ಬರೆದಿರುತ್ತಾರೆ. ದೇಶ ವಿದೇಶಗಳಿಗೆ ಪ್ರವಾಸ ಮಾಡಿ ಸಂಸ್ಕøತಿ, ಸಾಹಿತ್ಯ ಮುಂತಾದ ಕ್ಷೇತ್ರಗಳ ಅಭಿವೃದ್ದಿಯ ಬಗ್ಗೆ ಅಧ್ಯಯನವನ್ನು ಮಾಡಿರುವ ಕಾರಣ ಹಲವಾರು ಪ್ರಶಸ್ತಿ, ಬಿರುದುಗಳಿಗೆ ಭಾಜನರಾಗಿರುತ್ತಾರೆ.

 

೨೦೧೨-೧೩ ಮತ್ತು ೨೦೧೩-೧೪ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುರಸ್ಕಾರ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಸಹಯೋಗದೊಂದಿಗೆ ದಿನಾಂಕ ೧೦-೧-೨೦೧೫ರಂದು ಒಕ್ಕಲಿಗರ ಸಭಾಭವನ ಚಿಕ್ಕಮಗಳೂರಿನಲ್ಲಿ “ಗೌರವ ಪ್ರಶಸ್ತಿ ೨೦೧೪-ಪುರಸ್ಕಾರ ಪ್ರಧಾನ ಮತ್ತು ಬ್ಯಾರಿ ಭಾಷಾ ಸಮ್ಮೇಳನ” ಕಾರ್ಯಕ್ರಮವು ನಡೆಯಿತು.

ಬೆಳಿಗ್ಗೆ ೧೦ ಗಂಟೆಗೆ ನಡೆದ ಬ್ಯಾರಿ ಭಾಷಾ ಸಮ್ಮೇಳನವನ್ನು ಮಾಜಿ ಉನ್ನತ ಶಿಕ್ಷಣ ಸಚಿವರಾದ ಬಿ.ಎ. ಮೊಹಿದಿನ್ ಉದ್ಟಾಟಿಸಿದರು. ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಕೆ. ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ, ಚಿಕ್ಕಮಗಳೂರು ಬ್ಲಾಕ್ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಬಿ.ಎಸ್. ಮೊಹಮ್ಮದ್, ಉದ್ಯಮಿಯಾದ ಅಕ್ರಮ್ ಹಾಜಿ, ಮೂಡಿಗೆರೆ ಬ್ಲಾಕ್ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಸಿ.ಕೆ. ಇಬ್ರಾಹಿಮ್, ತರೀಕೆರೆ ಬ್ಲಾಕ್ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಹೆಚ್.ಯು. ಫಾರೂಕ್, ಕೊಪ್ಪ ಬ್ಲಾಕ್ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಮೊಹಮ್ಮದ್ ಬದ್ರಿಯಾ, ಎನ್.ಆರ್. ಪುರ ಬ್ಲಾಕ್ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಎ. ಅಬೂಬಕ್ಕರ್, ಕಳಸ ಬ್ಲಾಕ್ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಹೆಚ್. ಉಮರಬ್ಬ, ಬಾಳೆಹೊನ್ನೂರು ಬ್ಲಾಕ್ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಇಬ್ರಾಹಿಮ್ ಹಾಜಿ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ, ಹಿರಿಯ ಸಾಮಾಜಿಕ ನೇತಾರರಾದ ಬಿ.ಎ. ಅಹ್ಮದ್ ಬಾವಾ ಬಣಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀಮತಿ ಝೊಹರಾ ಅಬ್ಬಾಸ್ ದನ್ಯವಾದ ಸಮರ್ಪಿಸಿದರು.

ಬೆಳಿಗ್ಗೆ ೧೧:೧೫ ರಿಂದ ೧:೧೩ರವರೆಗೆ “ಬ್ಯಾರಿ ಭಾಷಾ ಸೌಂದರ್ಯ ಮತ್ತು ಸವಾಲುಗಳು” ಎಂಬ ವಿಷಯದ ಬಗ್ಗೆ ಬ್ಯಾರಿ ಭಾಷಾ ವಿಚಾರಗೋಷ್ಠಿ ನಡೆಯಿತು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಸ್ವಾಗತ ಮಾಡಿದರು. ಸುಧಾ ವಾರಪತ್ರಿಕೆಯ ಉಪಸಂಪಾದಕರಾದ ಬಿ.ಎಂ. ಹನೀಫ್ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಹಿತಿಯಾದ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ವಿಷಯವನ್ನು ಮಂಡಿಸಿದರು. ಬಿ.ಎ. ಮೊಹಮ್ಮದ್ ಅಲಿ, ಹಂಝ ಮಲಾರ್, ಝೊಹರಾ ಅಬ್ಬಾಸ್, ಎ.ಎ. ಆಯಿಷ ಪೆರ್ಲ, ಬದ್ರುದ್ದೀನ್ ಕೆ.ಮಾಣಿ ಇವರುಗಳು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಗೌರವ ಸಲಹೆಗಾರರಾದ ರಫೀಕ್ ಮಾಸ್ಟರ್ ವಿಚಾರಗೋಷ್ಠಿಯ ನಿರ್ವಹಣೆ ಮಾಡಿದರು. ಅಕಾಡೆಮಿಯ ಸದಸ್ಯರಾದ ಯೂಸುಫ್ ವಕ್ತಾರ್ ದನ್ಯವಾದ ಸಮರ್ಪಿಸಿದರು.

ಮಧ್ಯಾಹ್ನ ೨:೩೦ರಿಂದ ೩:೧೫ರವರೆಗೆ “ಬ್ಯಾರಿ ಕವಿಗೋಷ್ಠಿಯು” ನಡೆಯಿತು. ಬಹುಭಾಷಾ ಹಿರಿಯ ಸಾಹಿತಿಯಾದ ಮುಹಮ್ಮದ್ ಬಡ್ಡೂರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಬಶೀರ್ ಕಿನ್ಯಾ, ಇಸ್ಮಾಯಿಲ್ ಅಝಾದ್ ಮೂಡಿಗೆರೆ, ಮುಹಮ್ಮದ್ ಶರೀಫ್ ನಿರ್ಮುಂಜೆ, ಇದಿನಬ್ಬ ಬ್ಯಾರಿ, ಮುಆದ್ ಬಂಟ್ವಾಳ, ಅಶ್ರಫ್ ಅಪೊಲೊ, ಸತ್ತಾರ್ ಗೂಡಿನಬಳಿ, ಇವರುಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅಕಾಡೆಮಿಯ ಸದಸ್ಯರಾದ ಅಬ್ದುಲ್ ಹಮೀದ್ ಗೊಳ್ತಮಜಲು ಕವಿಗೋಷ್ಠಿಯ ನಿರ್ವಹಣೆ ಮಾಡಿದರು. ಎ.ಎ. ಆಯಿಷ ಪೆರ್ಲ ದನ್ಯವಾದ ಸಮರ್ಪಿಸಿದರು.

ಅಪರಾಹ್ನ೩:೩೦ ರಿಂದ “೨೦೧೪ರ ಗೌರವ ಪ್ರಶಸ್ತಿ-ಪುರಸ್ಕಾರ ಪ್ರದಾನ ಸಮಾರಂಭ” ನಡೆಯಿತು. ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಮುಹಮ್ಮದ್ ಸ್ವಾಗತ ಮಾಡಿದರು. ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಕಾಡೆಮಿಯ ಸದಸ್ಯ ಅಬ್ಬಾಸ್ ಕಿರುಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

೨೦೧೪ರ ಗೌರವ ಪ್ರಶಸ್ತಿಯನ್ನು ಬ್ಯಾರಿ ಭಾಷೆ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಪ್ರೊ.ಬಿ.ಎಂ. ಇಚ್ಲಂಗೋಡು, ಸಾಹಿತ್ಯ ಕ್ಷೇತ್ರದಲ್ಲಿ ಬಿ.ಎ. ಶಂಶುದ್ದೀನ್ ಮಡಿಕೇರಿ, ಕಲೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಹಮ್ಮದ್ ಬ್ಯಾರಿ ಎಡಪದವು ಇವರುಗಳಿಗೆ ಪ್ರಧಾನ ಮಾಡಲಾಯಿತು. ಅಕಾಡೆಮಿಯ ನಿಯಮಾನುಸಾರ ಗೌರವ ಪ್ರಶಸ್ತಿ ವಿಜೇತರಿಗೆ ರೂ.೧೦,೦೦೦ ನಗದು, ಸ್ಮರಣಿಕೆ, ಶಾಲು ಹಾಗೂ ಪ್ರಯಾಣ ವೆಚ್ಚವನ್ನು ನೀಡಲಾಯಿತು. ೨೦೧೪ರ ಗೌರವ ಪುರಸ್ಕಾರವನ್ನು ಸಾಹಿತ್ಯ ಕ್ಷೇತ್ರದಲ್ಲಿ ಡಾ| ಎ.ಎಮ್.ಶ್ರೀಧರನ್, ಮರಿಯಮ್ ಇಸ್ಮಾಯಿಲ್ ಉಳ್ಳಾಲ, ಇಸ್ಮಾಯಿಲ್ ಅಜಾದ್ ಮೂಡಿಗೆರೆ, ಉಮ್ಮರ್ ಫಾರೂಕ್ ಬಿಕ್ಕೊಡ್, ಸಮಾಜ ಸೇವಾ ಕ್ಷೇತ್ರದಲ್ಲಿ ಅಝಲ ಅಯ್ಯೂಬ್, ಬಿ.ಹೆಚ್. ನೂರ್ ಮೊಹಮ್ಮದ್, ಗಾಯನ ಕ್ಷೇತ್ರದಲ್ಲಿ ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ, ದೇಶ ರಕ್ಷಣೆ ಮತ್ತು ಕಲೆ ಕ್ಷೇತ್ರದಲ್ಲಿ ಕೆ. ಮಹಮ್ಮದ್ ಮಂದಗದ್ದೆ, ಆರೋಗ್ಯ ಕ್ಷೇತ್ರದಲ್ಲಿ ಮೊೃದಿನ್ ಕುಂಞಿ, ಗರ್ಡಾಡಿ, ಇವರುಗಳಿಗೆ ಪ್ರಧಾನ ಮಾಡಲಾಯಿತು. ಗೌರವ ಪುರಸ್ಕೃತರಿಗೆ ಸ್ಮರಣಿಕೆ, ಶಾಲು ಹಾಗೂ ಪ್ರಯಾಣ ವೆಚ್ಚವನ್ನು ನೀಡಲಾಯಿತು. ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹಾಗೂ ಯುವಜನ ಸೇವೆ ಮತ್ತು ಕ್ರೀಡೆ ಇಲಾಖಾ ಸಚಿವರಾದ ಅಭಯಚಂದ್ರ ಜೈನ್, ಸಹಕಾರ ಸಚಿವರಾದ ಮಹದೇವ ಪ್ರಸಾದ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಬಲ್ಕೀಸ್ ಬಾನು, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಭಾಗ್ಯ ರಂಗನಾಥ್, ಚಿಕ್ಕಮಗಳೂರು ಶಾಸಕರಾದ ಸಿ.ಟಿ.ರವಿ, ಮೂಡಿಗೆರೆ ಶಾಸಕರಾದ ಬಿ.ಬಿ.ನಿಂಗಯ್ಯ, ತರೀಕೆರೆ ಶಾಸಕರಾದ ಜಿ.ಹೆಚ್. ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಮೋಟಮ್ಮ, ಅಖಿಲ ಭಾರತ ವಕೀಲರ ಪರಿಷತ್ ಉಪಾಧ್ಯಕ್ಷರಾದ ಎಸ್.ಎಲ್.ಬೋಜೇಗೌಡ, ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರಾದ ಪುಷ್ಪರಾಜ್, ಮಾಜಿ ಸಭಾಪತಿಯಾದ ಬಿ.ಎಲ್.ಶಂಕರ್ ಗೌರವ ಪ್ರಶಸ್ತಿ ಹಾಗೂ ಪುರಸ್ಕಾರವನ್ನು ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ ಸಹಕಾರ ಸಚಿವರಾದ ಮಹದೇವ ಪ್ರಸಾದ್, ಮಾಜಿ ಉನ್ನತ ಶಿಕ್ಷಣ ಸಚಿವರಾದ ಬಿ.ಎ. ಮೊಹಿದಿನ್, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾದ ಕೆ. ಮುಹಮ್ಮದ್, ಅಖಿಲ ಭಾರತ ವಕೀಲರ ಪರಿಷತ್ ಉಪಾಧ್ಯಕ್ಷರಾದ ಎಸ್.ಎಲ್. ಬೋಜೇಗೌಡ, ಹಿರಿಯ ಸಾಮಾಜಿಕ ನೇತಾರರಾದ ಬಿ.ಎ. ಅಹ್ಮದ್ ಬಾವ ಬಣಕಲ್ ಇವರುಗಳನ್ನು ಅಕಾಡೆಮಿಯ ಪರವಾಗಿ ಅಭಿನಂದಿಸಲಾಯಿತು. ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖಾ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ಅಭಿನಂದನೆಯನ್ನು ನೆರವೇರಿಸಿದರು.

ಸುಧಾ ವಾರಪತ್ರಿಕೆಯ ಉಪಸಂಪಾದಕರಾದ ಬಿ.ಎಂ. ಹನೀಫ್ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ದನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಎಲ್ಲಾ ಸದಸ್ಯರು, ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ಬ್ಯಾರಿ ನಾಟಕ ಪಾಸಿರೊ ಬಲ್ಲಿ, ದಫ್, ಕೋಲ್ಕಲಿ ಮತ್ತು ಬ್ಯಾರಿ ಜನಪದ ಹಾಡುಗಳು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳಿಗೆ, ಸಾಹಿತಿಗಳಿಗೆ, ಹಾಡುಗಾರರಿಗೆ, ಕಲಾವಿದರಿಗೆ ಸಂಭಾವನೆ, ಪ್ರಯಾಣ ವೆಚ್ಚ, ವಾಸ್ತವ್ಯ ಹಾಗೂ ಆತಿಥ್ಯ ನೀಡಿ ಗೌರವಿಸಲಾಯಿತು. ಸುಮಾರು ೪೦೦೦ಕ್ಕೂ ಮಿಕ್ಕಿ ಭಾಷಾಭಿಮಾನಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಇವರಿಗೆ ಉಟೋಪಚಾರದ ವ್ಯವಸ್ಥೆ ಮಾಡಲಾಯಿತು.
 

೨೦೧೨-೧೩ ಮತ್ತು ೨೦೧೩-೧೪ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುರಸ್ಕಾರ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ ೧೮-೫-೨೦೧೪ರಂದು ಮಂಗಳೂರು ಪುರಭವನದಲ್ಲಿ “೨೦೧೨-೧೩ ಮತ್ತು ೨೦೧೩-೧೪ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುರಸ್ಕಾರ” ಕಾರ್ಯಕ್ರಮ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾ ಕಾರ್ಯಕ್ರಮವನ್ನು ಉದ್ಟಾಟಿಸಿದರು. ಅಕಾಡೆಮಿಯ ಅಧ್ಯಕ್ಷರಾದ ರಹೀಮ್ ಉಚ್ಚಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

೨೦೧೨ನೇ ಸಾಲಿನ ಗೌರವ ಪ್ರಶಸ್ತಿಯನ್ನು ಬ್ಯಾರಿ ಭಾಷೆ ಕ್ಷೇತ್ರದಲ್ಲಿ ಅಲ್ ಹಾಜ್ ವಿ.ಎ. ಇಸ್ಮಾಯಿಲ್ ಮದನಿ, ಬ್ಯಾರಿ ಕಲೆ ಕ್ಷೇತ್ರದಲ್ಲಿ ಡಾ| ಬಿ.ಕೆ. ಯೂಸುಫ್, ಸಾಂಸ್ಕೃತಿಕ ಸಂಘಟಕ ಕ್ಷೇತ್ರದಲ್ಲಿ ಮುಹಮ್ಮದ್ ಬಡ್ಡೂರು ಹಾಗೂ ೨೦೧೩ನೇ ಸಾಲಿನ ಗೌರವ ಪ್ರಶಸ್ತಿಯನ್ನು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬೈತರ್ ಅಬ್ದುಲ್ ರಝಾಕ್ ಹಾಜಿ ಹರೇಕಳ, ಸಾಂಸ್ಕೃತಿಕ ಸಂಘಟಕ ಕ್ಷೇತ್ರದಲ್ಲಿ ಕರಂಬಾರ್ ಮುಹಮ್ಮದ್, ಸಾಹಿತ್ಯ ಕ್ಷೇತ್ರದಲ್ಲಿ ಬಶೀರ್ ಬೈಕಂಪಾಡಿ ಇವರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ರೂ.೧೦,೦೦೦-೦೦ ನಗದು, ಸ್ಮರಣಿಕೆ, ಶಾಲು, ಹಾರ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿತ್ತು.

೨೦೧೨ನೇ ಸಾಲಿನ ಪುರಸ್ಕಾರವನ್ನು ಬ್ಯಾರಿ ಸಂಘಟಕ ಕ್ಷೇತ್ರದಲ್ಲಿ ಅಬ್ದುಲ್ ಖಾದರ್ ಹಾಜಿ ಗೊಳ್ತಮಜಲು, ಬ್ಯಾರಿ ಶಿಕ್ಷಣ ಕ್ಷೇತ್ರದಲ್ಲಿ ಡಾ|ಕಾಪು ಮೊಹಮ್ಮದ್ ಹಾಗೂ ೨೦೧೩ನೇ ಸಾಲಿನ ಪುರಸ್ಕಾರವನ್ನು ಬ್ಯಾರಿ ಸಮಾಜ ಸೇವೆ ಕ್ಷೇತ್ರದಲ್ಲಿ ಬಿ.ಎಂ. ಮುಮ್ತಾಝ್ ಅಲಿ, ಚಾರ್ಮಾಡ್ ಹಸನಬ್ಬ, ಬ್ಯಾರಿ ನಾಟಕಗಾರ ಝಕರಿಯಾ ವೇಣೂರು ಇವರಿಗೆ ನೀಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಟಿ.ಮುನಿರಾಜಯ್ಯ, ಕರಾವಳಿ ವಿದ್ಯಾ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಗಣೇಶ್ ರಾವ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊ Êದಿನ್ ಬಾವಾ ಪ್ರಶಸ್ತಿ ಪ್ರಧಾನ ಹಾಗೂ ಪುರಸ್ಕಾರವನ್ನು ಪ್ರಧಾನ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ಕೋಲ್ಕಲಿ, ದಫ್, ತಾಲೀಮು, ಚೀನೀ ಬ್ಯಾಂಡ್ ಹಾಗೂ ಬ್ಯಾರಿ ಜನಪದ ಹಾಡು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಧ್ಯಕ್ಷರಾದ ರಹೀಮ್ ಉಚ್ಚಿಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕರಾದ ಮುಹಮ್ಮದ್ ತುಂಬೆ ಕಾರ್ಯಕ್ರಮವನ್ನು ನಿರೂಪಿಸಿದರು.
 

2010ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2010ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ನಗರದ ಪುರಭವನದಲ್ಲಿ ಮಾರ್ಚ್ 27, 2011ರಂದು ಯಶಸ್ವಿಯಾಗಿ ನಡೆಯಿತು. ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಖ್ಯಾತ ಲೇಖಕ ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು, ಬ್ಯಾರಿ ಭಾಷಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಾನಪದ ಕವಿ, ಭಾಷಾ ತಜÕ ಮುಹಮ್ಮದ್ ಮಾರಿಪಳ್ಳ ಹಾಗೂ ಬ್ಯಾರಿ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ಖ್ಯಾತ ಗಾಯಕ ರಹೀಂ ಬಿ.ಸಿ.ರೋಡ್ ರವರನ್ನು 2010ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ರೂ.10,000-00 ನಗದು, ಸ್ಮರಣಿಕೆ, ಶಾಲು, ಹಾರ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿತ್ತು. ಅಕಾಡೆಮಿಯ ಪ್ರಕಟಿತ ಕೃತಿಗಳಿಗೆ ಆಕರ್ಷಕ ವಿನ್ಯಾಸ ರೂಪಿಸಿದ ಆಕೃತಿ ಪ್ರಿಂಟ್ಸ್ ನ ಶ್ರೀ ಕಲ್ಲೂರು ನಾಗೇಶ್ ರವರನ್ನು ವಿಶೇಷವಾಗಿ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಸಂಜೆ ಮೂನ್ ಸ್ಟಾರ್ ಒಪ್ಪನೆಪಾಟ್ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ತಂಡದವರಿಂದ ಬ್ಯಾರಿ - ತುಳು ವಿಶೇಷ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಲ್ಲದೆ ಅದೇ ದಿನ ಬೆಳಗ್ಗೆ 10:00 ಗಂಟೆಯಿಂದ ವಿವಿಧ ಬ್ಯಾರಿ ಸ್ಪರ್ಧೆಗಳು ನಡೆದವು. ಸ್ಪರ್ಧೆಯಲ್ಲಿ ಬ್ಯಾರಿ ಪ್ರಹಸನ, ಏಕಪಾತ್ರಾಭಿನಯ, "ಕನ್ನದ ಸಾಹಿತ್ಯಕ್ಕೆ ಬ್ಯಾರಿಗಳ ಕೊಡುಗೆ" ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ ಹಾಗೂ ವಿಶೇಷವಾಗಿ ಮಹಿಳೆಯರಿಗಾಗಿ ಎಟ್ಟಿರೆ ಬಿರಿಯಾನಿ, ಮೀನು ಪ್ರೈ, ಮೀನು ಮಸಾಲ, ಮೀನು ಕರಿ, ಹಾಗೂ ಪತ್ತಿರ್ (ಕೈಯಲ್ಲಿ ಮಾಡಿದ ಅಕ್ಕಿ ರೊಟ್ಟಿ)ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಅಡುಗೆ ಸ್ಪರ್ಧೆಯಲ್ಲಿ 51ಮಹಿಳೆಯರು ಸ್ಪರ್ಧಾರ್ಥಿಗಳಾಗಿ ಭಾಗವಹಿಸಿದ್ದರು. ಅಂತಿಮವಾಗಿ ಎಲ್ಲಾ ಸ್ಪರ್ಧಾ ವಿಜೇತರಿಗೆ ಬಹುಮಾನವಾಗಿ ನಗದು, ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು.
 

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ೨೦೦೮ ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ೨೦೦೯ರ ಸಾಹಿತ್ಯ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮಗಳ ಕುರಿತು.

ನವಂಬರ್ ೧೩, ೨೦೦೯ ರಂದು ಶುಕ್ರವಾರ ಸಂಜೆ ಗಂಟೆ ೬:೩೦ ಕ್ಕೆ ಮಂಗಳೂರು ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ೨೦೦೮ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ೨೦೦೯ ರ ಸಾಹಿತ್ಯ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನೆರವೇರಿತು.

ವೇದಿಕೆಯಲ್ಲಿ ಉಪಸ್ದಿತರಿದ್ದ ಗಣ್ಯರನ್ನು ಬ್ಯಾರಿ ಸಂಸ್ಕ್ರತಿಯಂತೆ ಅತ್ತರ್, ಪನ್ನೀರು ಸಿಂಪಡಿಸಿ ಸ್ವಾಗತಿಸಲಾಯಿತು.ಅತಿಥಿಹಳೆಲ್ಲರನ್ನೂ ಖರ್ಜೂರ, ಕಲ್ಲು ಸಕ್ಕರೆ, ಬಾಳೆಹಣ್ಣು ಹಾಗೂ ಹಾಲು ನೀಡಿ ಸತ್ಕರಿಸಲಾಯಿತು. ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ಅವರು ಪ್ರಶಸ್ತಿ ವಿಜೇತರಿಗೆ ೨೦೦೮ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷರಾದ ಡಾ.ನಾ. ಮೊಗಸಾಲೆ, ತುಂಬೆ ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಬಿ. ಹಾಜಿ ಮುಹಿಯುದ್ದೀನ್ ಹಾಗೂ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಅವರುಗಳು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

೨೦೦೮ನೇ ಸಾಲಿನ ಗೌರವ ಪ್ರಶಸ್ತಿಯನ್ನು ಖ್ಯಾತ ನಾಟಕಕಾರ ಶ್ರೀ ಇಬ್ರಾಹೀಂ ತಣ್ಣೀರುಬಾವಿ, ಬ್ಯಾರಿ ಭಾಷೆಯ ಬೆಳವಣೆಗೆಗೆ ಶ್ರಮಿಸಿದರು ಶ್ರೀ ಯು.ಎ. ಕಾಸೀಮ್ ಉಳ್ಳಾಲ ಹಾಗೂ ಖ್ಯಾತ ಸಾಹಿತಿ ಮುಹಮ್ಮದ್ ಕುಳಾಯಿ ಅವರುಗಳು ಸ್ವೀಕರಿಸಿದರು.ಈ ಗೌರವ ಪ್ರಶಸ್ತಿಯು ತಲಾ ರೂ೧೦,೦೦೦-೦೦ ನಗದು, ಶಾಲು, ಸ್ಮರಣೆಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ೨೦೦೯ರ ಸಾಹಿತ್ಯ ಸ್ಪರ್ಧೆಯ ಕತೆ, ಕವನ ಹಾಗೂ ಲೇಖನ ವಿಭಾಗದಲ್ಲಿ ೯ ಮಂದಿ ವಿಜೇತರಿಗೆ ಬಹುಮಾನವಾಗಿ ಪ್ರಥಮ ರೂ೧,೦೦೦-೦೦, ದ್ವಿತೀಯ ರೂ೭೫೦-೦೦ ಹಾಗೂ ತೃತೀಯ ರೂ೫೦೦-೦೦ ನಗದು ಮತ್ತು ಪ್ರಮಾಣ ಪತ್ರಗಳನ್ನು ಸಚಿವರ ಸಮ್ಮುಖದಲ್ಲಿ ಗೌರವ ಅತಿಥಿಗಳು ನೀಡಿದರು.

ಅಕಾಡೆಮಿಯ ಸದಸ್ಯರಾದ ರಹೀಮ್ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.ಗಣ್ಯರೆಲ್ಲರನ್ನು ಅಕಾಡೆಮಿಯ ಸದಸ್ಯರಾದ ಅಬ್ದುಲ್ ಅಝೀಝ್ ಬೈಕಂಪಾಡಿ ವೇದಿಕೆಗೆ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಎಂ.ಬಿ. ಅಬ್ದುಲ್ ರಹ್ ಮಾನ್ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪರವರು ಪ್ರಸ್ತಾವಿಕವಾಗಿ ಅಕಾಡೆಮಿಯ ಕುರಿತು ಮಾತನಾಡಿದರು. ಅಕಾಡೆಮಿಯ ಸದಸ್ಯರಾದ ಎಸ್.ಪಿ. ಉಮ್ಮರ್ ಫಾರೂಕು ವಂದಿಸುವುದರೊಂದಿಗೆ ಸಭಾ ಕಾರ್ಯಕ್ರಮ ಸಮಾಪನಗೊಂಡಿತು.

ಅಲ್ಲದೆ ಸಂಜೆ ೪:೩೦ ಕ್ಕೆ ಹುಸೈನ್ ಕಾಟಿಪಳ್ಳ ತಂಡದಿಂದ ಬ್ಯಾರಿ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಬ್ಯಾರಿ ಕವಾಲಿ ಹಾಗೂ ರಾತ್ರಿ ೮:೩೦ ರಿಂದ ಇಬ್ರಾಹೀಂ ತಣ್ಣೇರುಬಾವಿ ತಂಡದಿಂದ ’ಅಂಗಲಾಪು’ಬ್ಯಾರಿ ಪ್ರಹಸನ ಏರ್ಪಡಿಸಲಾಗಿತ್ತು. ಪುರಭವನದಲ್ಲಿ ಕಿಕ್ಕಿರಿದು ತುಂಬಿದ್ದ ಬ್ಯಾರಿ ಜನಾಂಗದವರು. ಹಾಗೂ ಬೇರೆ - ಬೇರೆ ಸಮುದಾಯದ ಸಾಹಿತಿಗಳು, ಕಲಾಭಿಮಾನಿಗಳು ಸಮಾರಂಭವನ್ನು ಯಶಸ್ವಿಗೊಳಿಸಿದರು.
 
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ೨೦೦೯ ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು.

ಮಾರ್ಚ್ ೩೧, ೨೦೧೦ ರಂದು ಸಂಜೆ ೪:೩೦ ಗಂಟೆಗೆ ನಗರದ ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ೨೦೦೯ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಬಹಳ ಯಶಸ್ವಿಯಾಗಿ ನೆರವೇರಿತು.

ವೇದೆಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಬ್ಯಾರಿ ಸಂಸ್ಕ್ರತಿಯಂತೆ ಅತ್ತರ್, ಪನ್ನೀರು ಸಿಂಪಡಿಸಿ ಸ್ವಾಗತಿಸಲಾಯಿತು. ಅತಿಥಿಗಳೆಲ್ಲರನ್ನೂ ಖರ್ಜೂರ, ಕಲ್ಲು ಸಕ್ಕರೆ, ಬಾಳೆಹಣ್ಣು ಹಾಗೂ ಹಾಲು ನೀಡಿ ಸತ್ಕರಿಸಲಾಯಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ಅವರು ೨೦೦೯ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡದ ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಮಂಗಳೂರು ಶಾಸಕರಾದ ಶ್ರೀ ಖಾದರ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿಯ ಅದ್ಯಕ್ಷರಾದ ಶ್ರೀ ಎಂ.ಬಿ. ಅಬ್ದುಲ್ ರಹ್ ಮಾನ್ ಅಧ್ಯಕ್ಷತೆ ವಹಿಸಿದ್ದರು.

೨೦೦೯ನೇ ಸಾಲಿನ ಗೌರವ ಪ್ರಶಸ್ತಿಯನ್ನು ಬ್ಯಾರಿ ಭಾಷಾ ತಜ್ಞ ಶ್ರೀ ಅಬುಲ್ ಹಸನ್ ಮುಹಮ್ಮದ್ ಮೌಲವಿ ಹಾಗೂ ದಫ್ ಗುರು ಇಸ್ಮಾಈಲ್ ಉಸ್ತಾದ್ ಸುರಿಬೈಲ್ ಗೌರವ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಗೆ ಆಯ್ಕೆಯಾದ ಇನ್ನೋರ್ವ ಮಹನೀಯರಾದ ಅಹ್ಮದ್ ನೂರಿ, ಬೆಂಗಳೂರು ಅನಾರೋಗ್ಯದ ನಿಮಿತ್ತ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಅವರನ್ನು ಅವರ ಮನೆಗೆ ಹೋಗಿ ಗೌರವಿಸಲಾಗುವುದು ಎಂದು ಘೋಷಿಸಲಾಯಿತು. ಈ ಗೌರವ ಪ್ರಶಸ್ತಿಯು ತಲಾ ರೂ.೧೦,೦೦೦-೦೦ ನಗದು, ಶಾಲು, ಸ್ಮರಣೆಕೆ, ಹೂಹಾರ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಮತ್ತು ಅವರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಜೆ ಪಾಲೆಮಾರ್ ಗೌರವ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಅಕಾಡೆಮಿಯ ಸದಸ್ಯರಾದ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಚಂದ್ರಹಾಸ ರೈ ಬಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ಸದಸ್ಯರುಗಳಾದ ಕೆ. ಮುಹಮ್ಮದ್ ಚಿಕ್ಕಮಗಳೂರು, ಸಿ.ಕೆ. ಇಬ್ರಾಹೀಂ, ಅಬ್ದುಲ್ ಅಝೀಝ್ ಬೈಕಂಪಾಡಿ ವೇದಿಕೆಯಲ್ಲಿ ಉಪಸ್ದಿತರಿದ್ದರು. ಅಕಾಡೆಮಿಯ ಇನ್ನೋರ್ವ ಸದಸ್ಯ ಪಿ. ಮುಹಮ್ಮದ್ ವಂದಿಸುವುದರೊಂದಿಗೆ ಸಭಾ ಕಾರ್ಯಕ್ರಮ ಸಮಾಪನಗೊಂಡಿತು.

ಅನಂತರ ಸಂಜೆ ೭:೦೦ ಗಂಟೆಗೆ ಕ್ಯಾಪ್ ಮ್ಯಾನ್ ಮೆಲೋಡಿ ಮೇಕರ್ಸ್ ತಂಡದಿಂದ ಮೊತ್ತಮೊದಲ ಬಾರಿಗೆ "ಬ್ಯಾರಿ-ಮಾಪ್ಳ ಜಾನಪದ ಸಾಹಿತ್ಯ ಸಂಗಮ" ಕರ್ಯಕ್ರಮ ಕಿಕ್ಕಿರಿದು ತುಂಬಿದ ಕಲಾಭಿಮಾನಿಗಳನ್ನು ರಂಜಿಸಿತು.

 
ಇತ್ತೀಚಿನ ಪ್ರಕಟಣೆಗಳು
beary saahithya academy mangalore
beary book beary book
beary mangalore
beary saahithya academy mangalore
beary mangalore
ಬ್ಯಾರಿ ಚರಿತ್ರೆ
ಬ್ಯಾರಿಗಳು ತುಳುನಾಡು ಎಂದು ಹಿಂದೆ ಕರೆಯಲಾಗುತ್ತಿದ್ದ ಕರ್ನಾಟಕದ ಈಗಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಸವಾಗಿರುವ ಒಂದು ಮುಸ್ಲಿಮ್ ಜನಾಂಗ. ಅವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಒಂದು ಸಾಮಾಜಿಕ ಪಂಗಡ. ಬ್ಯಾರಿಗಳಿಗೆ ಕೊಂಕಣ ತೀರದ ನವಾಯತರು . ಇನ್ನೂ ಓದಿ »
beary saahithya academy mangalore
beary mangalore
ಗ್ಯಾಲರಿ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
beary saahithya academy mangalore
beary mangalore
ಬ್ಯಾರಿ ಸಾಹಿತ್ಯ ಅಕಾಡೆಮಿ ಚಟುವಟಿಕೆಗಳು
beary academy Activity ಪ್ರಶಸ್ತಿ ಪ್ರದಾನ beary academy Activity ಕವಿ ಸಮ್ಮೇಳನೆ
beary academy Activity ಛಾಯಚಿತ್ರಗಳ ಸಂಗ್ರಹ beary academy Activity ಹೊರನಾಡು ಕಾರ್ಯಕ್ರಮ
beary academy Activity ಸಾಂಸ್ಕೃತಿಕ ಕಾರ್ಯಕ್ರಮ beary academy Activity ಕಮ್ಮಟಗಳು
  ಇನ್ನೂ ಓದಿ »  
beary saahithya academy mangalore