ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
 

ಚಟುವಟಿಕೆಗಳು

beary sahithya academy
ಕಾರ್ಯಕ್ರಮಗಳು
ಪ್ರಕಟಣೆಗಳು
beary sahithya academy
    ಇತರೆ ಯೋಜನೆಗಳು
ಯೋಜನೆಗಳು

 • ವಿವಿಧ ಸ್ತರಗಳಲ್ಲಿ ಬ್ಯಾರಿ ಸಾಕ್ಷ್ಯಚಿತ್ರ ನಿರ್ಮಾಣ :
  ಬ್ಯಾರಿ ಕಲೆ, ಭಾಷೆ, ಸಾಹಿತ್ಯ, ಸಂಸ್ಕೃತಿ ಇವುಗಳ ಸಮಗ್ರ ಚಿತ್ರಣವನ್ನು ಬ್ಯಾರಿ ಭಾಷೆಯ ಉಗಮದಿಂದ ಹಿಡಿದು ಈವರೆಗಿನ ಎಲ್ಲಾ ವಿವರಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ದೃಷ್ಠಿಯಿಂದ ವಿವಿಧ ಸ್ತರಗಳಲ್ಲಿ ಬ್ಯಾರಿ ಸಾಕ್ಷ್ಯಚಿತ್ರವನ್ನು ಪ್ರಕಟಿಸುವುದು


 • ಬೆಲ್ಕಿರಿ ದ್ವೈಮಾಸಿಕ ಸಂಚಿಕೆ :
  ಬ್ಯಾರಿ ಬರಹಗಾರರಿಗೆ ಪ್ರೊತ್ಸಾಹ ನೀಡುವ ಹಾಗೂ ಸಾಹಿತ್ಯದ ಅಭಿವೃದ್ದಿ ಸಲುವಾಗಿ ಬ್ಯಾರಿ ಭಾಷೆಯ ದ್ವೈಮಾಸಿಕ ಸಂಚಿಕೆಯನ್ನು ಪ್ರಕಟನೆ ಮಾಡಲಾಗುತ್ತದೆ.


 • ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಗ್ರಂಥಕೋಶ :
  ಸಾವಿರ ವರ್ಷ ಇತಿಹಾಸವಿರುವ ಬ್ಯಾರಿ ಭಾಷೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಮುಂದಿನ ತಲೆಮಾರಿನತ್ತ ಕೊಂಡೊಯ್ಯುವ ದೃಷ್ಟಿಯಿಂದ ಬ್ಯಾರಿ ನಿಘಂಟು ಗ್ರಂಥಕೋಶವನ್ನು ಪ್ರಕಟಿಸುವುದು.


 • ಪ್ರಶಸ್ತಿ ಪ್ರದಾನ – ಪುಸ್ತಕ ಬಹುಮಾನ
  ಬ್ಯಾರಿ ಸಾಹಿತ್ಯ- ಸಂಶೋಧನೆ, ರಂಗಭೂಮಿ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಮೂವರು ಗಣ್ಯರನ್ನು ಗುರುತಿಸಿ, ಅವರಿಗೆ ಅಕಾಡೆಮಿ ಗೌರವ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಈ ಪ್ರಶಸ್ತಿಯಲ್ಲಿ ಗೌರವ ಧನ ರೂ. 10,000-00 ನಗದು, ಶಾಲು, ಹಾರ, ಪ್ರಮಾಣ ಪತ್ರ, ಫಲ ತಾಂಬೂಲಗಳನ್ನು ನೀಡಿ ಗೌರವಿಸುವುದು. ಅಕಾಡೆಮಿಯು ಪುಸ್ತಕ ಬಹುಮಾನ ಯೋಜನೆಯಡಿ ಬ್ಯಾರಿ- ಕನ್ನಡ ಭಾಷಾಂತರವನ್ನು ಒಳಗೊಂಡಂತೆ ಗರಿಷ್ಠ ಮೂರು ಪ್ರಕಾರದ ಪುಸ್ತಕಕ್ಕೆ ಬಹುಮಾನ ನೀಡಲಾಗುವುದು. ಈ ಬಹುಮಾನವು ರೂ.5,000-00, ಶಾಲು, ಹೂವಿನ ಹಾರ, ಸ್ಮರಣಿಕೆ, ಪ್ರಮಾಣಪತ್ರ ಮತ್ತು ಫಲ ತಾಂಬೂಲ ನೀಡಿ ಗೌರವಿಸುವುದು. ಈ ಪ್ರಸ್ಕಾರಕ್ಕಾಗಿ ಉತ್ತಮ ಪುಸ್ತಕಗಳೆಂದು ಪರಿಗಣಿಸಲು ಸಹಾಯವಾಗುವಂತೆ ಆಯ್ಕೆ ಮಾಡಲು ಅಯ್ದ ತಜ್ಞರಿಗೆ ನೀಡುವುದು ಹಾಗೂ ತಜ್ಞರು ಆಯ್ಕೆ ಮಾಡಿದ ಪುಸ್ತಕಗಳಿಗೆ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.


 • ವಿವಿಧ ಪರಿಕರಗಳ ಆಭರಣ ಮತ್ತು ಅಮೂಲ್ಯ ವಸ್ತುಗಳ ಛಾಯಚಿತ್ರಗಳ ಸಂಗ್ರಹ
  ಬ್ಯಾರಿ ಜನಾಂಗದಲ್ಲಿ ಇದ್ದ ವಿವಿಧ ಪರಿಕರಗಳ ಆಭರಣ ಮತ್ತು ಇನ್ನಿತರ ಬದುಕಿಗೆ ಅಮೂಲ್ಯ ಹಾಗೂ ಅಪರೂಪದ ವಸ್ತುಗಳ ಛಾಯಚಿತ್ರ ಸಂಗ್ರಹಿಸಿ ಗ್ರಂಥ ರಚಿಸುವುದು.


 • ಸಾಹಿತ್ಯ – ಸಾಂಸ್ಕೃತಿಕ ಕಾರ್ಯಕ್ರಮಗಳು
  ಅಕಾಡೆಮಿಯು ಬ್ಯಾರಿ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬ್ಯಾರಿ ಸಂಸ್ಕೃತಿಗೆ ಪೂರಕವಾದ ಬ್ಯಾರಿಗಳ ವಿಶಿಷ್ಟ ಹಬ್ಬಗಳಾದ ಪೆರ್ನಾಲ್, ಸಂದೋಲ, ಜಾನಪದ ಸಂಗೀತ, ನಾಟಕಗಳಿಗೆ ಸಂಬಂಧಿಸಿದಂತೆ ಉತ್ಸವ, ಸಮಾವೇಶ, ಸಮ್ಮೇಳನ, ದಫ್ ಸ್ಪರ್ಧೆ, ಬ್ಯಾರಿ ನಾಟಕ ಸ್ಪರ್ಧೆ ಮತ್ತು ಬ್ಯಾರಿ ಜಾನಪದ ಕಾರ್ಯಕ್ರಮಗಳನ್ನು ನಡೆಸುವುದು. ಈ ಕಾರ್ಯಕ್ರಮವನ್ನು ರಾಜ್ಯದ ವಿವಿದೆಡೆಗಳಲ್ಲಿ ನಡೆಸುವ ಯೋಜನೆ ಹಾಕಲಾಗಿದೆ.


 • ಕವಿ ಸಮ್ಮೇಳನ/ಬಹುಭಾಷಾ ಕವಿಗೋಷ್ಠಿಗಳು
  ಬ್ಯಾರಿ ಕವಿಗಳನ್ನು ಗುರುತಿಸುವ ಕಾರ್ಯಕ್ರಮ ಕವಿ ಸಮ್ಮೇಳನದ ಮೂಲ ಉದ್ದೇಶ. ಈ ಕವಿ ಸಮ್ಮೇಳನದಲ್ಲಿ ಮೂಡಿ ಬರುವ ಲೇಖನಗಳನ್ನು ಸಂಗ್ರಹಿಸಿ ಒಂದು ಕಿರು ಪರಿಚಯದ ಪುಸ್ತಕ ಪ್ರಕಟಿಸುವುದು. ಮತ್ತು ಬಹುಭಾಷಾ ಕವಿಗೋಷ್ಠಿಯಲ್ಲಿ ಬ್ಯಾರಿ, ಕನ್ನಡ, ತುಳು, ಕೊಂಕಣಿ, ಕೊಡವ, ಮಲಯಾಳಿ, ಇಂಗ್ಲೀಷ್ ಹಾಗೂ ಇತರ ಭಾಷಿಗರೊಂದಿಗೆ ಬೆರೆತು ಬಹುಭಾಷಾ ಕವಿಗೋಷ್ಠಿಯನ್ನು ಹಮ್ಮಿಕೊಳ್ಳುವುದು.


 • ಹೊರನಾಡು ಕಾರ್ಯಕ್ರಮ
  ಬ್ಯಾರಿ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಬ್ಯಾರಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚಿನ ಬ್ಯಾರಿ ಬಾಂಧವರು ಇರುವ ರಾಜ್ಯದ ಹೊರಗಡೆ, ಅಲ್ಲಿನ ಸ್ಥಳೀಯ ಸಂಘ ಸಂಸ್ಥೆಯವರ , ಸ್ಥಳೀಯರ ಸಹಕಾರ ಪಡೆದು ಕಾರ್ಯಕ್ರಮ ಹಮ್ಮಿಕೊಳ್ಳುವುದು.


 • ಕಾರ್ಯಾಗಾರ ಮತ್ತು ಕಮ್ಮಟಗಳು
  ಬ್ಯಾರಿ ಸಾಹಿತ್ಯದಲ್ಲಿ ಸರ್ವಜನಿಕರಿಗೆ ಆಸಕ್ತಿ ಮೂಡಿಸಲು ಹಾಗೂ ಯುವ ಜನರಲ್ಲಿ ಸಾಹಿತ್ಯ ಜಾಗೃತಿ ತರಲು ಸಹಾಯವಾಗುವಂತೆ ಕವಿತೆ ಬರೆಯುವ ಕುರಿತು ಮೂಲಜ್ಞಾನ, ಬರೆಯುವ ರೀತಿ ಇವುಗಳ ಕುರಿತು ಸ್ಪಷ್ಟ ಮಾಹಿತಿ ಒದಗಿಸುವಂತಹ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದು. ಭಾಷೆ, ಸಾಹಿತ್ಯ, ಜಾನಪದ, ಕಾವ್ಯ ರಚನೆ, ನಾಟಕ ರಚನೆ, ಗೀತಗಾಯನ, ಅನುವಾದ ಕಮ್ಮಟ, ಸಂಶೋಧನಾ ತರಬೇತಿ ಕಮ್ಮಟ ಅಥವಾ ಶಿಬಿರಗಳನ್ನು ನಡೆಸುವುದು.


 • ಅಕಾಡೆಮಿ, ಇಲಾಖೆಗಳ ಸಹಯೋಗದೊಂದಿಗೆ ಹಾಗೂ ಬ್ಯಾರಿ ಸಂಘ ಸಂಸ್ಥೆಗಳೊಂದಿಗೆ ಜಂಟಿ ಕಾರ್ಯಕ್ರಮ
  ಭಾಷೆ, ಸಾಹಿತ್ಯಕ್ಕೆ ಪೂರಕವಾದ ಮತ್ತು ಭಾಷಾ ಬೆಳವಣಿಗೆಯ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳುವಾಗ, ಇಲಾಖೆಗಳು, ಅಕಾಡೆಮಿ ಮತ್ತು ಸಂಘ ಸಂಸ್ಥೆಗಳೊಂದಿಗೆ ಅಕಾಡೆಮಿ ಸಹಯೋಗದಲ್ಲಿ ಅಥವಾ ಅಕಾಡೆಮಿಯೇ ನೇರವಾಗಿ ಸ್ಥಳೀಯ ಸಂಸ್ಥೆಯ ಸಹಕಾರ ಪಡೆದು ನಡೆಸುವುದು.


 • ಮಹಿಳಾ ಸಮ್ಮೇಳನ ಮತ್ತು ದಿನಾಚರಣೆ
  ವಿಶ್ವ ಮಹಿಳಾ ದಿನಾಚರಣೆಯಂದು ಬ್ಯಾರಿ ಮಹಿಳಾ ಕೂಟ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುವುದು.


 • ಗಡಿನಾಡು ಕಾರ್ಯಕ್ರಮ
  ಬ್ಯಾರಿ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಪೂರಕವಾದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯದ ಗಡಿಭಾಗದಲ್ಲಿ ಅಲ್ಲಿನ ಸ್ಥಳೀಯ ಸಂಘ ಸಂಸ್ಥೆಯವರ, ಸ್ಥಳೀಯರ ಸಹಕಾರ ಪಡೆದು ಕಾರ್ಯಕ್ರಮ ಹಮ್ಮಿಕೊಳ್ಳುವುದು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

ಪ್ರಕಟಣೆಗಳು

 • ಮರೆಯಲಾಗದ ಮಹನೀಯರ ಪುಸ್ತಕ ಪ್ರಕಟಿಸುವುದು
  ಬ್ಯಾರಿ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಇತಿಹಾಸಕ್ಕೆ ಸಂಬಂಧಪಟ್ಟಂತೆ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಅವರ ಕುರಿತಂತೆ ಪುಸ್ತಕ ಪ್ರಕಟಿಸುವುದು.


 • ಜಾನಪದ ಮೌಖಿಕ ಸಾಹಿತ್ಯ ಹಾಗೂ ಇತರೆ ಪ್ರಕಟಣೆಗಳು
  ಹಳ್ಳಿಗಳಲ್ಲಿ ಧಾರಳವಾಗಿರುವ ಬ್ಯಾರಿ ಮೌಖಿಕ ಸಾಹಿತ್ಯವನ್ನು ಸಂಪಾದಿಸಿ ಪುಸ್ತಕ ಪ್ರಕಟಿಸುವುದು. ಬ್ಯಾರಿ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಇತಿಹಾಸಕ್ಕೆ ಸಂಬಂಧಪಟ್ಟಂತೆ ವಿವಿಧ ಪ್ರಕಾರದ ಪುಸ್ತಕ ಪ್ರಕಟಿಸುವುದು.


 • ವಾರ್ತಾ ಸಂಚಿಕೆ
  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ತಾನು ನಡೆಸುತ್ತಿರುವ ಯೋಜನಾ ಕಾರ್ಯಚಟುವಟಿಕೆಗಳ ತ್ರೈಮಾಸಿಕ ವಿವರಗಳನ್ನು ’ಬೆಲ್ಕಿರಿ’ ವಾರ್ತ ಸಂಚಿಕೆ ರೂಪದಲ್ಲಿ ಹೊರತರಲಾಗುತ್ತಿದೆ. ಈ ವಾರ್ತಾ ಸಂಚಿಕೆಯು ವಾರ್ಷಿಕವಾಗಿ ನಾಲ್ಕು ಸಂಚಿಕೆಯ ರೂಪದಲ್ಲಿ ಪ್ರಕಟಣೆ ಮಾಡಲಾಗುತ್ತಿದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

ಇತರೆ ಯೋಜನೆಗಳು

 • ಸಿ.ಡಿ. ತಯಾರಿ ಯೋಜನೆ
  ಬ್ಯಾರಿ ಲೇಕಕ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಖ್ಯಾತ ಕವಿಗಳ ಆಯ್ದ ಬ್ಯಾರಿ ಭಾಷೆಯ ಕವನಗಳಿಗೆ ರಾಗ ಸಂಯೋಜನೆ ಸಿ.ಡಿ. ತಯಾರಿಸುವುದು. ಇದರ ಹಕ್ಕನ್ನು ಅಕಾಡೆಮಿ ಕಾಯ್ದಿರಿಸಿ ಮಾರಾಟ ಮಾಡುವುದು.


 • ಅಧ್ಯಯನ ಮತ್ತು ಸಂಶೋಧನಾ ಯೋಜನೆ
  ಸಾರ್ವಜನಿಕರಿಗೆ ಉಪಯುಕ್ತವಾದ ವಿಷಯವನ್ನು ಆಯ್ಕೆ ಮಾಡಿ ಅವುಗಳ ಕುರಿತು ಸಂಶೋಧನೆ ಮಾಡಿ,ಪ್ರಕಟಣೆಗೆ ಅನುಕೂಲವಾಗುವಂತೆ ತಯಾರಿಸಿ ನೀಡುವಂತೆ ಆಯಾಯ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರುವ ತಜ್ಞರನ್ನು ಮಾಸಿಕ ಸಂಭಾವನೆಯ ಆಧಾರದಲ್ಲಿ ಸಂಶೋಧನಾ ಕಾರ್ಯಕ್ಕಾಗಿ ಆಯ್ಕೆ ಮಾಡುವುದು. ಸಂಶೋಧಕರು ತಯಾರಿಸಿ ನೀಡಿದ ಮಾಹಿತಿಯನ್ನು ಅಕಾಡೆಮಿಯ ಪ್ರಕಟಿಸುವುದು.


 • ಪುಸ್ತಕ ಖರೀದಿ ಹಾಗೂ ಗ್ರಂಥ ಭಂಡಾರಕ್ಕೆ ಪುಸ್ತಕ ಖರೀದಿ
  ಬ್ಯಾರಿ ಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ವಿವಿಧ ಲೇಖಕರಿಂದ, ಸಂಪಾದಕರಿಂದ, ಪ್ರಕಾಶಕರಿಂದ ಬ್ಯಾರಿ ಭಾಷೆಯ ಮತ್ತು ಬ್ಯಾರಿ ಭಾಷೆಗೆ ಸಂಬಂಧಿಸಿದ, ಇತರ ಭಾಷೆಯ ಕೃತಿಗಳನ್ನು ಖರೀದಿ ಮಾಡುವುದು.


 • ಮಾಹಿತಿ ಕೇಂದ್ರ ನಿರ್ವಹಣೆ
  ಪೋಟೊ ಗ್ಯಾಲರಿ, ಮಾಹಿತಿ ಫಲಕ, ವಿವಿಧ ರೀತಿಯ ಪೋಟೊ ಸಂಗ್ರಹಗಳಿಗೆ ಪೋಟೊಗಳನ್ನು ಮಾಡಿಸಬೇಕಾಗುತ್ತದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

ಯೋಜನೆಗಳು

 • ವಿಶ್ವ ಬ್ಯಾರಿ ಸಮ್ಮೇಳನ
  ವಿಶ್ವದಾದ್ಯಂತ ನೆಲೆಸಿರುವ ಲ್ಲಿ ಭಾಷಾಭಿಮಾನ ಮೂಡಿಸುವಂತೆ ಅವರನ್ನೆಲ್ಲ ಒಟ್ಟುಗೂಡಿಸಿ ಸಾಹಿತ್ಯ ಸಾಂಸ್ಕೃತಿಕವಾಗಿ ವಿಶವ ಬ್ಯಾರಿ ಸಮ್ಮೇಳನವನ್ನು ನಡೆಸುವುದು.


 • ರಾಜ್ಯಾದ್ಯಂತ ಬ್ಯಾರಿ ಭಾಷಾ ಸಾಹಿತ್ಯ ಸಾಂಸ್ಕೃತಿಕ ಜಾಗೃತಿ ಕಾರ್ಯಕ್ರಮ
  ರಾಜ್ಯದ ವಿವಿಧ ವಿಭಾಗದಲ್ಲಿ ಹರಡಿಸುವ ಬ್ಯಾರಿ ಸಮುದಾಯದವರಲ್ಲಿ ಬ್ಯಾರಿ ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವಂತಹ ಬ್ಯಾರಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು.


 • ರಾಜ್ಯಮಟ್ಟದ ಜಾನಪದ ಸ್ಪರ್ಧೆ
  ಬ್ಯಾರಿ ಜನಾಂಗದ ಸಂಸ್ಕೃತಿ ಬಿಂಬಿಸುವಂತಹ ದಫ್ ಕುಣಿತ, ಒಪ್ಪನ ಪಾಟ್, ಕೋಲ್ಕಲಿ, ಮೆಹೆಂದಿ ಮುಂತಾದ ಕಲೆಗಳ ಬಗ್ಗೆ ಪ್ರೋತ್ಸಾಹ ಮೂಡಿಸುವಂತಹ ಜಾನಪದ ಸ್ಪರ್ಧೆಗಳನ್ನು ನಡೆಸುವುದು.


 • ಮಕ್ಕಳಲ್ಲಿ ಬ್ಯಾರಿ ಭಾಷಾಭಿಮಾನ ಮೂಡಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮ
  ಇತ್ತಿಚಿನ ದಿನಗಳಲ್ಲಿ ಆಂಗ್ಲ ಭಾಷೆಯ ವ್ಯಾಮೋಹದಿಂದ ಭಾಷೆಗಳು ಅಳಿದು ಹೋಗುತ್ತಿರುವ ಹಿನ್ನಲೆಯಲ್ಲಿ ಬ್ಯಾರಿ ಭಾಷೆಯ ಮೇಲೆ ಮಕ್ಕಳಿಗೆ ಅಭಿಮಾನ ಮೂಡಲು ಸಹಾಯವಾಗುವಂತಹ ಜಿಲ್ಲಾ ಮಟ್ಟದ ಬ್ಯಾರಿ ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳುವುದು. ಮಾತ್ರವಲ್ಲದೆ ಸಾಹಿತ್ಯ ಆಸಕ್ತಿ ಮೂಡಿಸುವಂತಹ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ನಡೆಸುವುದು.


 • ಪ್ರತಿಭಾವಂತ ಬ್ಯಾರಿ ಮಕ್ಕಳಿಗೆ ಪ್ರೊತ್ಸಾಹ
  ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಪದವಿಯಲ್ಲಿ ರಾåಂಕ್, ಡಿಸ್ಟಿಂಕ್ಷನ್, ಪ್ರಥಮ ದರ್ಜೆ ಮೇಲ್ಪಟ್ಟು ಉತ್ತೀರ್ಣರಾದ ಬ್ಯಾರಿ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಆಸಕ್ತಿ ಮೂಡಿಸುವಂತಹ, ಅವರಲ್ಲಿ ಮಾತೃ ಭಾಷಾಭಿಮಾನ ಮೂಡಿಸುವಂತಹ, ಅವರ ಮುಂದಿನ ಶಿಕ್ಷಣಕ್ಕೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
 
ಇತ್ತೀಚಿನ ಪ್ರಕಟಣೆಗಳು
beary saahithya academy mangalore
beary book beary book
beary mangalore
beary saahithya academy mangalore
beary mangalore
ಬ್ಯಾರಿ ಚರಿತ್ರೆ
ಬ್ಯಾರಿಗಳು ತುಳುನಾಡು ಎಂದು ಹಿಂದೆ ಕರೆಯಲಾಗುತ್ತಿದ್ದ ಕರ್ನಾಟಕದ ಈಗಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಸವಾಗಿರುವ ಒಂದು ಮುಸ್ಲಿಮ್ ಜನಾಂಗ. ಅವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಒಂದು ಸಾಮಾಜಿಕ ಪಂಗಡ. ಬ್ಯಾರಿಗಳಿಗೆ ಕೊಂಕಣ ತೀರದ ನವಾಯತರು . ಇನ್ನೂ ಓದಿ »
beary saahithya academy mangalore
beary mangalore
ಗ್ಯಾಲರಿ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
beary saahithya academy mangalore
beary mangalore
ಬ್ಯಾರಿ ಸಾಹಿತ್ಯ ಅಕಾಡೆಮಿ ಚಟುವಟಿಕೆಗಳು
beary academy Activity ಪ್ರಶಸ್ತಿ ಪ್ರದಾನ beary academy Activity ಕವಿ ಸಮ್ಮೇಳನೆ
beary academy Activity ಛಾಯಚಿತ್ರಗಳ ಸಂಗ್ರಹ beary academy Activity ಹೊರನಾಡು ಕಾರ್ಯಕ್ರಮ
beary academy Activity ಸಾಂಸ್ಕೃತಿಕ ಕಾರ್ಯಕ್ರಮ beary academy Activity ಕಮ್ಮಟಗಳು
  ಇನ್ನೂ ಓದಿ »  
beary saahithya academy mangalore